ಅಧಿಕಾರಿಗಳ ನಿರ್ಲಕ್ಷ್ಯ ; ಚರಂಡಿ ನೀರು ರಸ್ತೆಗೆ

0
12
loading...

ಮುರಾರಿ ಭಜಂತ್ರಿ

ಕುಕನೂರ: ಐತಿಹಾಸಿಕ ಕುಂತಳಪುರ ಕುಕನೂರು ಗ್ರಾಮ ಪಂಚಾಯಿತಿಯಾಗಿ ತದ ನಂತರ ಪಟ್ಟಣ ಪಂಚಾಯತಿಯಾಗಿ ಈಗ ಜನೆವರಿ 26 ರಂದು ವಿಜೃಭಣೆಯಿಂದ ನೂತನ ಕುಕನೂರ ತಾಲ್ಲೂಕಾಗಿ ಘೋಷೆಣೆಯಾಗಿದೆ .ಸಾರ್ವಜನಜಕರು ನೂರಾರು ಆಸೆಯನ್ನು ಇಟ್ಟಕೂಂಡು ಬಹಳ ಅಭಿವೃದ್ದಿ ಕೆಲಸವಾಗುವುದು ಎಂದು ತಿಳದಿದ್ದ ಜನರಿಗೆ ನೀರಾಶೆಯಾಗಿದೆ.
ಪಟ್ಟಣದ ಕೆಲ ಒಂದು ವಾರ್ಡಿನಲ್ಲಿ ಸದ್ಯ ಚರಂಡಿಯ ನೀರು ಸುಗಮವಾಗಿ ಹರಿಯದೆ ನೀರು ಸಂಗ್ರಹವಾಗುತ್ತಿದ್ದು ಸ್ಥಳೀಯ ನಿವಾಸಿಗಳು ಚರಂಡಿ ವಾಸನೆ ತಾಳಲಾರದೆ ಅಬ್ಬಬ್ಬಾ ಗಲೀಜು ಎಂದು ಮೂಗು ಮುಚ್ಚಿ ಕೂಂಡು ತಿರುಗಾಡುವ ಪರಸ್ಥಿತಿ ಬಂದಿದೆ. ಪಟ್ಟಣಕ್ಕೆ ಸಂಬಂದಿಸಿದ ಅಧಿಕಾರಿಗಳು ಕುರುಡುತನ ತೋರುತ್ತಿದ್ದಾರೆÉ.

ಸದ್ಯ ಪಟ್ಟಣದ 2ನೇ ವಾರ್ಡಿನಲ್ಲಿ ಇರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವಸತಿ ನಿಲಯದ ಪಕ್ಕದಲ್ಲಿ ದೂಡ್ಡ ಚರಂಡಿಯಿದೆ ಈ ಚರಂಡಿ ಮೂಲಕ ಕಾಲೋನಿಯ ಎಲ್ಲಾ ಚರಂಡಿಗಳ ನೀರು ಹರಿದು ಹೋಗುತ್ತಿತ್ತು ಆದರೆ ನೀರು ಸುಗಮವಾಗಿ ಹರಿಯದೆ ನಿಂತಳೆ ನಿಂತು ಜನರಿಗೆ ನಾನಾ ಸಮಸ್ಯೆಗಳಿಂದ ಬಳಲುವಂತಾಗಿದೆ.
ಚರಂಡಿ ನೀರು ಸಂಗ್ರಹವಾಗಿ ಹಸಿರು ಬಣ್ಣಕ್ಕೆ ತಿರುಗುತ್ತಿದ್ದು, ಚರಂಡಿಯಲ್ಲಿ ಸತ್ತ ಪ್ರಾಣಿಗಳನ್ನು ತಂದು ಹಾಕುತ್ತಿದ್ದಾರೆ ಇದರಿಂದ ಸಾಂಕ್ರಾಮಿಕ ರೋಗ ಹರಡುವ ಬೀತಿಯಲ್ಲಿ ನಿವಾಸಿಗಳು ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ನಿತ್ಯ ಆತಂಕದಲ್ಲಿ ಬದುಕುವ ಪರಿÀಸ್ಥಿತಿ ನಿರ್ಮಾಣವಾಗಿದೆ.

ಇದೆ ರೀತಿ ಪಟ್ಟಣದ ಗದಗ ರಸ್ತೆಯಲ್ಲಿ ಬರುವ ಕೋಳಿಪೇಟಿಯಿಂದ ಅಂಬೆಡ್ಕೇರ ವೃತದ ವರಗೆ ಚರಂಡಿ ನಿರ್ಮಾಣವಾಗುತ್ತಿದೆ ಯಾವುದೇ ಮುಂದಾಲೊಚನೆ ಇಲ್ಲದೆ ಚರಂಡಿ ನಿರ್ಮಿಸಿದ್ದಾರೆ. ನೀರು ಹರಿಯದೆ ಚರಂಡಿಯಲ್ಲಿ ನಿಂತಿವೆ, ಚರಂಡಿಗೆ ಹೂಂದಿಕೂಂಡು ಇರುವ ಮನೆಯವರ ಪರಸ್ಥಿತಿ ಹೇಳತ್ತಿರದ್ದಾ ಗಿದೆ,ಪಟ್ಟಣದ ಬಹುತೇಕ ಕಾಲೋನಿಗಳಲ್ಲಿ ಇದೆ ಪರಸ್ಥಿತಿ ಕಂಡುಬರುತ್ತದೆ, ಪಟ್ಟಣ ಪಂಚಾಯಿತಿ ಸದಸ್ಯರು ಆರೋಗ್ಯಧಿಕಾರಿಗಲು ಮತ್ತು ಸಂಬಂದ ಪಟ್ಟ ಅಧಿಕಾರಿಗಳು ಈ ರಸ್ತೆಯ ಮೂಲಕವೇ ಸಂಚರಿಸುತ್ತಿದ್ದು, ಯಾರೂ ಗಮನ ಹರಿಸುತ್ತಿಲ್ಲ. ನೀರು ದಿನದಿಂದ ದಿನಕ್ಕೆ ಕೊಳಚೆ ಆಗುತ್ತಿದ್ದು, ರೋಗದ ಭೀತಿ ನಿವಾಸಿಗಳಲ್ಲಿ ಮೂಢಿದೆ. ಆದಷ್ಟು ಬೇಗ ಈ ಚರಂಡಿ ಸಮಸ್ಯಯನು ನಿವಾರಣೆ ಮಾಡುವರೂ.ಇಲ್ಲವೂ ಕಾದು ನೂಡಬೇಕು ಎಂಬುದು ಅಲ್ಲಿಯ ನಿವಾಸಿಗಳು ವಿದ್ಯಾರ್ಥಿಗಳು. ಮೌನವರಿಸಿದ್ದಾರೆ.

loading...