ಅಡವಿಸಿದ್ದೇಶ್ವರ ದರ್ಶನ: ಪ್ರಚಾರ ಆರಂಭ

0
28
loading...

ಗೋಕಾಕ: ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿ ಅಶೋಕ ಪೂಜಾರಿ ಅಂಕಲಗಿಯ ಸುಕ್ಷೇತ್ರ ಅಡವಿಸಿದ್ದೇಶ್ವರ ಮಠದಲ್ಲಿ ಅಡವಿಸಿದ್ದೇಶ್ವರ ದೇವರಿಗೆ ಪೂಜೆಸಲ್ಲಿಸಿ ಪೂಜ್ಯರ ಆಶೀರ್ವಾದ ಪಡೆದು ಚುನಾವಣಾ ಪ್ರಚಾರವನ್ನು ಕೈಗೊಂಡರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಅಡಿವೆಪ್ಪ ಮರಲಿಂಗನ್ನವರ ಮಾತನಾಡಿ, ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 2 ದಶಕಗಳಿಂದ ಕುಂದರನಾಡಿನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗಿರುವುದಿಲ್ಲ. ಗೋಕಾಕ ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು, 2018 ರ ವಿಧಾಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷವು ಕರ್ನಾಟಕದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಗೋಕಾಕ ವಿಧಾನಸಭಾ ಕ್ಷೇತ್ರ ಅದರಲ್ಲಿಯೂ ಕುಂದರನಾಡಿನ ಭಾಗದಲ್ಲಿ ಭಾರತೀಯ ಜನತಾ ಪಕ್ಷ ಹೆಚ್ಚು ಮತಗಳಿಂದ ಮುನ್ನಡೆಯನ್ನು ಸಾಧಿಸಲಿದ್ದು, ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಅಶೋಕ ಪೂಜಾರಿ ಚುನಾವಣೆಯಲ್ಲಿ ಆಯ್ಕೆಯಾಗಿ ಶಾಸಕರಾಗುತ್ತಾರೆ ಎಂದು ಆತ್ಮವಿಶ್ವಾಸದಿಂದ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಬಿ.ಜೆ.ಪಿ. ಪಕ್ಷದ ಮುಖಂಡರುಗಳಾದ ಬಸನಗೌಡ ನಿರ್ವಾಣಿ, ರಾಜುಗೌಡ ನಿರ್ವಾಣಿ, ಶಾಮಾನಂದ ಪೂಜಾರಿ, ಕಾಡಪ್ಪ ಪಾಟೀಲ, ಬಾಳಗೌಡ ಪಾಟೀಲ, ಮಾರುತಿ ಪೂಜೇರಿ, ಮಹೇಶ ಪೂಜೇರಿ, ಲಾಲಸಾಬ ದೇಸಾಯಿ, ಬಸವರಾಜ ಹೊಸಮನಿ, ಸುಭಾಷ ಕೌಲಗಿ, ನಿಂಗಪ್ಪ ಜರಳಿ, ಪ್ರೇಮಾ ಚಿಕ್ಕೋಡಿ, ಶಾಂತವ್ವಾ ಸಂಸುದ್ದಿ, ಚನ್ನಬಸು ರುದ್ರಾಪೂರ, ಪ್ರಕಾಶ ಬಾಗೋಜಿ, ಮಹೇಶಗೌಡ ಪಾಟೀಲ, ಲಕ್ಷ್ಮಣ ನಾರಿ, ಬಸಲಿಂಗಪ್ಪ ಸಂಸುದ್ದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...