ಅಕ್ರಮವಾಗಿ ಸಾಗಿಸುತ್ತಿದ್ದ ಗೊವಾ ಮದ್ಯ ಜಪ್ತಿ

0
43
loading...

ಸಂಕೇಶ್ವರ 13:ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಟೋಯಟೊ ಪಾರ್ಚೂನರ್ ಕಾರು ಸೇರಿ ಓರ್ವ ವ್ಯಕ್ತಿಯನ್ನು ಸಂಕೇಶ್ವರ ಅಬಕಾರಿ ಪೊಲೀಸ್‍ರು ಶುಕ್ರವಾರ ಬುಗಟಿ ಆಲೂರ್ ಚೆಕ್ ಪೋಸ್ಟನಲ್ಲಿ ಬಂಧಿಸಿದ್ದಾರೆ. ಶುಕ್ರವಾರ ಬುಗಟಿ ಆಲೂರ ಚೆಕ್ ಪೋಸ್ಟನಲ್ಲಿ ವಾಹನ ತಪಾಸಣೆ ವೇಳೆ ಎಂಎಚ್:46 ಬಿಎ:7071 ಪಾರ್ಚುನರ್ ಕಾರಿನಲ್ಲಿದ್ದ ಸುಮಾರು 25000 ಸಾವಿರ ಮಾಲ್ಯದ 24 ಲೀಟರ್ ಗೊವಾ ಮದ್ಯ ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ರಾಹುಲ ಸುಭಾಷ ಕಾಡು (31) ಎಂಬ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ದಾಳಿ ಸಂದರ್ಭದಲ್ಲಿ ಚಿಕ್ಕೋಡಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಸಂಗನಗೌಡ ಹೊಸಳ್ಳಿ, ಚಿಕ್ಕೋಡಿ ಅಬಕಾರಿ ನಿರೀಕ್ಷಕ ಜ್ಯೋತಿ ಹುಕ್ಕೇರಿ, ಅಬಕಾರಿ ನಿರೀಕ್ಷಕ ಹನುಮಂತಪ್ಪ ಡಿ.ಎನ್ ಹಾಗೂ ಸಿಬ್ಬಂದಿಗಳಾದ ಕುಮಾರ ಸ್ವಾಮಿ, ಟಿ.ಡಿ.ಗಾರಡೆ, ಡಿ.ಬಸವರಾಜ, ಹಿರೇಮಠ, ಹಸನಸಾಬ್ ನದಾಫ, ಎಂ.ಎಂ.ರಾವಣ್ಣಗೊಳ ಇದ್ದರು.

loading...