ಅಂಬೇಡ್ಕರ ದಿಮಂತ ಅರ್ಥಶಾಸ್ತ್ರಜ್ಞ: ಜೋಕಿ

0
24
loading...

ಮೂಡಲಗಿ: ಭಾರತಕ್ಕೆ ಕಾಮದೇನು, ಕಲ್ಪವೃಕ್ಷವಾದಂತಹ ಮಹಾನ್ ಪುರುಷನ ಜನ್ಮ ದಿನವನ್ನು ಸ್ವಂತ ಹಿತಾಸಕ್ತಿಗೆ ದ್ವೇಷಕ್ಕೆ ಬಳಸಿಕೊಳ್ಳದೆ ಎಲ್ಲರೂ ಒಗ್ಗಟ್ಟಾಗಿ ಹರ್ಷದಿಂದ ಆಚರಣೆ ಮಾಡಬೇಕು ಎಂದು ಹಿರಿಯ ನ್ಯಾಯವಾದಿ ಯು.ಆರ್.ಜೋಕಿ ಹೇಳಿದರು.
ಸ್ಥಳೀಯ ದಿವಾನಿ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ ಡಾ.ಬಿ.ಆರ್.ಅಂಬೇಡ್ಕರರ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಅಂಬೇಡ್ಕರ ಒಬ್ಬ ದಿಮಂತ ಅರ್ಥ ಶಾಸ್ತ್ರಜ್ಞ, ರಾಜಕೀಯ,ಸಾಮಾಜಿಕ ಸುಧಾರಣೆಗಳ ಹರಿಕಾರ,ಅಸ್ಪøಶ್ಯತೆಯ ನಿವಾರಣೆಗಾಗಿ ಹೋರಾಡಿದಂತಹ ಮಹಾನ್ ವ್ಯಕ್ತಿ ಎಂದು ಹೇಳಿದರು.

ನ್ಯಾಯವಾದಿ ಲಕ್ಷ್ಮಣ ವಾಯ್.ಅಡಿಹುಡಿ ಮಾತನಾಡಿ, ಜಗತ್ತು ವಿಶಾಲವಾಗಿದ್ದು ಮನಸ್ಸು ಸೀಮಿತವಾಗುತ್ತಿದೆ. ಮಹಾನ್ ಪುರುಷರು ಕೇವಲ ಜಯಂತಿಗೆ ಮತ್ತು ಜಾತಿಗೆ ಮಾತ್ರ ಎನ್ನುವಂತಹ ಈ ದಿನಮಾನಗಳಲ್ಲಿ ನೆಪ ಮಾತ್ರಕ್ಕೆ ಜಯಂತಿ ಆಚರಣೆ ಮಾಡುವುದಕ್ಕಿಂತ ಮಹಾನ್ ವ್ಯಕ್ತಿಗಳ ತತ್ವ ಆದರ್ಶಗಳನ್ನು ತಿಳಿದುಕೊಂಡು ಅವುಗಳನ್ನು ಪಾಲನೆ ಮಾಡುವತ್ತ ಎಲ್ಲರೂ ಗಮನ ಹರಿಸಬೇಕು ಎಂದು ಹೇಳಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಎಲ್.ಹುಣಶ್ಯಾಳ, ಸಹಕಾರ್ಯದರ್ಶಿ ಆರ್.ಎಂ.ಐಹೊಳಿ, ಖಜಾಂಚಿ ಎ.ಎಸ್.ಕೌಜಲಗಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಹಿರಿಯ ನ್ಯಾಯವಾದಿಗಳಾದ ಆರ್.ಆರ್.ಬಾಗೋಜಿ, ಎಂ.ಐ.ಬಡಿಗೇರ, ಎಸ್.ಎಸ್.ಗೋಡಿಗೌಡರ, ಪಿ.ಎನ್.ಮನ್ನಿಕೇರಿ, ಎಸ್.ವಾಯ್,ಸಣ್ಣಕ್ಕಿ, ವಿ.ಕೆ.ಪಾಟೀಲ, ಗೋಕಾಕದ ಹಿರಿಯ ನ್ಯಾಯವಾದಿ ಆರ್.ಎಸ್.ನಿಡಸೋಸಿ ಉಪಸ್ಥಿತರಿದ್ದರು.

loading...