ಅಪ್ಪಟ ಕನ್ನಡಿಗರಿಗೆ ಟಿಕೆಟ್ ನೀಡಿ: ಭೀಮಾಶಂಕರ

0
28
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಉತ್ತರ, ದಕ್ಷಿಣ ಹಾಗೂ ಗ್ರಾಮೀಣ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ದೇಹದಲ್ಲಿ ಕನ್ನಡಿಗರ ರಕ್ತ ಹರಿಯುತ್ತಿರುವವರಿಗೆ ಬರುವ ವಿಧಾನಸಭೆಯ ಚುನಾವಣೆಯ ಟಿಕೆಟ್ ನೀಡಬೇಕು. ಎಂಇಎಸ್‍ನ ದುರಾಡಳಿತದಿಂದ ಕಣ್ಣು ತಪ್ಪಿಸುವ ರಾಜಕೀಯ ವ್ಯವಸ್ಥೆ ನಿರ್ಮಾಣವಾಗಿದ್ದು, ಸ್ವಾಭಿಮಾನಿಗರ ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಕನ್ನಡಿಗರ ಆಯ್ಕೆ ನಡೆಯಬೇಕಾಗಿದೆ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ತಿಳಿಸಿದರು.

ಅವರು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಪಕ್ಷಗಳಿಂದ ರಾಜಕೀಯ ವ್ಯವಸ್ಥೆ ಹಾಳಾಗಿದೆ. ಬೆಳಗಾವಿ ಮೂರು ಕ್ಷೇತ್ರಗಳಲ್ಲಿ ಅಪ್ಪಟಕನ್ನಡ ಅಭ್ಯರ್ಥಿಗಳಿಗೆ ಬರುವ ವಿಧಾನಸಭಗೆ ಆಯ್ಕೆಯಾಗಬೇಕು. ನಿರಂತರವಾಗಿ ಎಂಇಎಸ್ ಪುಂಡಾಟಿಕೆಯಿಂದ ಕನ್ನಡಿಗರ ಮೇಲೆ ದಬ್ಬಾಳಿಕೆಗಳು ನಡೆಯುತ್ತಾ ಬಂದರು, ಸರಕಾರಗಳು ಮಾತ್ರ ಕನ್ನಡಿಗರನ್ನು ಅನಾಥರನ್ನಾಗಿ ಮಾಡಿವೆ ಎಂದರು.

ಕನ್ನಡಿಗರ ಸ್ವಾಭಿಮಾನ ಕಾಯುವ ಕೆಲಸ ನಮ್ಮ ಸಂಘಟನೆ ಕಳೆದ ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿದೆ. ಯಾರ ದೇಹದಲ್ಲಿ ಕನ್ನಡ ರಕ್ತ ಹರಿಯುತ್ತಿದೆ. ಅಂತವರು ಮಾತ್ರ ಚುನಾವಣೆಗೆ ನಿಲ್ಲಬೇಕು.
ಅಪ್ಪಟ ಕನ್ನಡಿಗರೆ ಆಯ್ಕೆ ಆಗಬೇಕು. ಭಾಷಾ ದ್ರೋಹಿಗಳು ಆಯ್ಕೆಯಾಗಿ ಬರಬಾರದು ಎಂದರು.
ನಾಡು ನುಡಿಗಾಗಿ ಯಾವುದೆ ಪಕ್ಷಗಳು ಕೆಲಸ ಮಾಡುತ್ತಿಲ್ಲ. ಕನ್ನಡಿಗರ ಮತ ಪಡೆದು ಅನ್ಯ ಭಾಷೆಗೆ ಜೈ ಅನ್ನುವವರನ್ನು ವಿಧಾನಸಭೆಗೆ ಕಳುಹಿಸಬಾರದು. ರಾಜಕೀಯವಾಗಿ ನಾಡದ್ರೋಹಿಗಳನ್ನು ಬೇರು ಸಮೇತ ಕಿತ್ತುಹಾಕಬೇಕು. ಕರ್ನಾಟಕ ನವನಿರ್ಮಾಣ ಸೇನೆಯಿಂದ ಅಭ್ಯರ್ಥಿಗಳನ್ನು ಕÀಣಕ್ಕೆ ಇಳಿಸಲು ತಯಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧÀ್ಯಕ್ಷ ಬಾಬು ಸಂಗೋಡಿ. ಮಂಜುನಾಥ್ ಪಾಟೀಲ ಸೇರಿದಂತೆ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

loading...