ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ: ವಿವಿಧ ಸಂಘಟನೆಗಳಿಂದ ಆಗ್ರಹ

0
25
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ದೇಶದಲ್ಲಿ ಮಹಿಳೆಯರ ಮೇಲೆ ದಿನನಿತ್ಯ ಅತ್ಯಾಚಾರ ಕೃತ್ಯಗಳು ನಡೆಯುತ್ತಿವೆ ಆದ್ದರಿಂದ ಮಹಿಳೆಯರಿಗೆ ಸಾಮಾಜಿಕ ನ್ಯಾಯ ಹಾಗೂ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಇಲ್ಲಿನ ಅಂಜುಮನ ಇಸ್ಲಾಂ ಕಮಿಟಿ, ಆಮಿಯತ್‌ ಉಲ್ಮಾ ಎ ಹಿಂದ, ಜ್ಯೆ ಭೀಮ ಯುವ ಸೇನೆ, ಜೈ ಜನ್ಮ ಭೂಮಿ ಸಂಘಟನೆ ಸೇರಿದಂತೆ ಕನ್ನಡಪರ ಸಂಘಟನೆಗಳ ಸದಸ್ಯರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ನಡೆಯುವ ಅತ್ಯಾಚಾರಗಳಿಂದ ತುಂಬಾ ಅಶಾಂತಿ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದ್ದು ತುಂಬಾ ಕಳವಳಕಾರಿ ಸಂಗತಿಯಾಗಿದೆ. ಉತ್ತರ ಪ್ರದೇಶದ ಉನ್ನಾವ ಹಾಗೂ ಜುಮ್ಮು ಕಾಶ್ಮೀರ ರಾಜ್ಯದ ಕಟುವಾದ ಎಂಟು ವಯಸ್ಸಿನ ಮುಗ್ಧ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆಗ್ಯೆದಿದ್ದಾರೆ.
ಆದರೆ ರಾಜಕೀಯ ಪಕ್ಷಗಳೂ ಮಹಿಳೆಯರ ಹಾಗೂ ಬಾಲಕಿಯರ ಅತ್ಯಾಚಾರಗಳನ್ನು ಸಹ ತಮ್ಮ ರಾಜಕೀಯ ದೃಷ್ಠಿಕೋನದಿಂದ ನೋಡುವ ಕೆಟ್ಟ ಸಂಸ್ಕೃತಿ ಬೆಳೆಸಿಕೊಂಡಿದ್ದಾರೆ. ಭಾರತದಲ್ಲಿ ನಡೆಯುವ ಇಂತಹ ಕೆಟ್ಟ ಸಂಸ್ಕೃತಿಯಲ್ಲಿ ಪೋಲೀಸ್‌ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಭಾಗಿಯಾಗಿರುವುದು ಸಮಾಜಕ್ಕೆ ತುಂಬಾ ಕಳವಳಕಾರಿ ಸಂಗತಿಯಾಗಿದೆ. ಆಯಾ ರಾಜ್ಯದ ಮಂತ್ರಿಗಳು ಹಾಗೂ ರಾಜಕೀಯ ಪಕ್ಷಗಳು ಅತ್ಯಾಚಾರಿಗಳ ಪರವಾಗಿ ಬೀದಿಗಿಳಿಯುತ್ತಿದ್ದು ನೋಡಿದರೆ ಮಹಿಳೆಯರಿಗೆ ಹಾಗೂ ಬಾಲಕಿಯರಿಗೆ ನಾವು ಹೇಗೆ ನ್ಯಾಯ ಕೊಡಿಸುವುದು ಎಂದು ಯೋಚಿಸುವಂತಾಗಿದೆ.
ಇದೇ ತರಹದ ವಾತಾವರಣ ಇದ್ದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಬೇಕಾದ ಅನಿವಾರ್ಯತೆ ಆಗಬಾರದೆಂದು ಕೇಳಿಕೊಳ್ಳುತ್ತೆವೆ, ಗೌರವಾನ್ವಿತಗಳಾದ ತಾವುಗಳು ಆತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಕೊಡಿಸಬೇಕೆಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಾಮೀಯಾ ಮಸಿದಿ ಮೌಲಾನ ಜಹೂರಅಹ್ಮದ ಖಾಜಿ, ಅಂಜುಮನ್‌ ಇಸ್ಲಾಂ ಕಮಿಟಿ ಅಧ್ಯಕ್ಷ ಎ.ಎ.ಖಾಜಿ, ಜಿ.ಪ. ಸದಸ್ಯ ಜಹೂರ ಹಾಜಿ, ಮಹ್ಮದಶಫಿ ಬೆಣ್ಣಿ, ಪುರಸಭೆ ಅಧ್ಯಕ್ಷ ಅಶೋಕ ಸೂಳಿಬಾವಿ, ದಾಮಣ್ಣಾ ದೊಂಡಮನಿ, ಲಕ್ಷ್ಮಣ್ಣ ರಾಯಬಾಗ, ಹುಶೇನಬಾಷಾ ಮೊರಬ, ಬಸವರಾಜ ಮಾದರ, ಬಸೀರಹ್ಮದ ರೋಣದ, ಬಸೀರ್‌ ಬೈರಾಕÀದಾರ. ಬಾಬು ಹುದ್ದಾರ ಸೇರಿದಂತೆ ಇತರ ಮುಖಂಡರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

loading...