ಅಧಿಕಾರಕ್ಕೆ ಬಂದರೆ 24 ಘಂಟೆಯಲ್ಲೇ ರೈತರ ಸಾಲ ಮನ್ನಾ: ಎಚ್‌ಡಿಕೆ

0
31
loading...

ಯಲಬುರ್ಗಾ: ರಾಜ್ಯದಲ್ಲಿ ಜಾತ್ಯತೀತ ಜನತಾದಳ ಪಕ್ಷ ಅಧಿಕಾರಕ್ಕೆ ಬಂದ 24 ಘಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದೆಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
ಯಲಬುರ್ಗಾ ಪಟ್ಟಣದ ಬಯಲು ರಂಗ ಮಂದಿರ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ವಿಕಾಸ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ.ಶಿಕ್ಷಣ ಪಡೆದ ಯುವ ಜನತೆಗೆ ಉದ್ಯೋಗ ಸಿಗುತ್ತಿಲ್ಲ. ಆಕಾಲಿಕ ಮಳೆಯಿಂದ ರೈತರ ಬದುಕು ಬವಣೆಗೆ ಸಿಲುಕಿದೆ.ಬಿಜೆಪಿ.ಕಾಂಗ್ರೇಸ್‌ ಪಕ್ಷದಿಂದಪರಿಹಾರವಾಗುವುದಿಲ್ಲ.3750ಕ್ಕೂ ಹೆಚ್ಚು ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿದ್ದರಾಮಯ್ಯ ಸಾಲಮನ್ನ ಘೋಷಣೆ ಮಾಡಿದ್ದರು. ಆದರೆ ಅದು ರೈತರಿಗೆ ಸಿಕ್ಕಿಲ್ಲ.ಕಾಂಗ್ರೇಸ್‌ ಬಿಜೆಪಿ ಪಕ್ಷಗಳು ರೈರಿಗೆ, ಜನರಿಗೆ ಮೋಸ ಮಾಡುತ್ತಿವೆ.ಕೇಂದ್ರ ಸರಕಾರ ಕಾರ್ಪೋರೇಟ್‌ ಕಂಪನಿಗಳ ಸಾಲಮನ್ನ ಮಾಡುತ್ತದೆ.ಆದರೆ ರೈತರ ಸಾಲಮನ್ನ ಮಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಅದ್ದರಿಂದ ನಾಡಿನ ಪ್ರಜ್ಞಾವಂತ ಮತದಾರರು ರೈತರ ಪರವಾಗಿ ಕೆಲಸ ಮಾಡುವ ಪಕ್ಷಕ್ಕೆ ಆಶೀರ್ವದಿಸಿ,ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರ ಸಾಲ ರಾಷ್ಟ್ರೀಕೃತ,ಗ್ರಾಮೀಣ ಬ್ಯಾಂಕ್‌ ಸೇರಿದಂತೆ ಎಲ್ಲಾ ಬ್ಯಾಂಕಗಳ ಸಾಲಮನ್ನಾ ಮಡುತ್ತೇನೆ.ಅಧಿಕಾರಕ್ಕೆ ಬಂದರೆ ನಾನು ಹಲವಾರು ಕನಸ್ಸು ಕಂಡಿದ್ದೇನೆ.ಅದನ್ನು ನನಸು ಮಾಡಲು ರಾಷ್ಟ್ರೀಯ ಪಕ್ಷಗಳು ಬಿಡುತ್ತಿಲ್ಲ.ನಾನು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಮಡಿದ್ದೇನೆ.ಅಲ್ಲಿಯ ರೈತರ ಮನೆಯಲ್ಲಿ ಊಟ ಸೇವನೆ ಮಾಡಿದ್ದೇನೆ.
ರೈತರ ಕಷ್ಟ ಬವಣೆಗಳನ್ನು ಆಲಿಸಿದ್ದೆನೆ. ರೈತರ ಸಾಲಮನ್ನ ಮಾಡಿದೆ.ಆತ್ಮಹತ್ಯೆ ಮಾಡಿಕೊಂಡ ರೈತರ ಮನೆ ಮನೆಗೆ ಭೇಟಿ ಮಾಡಿ ಸಾಲಮನ್ನ ಮಾಡಿದೆ ಎಂದಾ ಅವರು,ಮಗು ಹುಟ್ಟುವ ಮೊದಲು ಮೂರು ತಿಂಗಳು ಹಾಗೂ ಹುಟ್ಟಿದ ಮೂರು ತಿಂಗಳವರೆಗೆ ಆರು ಸಾವಿರ ಮಾಸಿಕ ವೇತನ ನೀಡಲಾಗುವುದು.ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು 4300 ಕೋಟಿ ರೂ.ಸಾಲ ಮನ್ನ ಮಾಡುವ ಮೂಲಕ ಹೆಚ್ಚಿನ ಸಾಲ ನೀಡಲಾಗುವುದು.ರಾಜ್ಯ ಸರ್ಕಾರದ ವಸತಿ ಸಚಿವರು,ಜಲಸಂಪನ್ಮೂಲ ಸಚಿವರು ಲಿಪ್‌ ಸ್ಟಿಕ್‌ ಹಚ್ಚಿಕೊಂಡು ಜನರ ದುಡ್ಡಿನಿಂದ ಜಾಹಿರಾತುಗಳಲ್ಲಿ ಮಿಂಚುತ್ತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಅನ್ನಭಾಗ್ಯ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷಿಯ ಯೋಜನೆ ಏನಲ್ಲ.ಈ ಯೋಜನೆಗೆ ಕೇಂದ್ರ ಸರಕಾರ ಕೂಡಾ ಅನುದಾನ ನೀಡುತ್ತಿದೆ. ಈ ಯೋಜನೆ ಈ ಹಿಂದೆ ಜನತಾ ಪರಿವಾರ ಪಕ್ಷ ಅಧಿಕಾರದ ಅವಧಿಯಲ್ಲಿ ಈ ಯೋಜನೆ ಜಾರಿಯಲ್ಲಿತ್ತು ಎಂದರು. ನಮ್ಮ ಪಕ್ಷದ ವತಿಯಿಂದ ನಿಜವಾದ ರೈತನಾಗಿರುವ ವೀರನಗೌಡ ಪೋಲೀಸ್‌ ಪಾಟೀಲ್‌ ಅವರನ್ನು ಗೆಲ್ಲಿಸುವ ಮೂಲಕ ಆಶೀರ್ವದಿಸಿ,ನಿಮ್ಮ ಸೇವಕನಾಗಿ ಕೆಲಸ ಮಾಡಲು ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡರು.
ಮಾಜಿ ಸಚಿವ ಬಂಡೆಪ್ಪ ಕಾಶಂಪೂರ, ವಿಧಾನ ಪರಿಷತ್‌ ಸದಸ್ಯ ಕೆ.ಪಿ.ಶ್ರೀಕಾಂತಗೌಡ, ಮಾಜಿ ಸದಸ್ಯ ಎಚ್‌.ಆರ್‌.ಶ್ರೀನಾಥ, ಸಿ.ಎಂ.ನಾಗರಾಜ, ಜೆಡಿಎಸ್‌ ಪಕ್ಷದ ನಿಯೋಜಿತ ಅಭ್ಯರ್ಥಿ ವೀರನಗೌಡ ಪೋಲೀಸ್‌ ಪಾಟೀಲ್‌,ಸೇರಿದಂತೆ ಮತ್ತಿತರರು ಮಾತನಾಡಿದರು.
ಸಮಾರಂಭದಲ್ಲಿ ಎಚ್‌.ಸಿ.ನೀರಾವರಿ, ಕರಿಯಣ್ಣ ಸಂಗಟಿ, ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್‌,ಸಿ.ಎಂ.ಹಿರೇಮಠ.ನಿಧಿ ಚಕ್ರವರ್ತಿ, ಪ್ರದೀಪಗೌಡ ಪಾಟೀಲ್‌, ವಿಜಯಕುಮಾರ ಕರಂಡಿ, ಶರಣಪ್ಪ ರಾಂಪೂರು, ಬಸವರಾಜ ಗುಳಗುಳ್ಳಿ, ಡಿ.ಕೆ.ಪರಶುರಾಮ ಚಲವಾದಿ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಜೆಡಿಎಸ್‌ ಪಕ್ಷದ ಯುವ ಮುಖಂಡ ಅಂದಾನಗೌಡ ಪೋಲೀಸ್‌ ಪಾಟೀಲ್‌ ಪ್ರಾಸ್ತವಿಕವಾಗಿ ಮಾತನಾಡಿದರು. ಪಕ್ಷದ ತಾಲೂಕಾಧ್ಯಕ್ಷ ಶರಣಪ್ಪ ಕರಂಡಿ ನಿರೂಪಿಸಿ, ಸ್ವಾಗತಿಸಿದರು.

loading...