ಅಬಕಾರಿ ದಾಳಿ: 34 ಸಾವಿರ ಮೌಲ್ಯದ ಅಕ್ರಮ ಮದ್ಯ ವಶ

0
8
loading...

ಸವಣೂರು : ತಾಲೂಕಿನ ಕಡಕೋಳ ಹೆಸರೂರು ಮಾರ್ಗ ಮಧ್ಯದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದ ಸುಮಾರು ರೂ. 34 ಸಾವಿರ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ತಾಲೂಕಿನ ಕಡಕೋಳ ಹೆಸರೂರು ಸರ್ಕಾರಿ ರಸ್ತೆಯಲ್ಲಿ ರಸ್ತೆಗಾವಲು ಮಾಡುವ ಸಮಯದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡು ಓರ್ವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರೆಸಿದ್ದಾರೆ.

ಹಾವೇರಿಯ ಅಬಕಾರಿ ಉಪ ಆಯುಕ್ತ ಗೋಪಾಲ ಕೃಷ್ಣಗೌಡ ಹಾಗೂ ಅಬಕಾರಿ ಉಪ ಅಧೀಕ್ಷಕ ಗ್ಲ್ಯಾಡ್‍ಸನ್ ಸಂಜಯ ಇವರ ಮಾರ್ಗದರ್ಶನದಲ್ಲಿ ಸವಣೂರಿನ ಅಬಕಾರಿ ಪ್ರಭಾರ ನಿರೀಕ್ಷಕ ಆನಂದ ಅಡಗಲ್,ಅಧಿಕಾರಿ ಎಂ.ಟಿ. ಶ್ರೀನಿವಾಸಶೆಟ್ಟಿ, ಸಿಬ್ಬಂದಿಗಳಾದ ಎಸ್.ಆರ್.ದೊಡ್ಡಮನಿ, ಎನ್. ಕೆ. ಕಿಲ್ಲೇದಾರ, ಬಸವರಾಜ ಭೋವಿ ಈ ದಾಳಿಯಲ್ಲಿ ಪಾಲ್ಗೊಂಡು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿತನಾದ ಪಾಂಡಪ್ಪ ಧನಜಪ್ಪ ಲಮಾಣಿ ಈತನಿಂದ ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದ ಅಂದಾಜು ಮೌಲ್ಯ ರೂ 34 ಸಾವಿರ ಮೌಲ್ಯದ ಒಟ್ಟು 34.560 ಲೀಟರ್ ಅಕ್ರಮ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಆರೋಪಿತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.

loading...