ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

0
29
loading...

ಕನ್ನಡಮ್ಮ ಸುದ್ದಿ-ವಿಜಯಪುರ : ಬಸವನ ಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದಲ್ಲಿ ಯರನಾಳ ಗ್ರಾಮ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಜರುಗಿತು.
ನೂತನ ಅಧ್ಯಕ್ಷರಾಗಿ ನಂದಿಹಾಳ ಗ್ರಾಮದ ರುಕ್ಮವ್ವ ಹಣಮಂತ ಕರಭಂಟನಾಳ ಹಾಗೂ ಉಪಾಧ್ಯಕ್ಷರಾಗಿ ಯರನಾಳ ಗ್ರಾಮದ ಶಿವಾನಂದ ಮುತ್ತಪ್ಪ ಬೀಳಗಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಯರನಾಳ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಕಸ್ತೂರಿ ಸಿ. ಸಜ್ಜನ, ಮಾಜಿ ಉಪಾಧ್ಯಕ್ಷ ಮಲ್ಲಪ್ಪ ದೊಡಮನಿ, ಸದಸ್ಯರಾದ ಶ್ರೀದೇವಿ ಹಿರೇಮಠ, ಸಂಗನಬಸಪ್ಪ ಮಲಕಶೆಟ್ಟಿ, ಬಸವರಾಜ ಕಾಚೆಟ್ಟಿ, ಗುರುರಾಜ ವಾಲಿಕಾರ, ಜ್ಯೋತೆಪ್ಪ ಚಂ. ಮಾಗಿ, ಶರಣಪ್ಪ ನಾಗರಾಳ, ಮಲ್ಲಪ್ಪ ಕಲ್ಮನಿ, ಲಕ್ಷ್ಮೀಬಾಯಿ ಮಾದರ, ಕಲಾವತಿ ದಂಡಿನ, ಬಸವ್ವ ಬಡಿಗೇರ, ಸಾವಿತ್ರಿ ಶಂ. ಹುಕ್ಕೇರಿ ಹಾಗೂ ಚುನಾವಣಾಧಿಕಾರಿಗಳಾದ ಚಂದ್ರಶೇಖರ ಮ್ಯಾಗೇರಿ ಬ. ಬಾಗೇವಾಡಿ, ಪಂಚಾಯತಿ ಅಭಿವೃದ್ದಿ ಅಧಿಕಾರಿ ಡಿ.ಎಮ್. ಬಿಳೇಕುದರಿ ಹಾಗೂ ಯರನಾಳ, ನಂದಿಹಾಳ (ಪಿ.ಯು.) ಹತ್ತರಕಿಹಾಳ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

loading...