ಅನೀಲ ಬೆನಕೆ ಮೇಲೆ ನೀತಿ ಸಂಹಿತೆ ಉಲ್ಲಂಘನೆ ಆರೋಪ

0
28
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ರಾಜ್ಯ ವಿಧಾನಸಭೆ ಸಮೀಪಸುತ್ತಿದಂತೆ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳಿಂದ ಹೆಣ್ಣು ಮಕ್ಕಳಿಗೆ ಮಾರ್ಚ್ 29ರಂದು ಶ್ರೀನಗರ ಗಾರ್ಡನ್‍ನಲ್ಲಿರುವ ಜೋಪಡಿಪಟ್ಟಿ ನಿವಾಸಿಗಳಿಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಬಿಜೆಪಿ ಮುಖಂಡ ಅನೀಲ ಬೆನಕೆ ಬೆಂಬಲಿಗರು ಹಂಚಿದ್ದಾರೆ ಎಂದು ಜೋಪಡಪಟ್ಟಿಯ ಕೆಲ ನಿವಾಸಿಗಳು ಆರೋಪಿಸಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಬಧುವಾರ ದೂರು ನೀಡಿದ್ದಾರೆ.
ಬಿಜೆಪಿ ಮುಖಂಡ ಹಾಗೂ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅನೀಲ ಬೆನಕೆಯ ಬೆಂಬಲಿಗರು ಅಂತಾ ಹೇಳಿಕೊಂಡು ಬಂದ ಕಾರ್ಯಕರ್ತರು ಪ್ಯಾಡ್‍ಗಳನ್ನು ಕೊಟ್ಟು ಹೋಗಿರೋದಾಗಿ ಮಹಿಳೆಯರು ಆರೋಪಿಸಿದ್ದಾರೆ.
ಮಾಚ್ 29 ರಂದು ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು ಆ ಸಮಯದಲ್ಲಿ ನೀತಿ ಸಂಹಿತೆ ಜಾರಿಯಾಗಿರಲಿಲ್ಲ. ಇದರಿಂದ ಆರೋಪ ಮಾಡುತ್ತಿರುವ ಮಹಿಳೆಯರು ಬಿಜೆಪಿ ಕಾರ್ಯಕರ್ತರು ನೀಡಿದ್ದಾರೆ. ನೀಡುವಾಗ ಹೆಣ್ಣು ಮಕ್ಕಳು ಸಹ ಇದ್ದರು ಎಂದು ತಿಳಿಸಿದ್ದಾರೆ. ಚುನಾವಣೆಗಾಗಿ ಈ ರೀತಿ ಹಂಚುತ್ತಿದ್ದಾರೆ. ಇದಕ್ಕೆ ಕಡಿವಾಣವನ್ನು ಚುನಾವಣಾಧಿಕಾರಿಗಳು ಹಾಕುವಂತೆ ಮನವಿ ಮಾಡಿದ್ದಾರೆ.

ಬಾಕ್ಸ್ ============

ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲು ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಒಂದು ಎನ್‍ಜಿಓನವರು ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಸ್ಲಂ ಪ್ರದೇಶದಲ್ಲಿ ಪ್ಯಾಡ್ ವಿತರಣೆ ಮಾಡಿದ್ದಾರೆ. ಅದಕ್ಕೆ ಧನ ಸಹಾಯ ಮಾಡುವಂತೆ ಕೇಳಿದ್ದರು. ಹೀಗಾಗಿ ನಾನು ಹಣ ಸಹಾಯ ಮಾಡಿದ್ದೇನೆ. ಆದರೆ ಇದಕ್ಕೂ ಚುನಾವಣೆಗೂ ಸಂಬಂಧ ಇಲ್ಲ. ನಾನು ಯಾರನ್ನೂ ಅವಮಾನಿಸುವ ನಿಟ್ಟಿನಲ್ಲಿ ಇದನ್ನು ಮಾಡಿಲ್ಲ.

ಅನೀಲ ಬೆನಕೆ, ಬಿಜೆಪಿ ಮುಖಂಡ

loading...