ಅನಂತಕುಮಾರ ಭೇಟಿಗೆ ಸೀಗದ ಅತೃಪ್ತ ಬಿಜೆಪಿ ನಾಯಕರು

0
30
loading...

ಕನ್ನಡಮ್ಮ ಸುದ್ದಿ-ಭಟ್ಕಳ: ತಾಲೂಕಿನಲ್ಲಿ ಮುಂಬರುವ ವಿಧಾನ ಸಭಾ ಕ್ಷೇತ್ರದ ಚುನಾವಣೆಯು ರೋಚಕ ತಿರುವನ್ನು ಪಡೆಯುತ್ತಿದ್ದು ಬಿಜೆಪಿ ಟಿಕೇಟ್ ಹಂಚಿಕೆಯಿಂದ ಪಕ್ಷದಲ್ಲಾಗಿರುವ ಡ್ಯಾಮೇಜಿಗೆ ತೇಪೆ ಹಚ್ಚುವ ಕೆಲಸಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಜಯಬೇರಿ ಬಾರಿಸಿಯೆ ಶತಸಿದ್ದ ಎಂದು ಪಣತೊಟ್ಟವರಂತೆ ಬಿ.ಜೆ.ಪಿಯ ಹಿಂದೂ ಪಯರ್ ಬ್ರ್ಯಾಂಡ್ ಎಂದೆ ಖ್ಯಾತಿಯನ್ನು ಪಡೆದಿರುವ ಅನಂತ ಕುಮಾರ ಹೆಗಡೆ ನಿನ್ನೆ ತಾಲೂಕಿನ ಅನೇಕ ಅತೃಪ್ತ ಬಿಜೆಪಿ ನಾಯಕರ ಗುಪ್ತ ಸಭೆಗಳನ್ನು ನಡೆಸಿ ಮಾತುಕತೆ ಮಾಡಿದ್ದಾರೆ. ಬಿ.ಜೆ.ಪಿ ಪಕ್ಷದ ನಾಯಕ ಕಾಸ್ಕರ್ಡ ಭ್ಯಾಂಕಿನ ಉಪಾಧ್ಯಕ್ಷ ಈಶ್ವರ ನಾಯ್ಕ ಇವರ ನಿರ್ಮಾಣ ಹಂತದಲ್ಲಿರು ಮನೆಯಲ್ಲಿ ಸುಮಾರು ಎರಡರಿಂದ ಮೂರು ತಾಸು ಗುಪ್ತ ಸಭೆ ನಡೆಸಿ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಭಟ್ಕಳಕ್ಕೆ ಆಗಮಿಸಿದ ಅವರು ಬಿಜೆಪಿ ನಾಯಕರಾದ ಗೋವಿಂದ ನಾಯ್ಕ ಹಾಗೂ ಜೆ.ಡಿ.ನಾಯ್ಕರನ್ನು ಭೇಟಿ ಮಾಡಲು ಅವರ ಮನೆಗೆ ತೆರಳಿದರಾದರೂ ಅವರು ಇವರ ಭೇಟಿಗೆ ಸೀಗದ ಕಾರಣ ವಾಪಾಸು ಪಕ್ಷದ ಕಛೇರಿಗೆ ತೆರಳಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ.

ಒಟ್ಟಿನಲ್ಲಿ ಓಡೆದ ಮನೆಯಾಗಿರುವ ಬಿಜೆಪಿಯಲ್ಲಿ ಈಗ ಅಸಮಧಾನದ ಹೊಗೆ ಇನ್ನೂ ಆರದೇ ಇರುವುದು ಮುಂದೆ ಪಕ್ಷದ ಗೆಲುವಿಗೆ ಯಾವ ರೀತಿ ಅಡೆತಡೆಯಾಗಬಹುದು ಎಂಬುದನ್ನು ಕಾದುನೋಡಬೇಕಾಗಿದೆ.

loading...