ಅಧಿಕ ಮತಗಳಿಂದ ಗೆಲುವು ಸಾಧಿಸುವೆ: ಲಮಾಣಿ

0
18
loading...

ಮುಂಡರಗಿ: ಯುವಕರು, ಹಿರಿಯರು, ಹಾಗೂ ಮಹಿಳೆಯರು ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡುತ್ತಿದ್ದು, ಈ ಬಾರಿ 30 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದೇನೆ ಎಂದು ಮಾಜಿ ಶಾಸಕ ಹಾಗೂ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬುಧವಾರ ಸಂಜೆ ನೂತನ ಬಿಜೆಪಿ ಕಾರ್ಯಾಲಯ ಉದ್ಘಾಟನೆ ಹಾಗೂ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಲಿಷ್ಠ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದು, ಅದಕ್ಕೆ ಕರ್ನಾಟಕ ರಾಜ್ಯದ ಜನರು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದರ ಮೂಲಕ ಅವರ ಕೈ ಬಲಪಡಿಸಬೇಕು ಎಂದರು.

ಇದೇ ಏ.20ರಂದು ಬೆಳಗ್ಗೆ ಶಿರಹಟ್ಟಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದು, ಪಕ್ಷದ ಸರ್ವ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಮುಂಡರಗಿ ಪಟ್ಟಣ ಸೇರಿದಂತೆ ನಾಗರಹಳ್ಳಿ, ವಿಠಲಾಪೂರ, ಮುಂಡವಾಡ, ಹೆಸರೂರ, ಬೂದಿಹಾಳ, ಗ್ರಾಮದಿಂದ ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೋರೆದು ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.
ಮುಂಡರಗಿ ಮಂಡಳ ಅಧ್ಯಕ್ಷ ದೇವಪ್ಪ ಕಂಬಳಿ, ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ರವೀಂದ್ರ ಉಪ್ಪಿನಬೇಟಗೇರಿ, ಎಸ್.ವಿ.ಪಾಟೀಲ, ಶ್ರೀಪತಿ ಉಡುಪಿ, ಡಾ.ವೈ.ಎಫ್.ಹಣಜಿ, ಡಾ.ಕುಮಾರಸ್ವಾಮಿ ಹಿರೇಮಠ, ರಜನಿಕಾಂತ ದೇಸಾಯಿ, ಅಂದಪ್ಪ ಉಳ್ಳಾಗಡ್ಡಿ, ಆನಂದಗೌಡ ಪಾಟೀಲ, ರಮೇಶ ಹುಳಕಣ್ಣವರ, ಕೊಟ್ರೇಶ ಬಳ್ಳೋಳ್ಳಿ, ಯಲ್ಲಪ್ಪ ಗಣಾಚಾರಿ, ಮೈಲಾರಪ್ಪ ಕಲಕೇರಿ, ಲಿಂಗರಾಜಗೌಡ ಪಾಟೀಲ, ಶ್ರೀನಿವಾಸ ಅಬ್ಬಿಗೇರಿ, ಫಕೀರಪ್ಪ ಬಳ್ಳಾಇ, ರಂಗಪ್ಪ ಕ್ಯಾದಗಿಹಳ್ಳಿ, ರಜನೀಕಾಂತ ದೇಸಾಯಿ,ಪಿ.ಎಂ.ಪಾಟೀಲ, ವಿರುಪಾಕ್ಷಪ್ಪ ಜೋಗೇರ, ಈರಣ್ಣ ಹೊನ್ನೂರ, ನೀಲಪ್ಪ ಭಂಡಾರಿ, ಅಬ್ದುಲ್‍ಗಾಫರ್ ಜೌರಂಗ,ಮಂಜುನಾಥ ಕಾಗನೂರಮಠ, ದ್ರುವಾ ಹೂಗಾರ, ಮೋಹನ ದೇಸಾಯಿ, ದೊಡ್ಡಬಸಪ್ಪ ಜುಟ್ಲಣ್ಣವರ, ನಿಂಗಪ್ಪ ನಗದ, ದೇವಪ್ಪ ಗುಜ್ಜಲ, ಶ್ರೀಕಾಂತ ತಿಮ್ಮಾಪೂರ, ಪರುಶುರಾಮ ಹಟ್ಟಿ, ಮೈಲಾರಪ್ಪ ಉದಂಡಿ, ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಇದ್ದರು.

loading...