ಅಗ್ನಿ ಶ್ಯಾಮಕ ಸಪ್ತಾಹ ನಿಮಿತ್ತ ಅಣಕು ಪ್ರದರ್ಶನ

0
10
loading...

ರಬಕವಿ-ಬನಹಟ್ಟಿ: ಅಗ್ನಿ ಶ್ಯಾಮಕ ದಳದಿಂದ ಏ.14 ರಿಂದ 20ನೇ ತಾರೀಖಿನವರೆಗೆ ಅಗ್ನಿ ಶ್ಯಾಮಕ ಸಪ್ತಾಹ ಕಾರ್ಯಕ್ರಮ ಜರುಗಲಿದೆ ಎಂದು ಪ್ರಮುಖ ಅಧಿಕಾರಿ ಮೊಹ್ಮದ್ ಖಾಜಾ ತಿಳಿಸಿದರು.
ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಅಗ್ನಿ ಶ್ಯಾಮಕ ವಾಹನಗಳ ಜೊತೆಗೆ ಸಿಬ್ಬಂದಿಗಳಿಂದ ಜಾಗೃತಿ ಕಾರ್ಯಕ್ರಮದ ಜೊತೆಗೆ ಬೆಂಕಿ ಸಂದರ್ಭ ಮುಂಜಾಗ್ರತಾ ಕಾರ್ಯಕ್ರಮ ಹಾಗು ನಿತ್ಯ ಬೆಂಕಿಯೊಂದಿಗೆ ಕಾರ್ಯನಿರ್ವಹಿಸುವ ವಸ್ತುಗಳೊಂದಿಗೆ ಯಾವ ರೀತಿ ರಕ್ಷಣೆಯಿಂದಿರಬೇಕು. ಹಾಗು ಮನೆಗಳಲ್ಲಿನ ಸಿಲಿಂಡರ್ ಸೇರಿದಂತೆ ಇತರೆ ವಸ್ತುಗಳ ಬಳಕೆಯ ಬಗ್ಗೆ ಮಾಹಿತಿ ನೀಡುವದರೊಂದಿಗೆ ಪ್ರಮುಖ ಸ್ಥಳಗಳಲ್ಲಿ ಅಗ್ನಿ ಶ್ಯಾಮಕ ಸಿಬ್ಬಂದಿಗಳಿಂದ ಬೆಂಕಿ ಸಂದರ್ಭ ರಕ್ಷಣೆಯ ಬಗ್ಗೆ ಅಣಕು ಪ್ರದರ್ಶನ ನಡೆಸಿದರು.

ಇದೇ ಸಂದರ್ಭ ಬಸವರಾಜ ಚೌಗಲಾ, ಜಾವಿದ ಸೈಯದ್, ಎಂ.ಚೌಗಲಾ, ಟಿ.ಬಿ. ಪರೀಠ, ಮಾರುತಿ ರಾಠೋಡ, ಎಂ.ಉದಪುಡಿ, ಕೆ.ಎಫ್. ಕಾತಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...