ಅಭಿವೃದ್ಧಿಯ ಆಧಾರದ ಮೇಲೆ ಮತಯಾಚಿಸಲು ದೇಶಪಾಂಡೆ ಕರೆ

0
13
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಕ್ಷೇತ್ರದಲ್ಲಿ ಆಗಿರುವ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮತಯಾಚನೆ ಮಾಡಬೇಕು ಎಂದು ಹೇಳಿದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ. ದೇಶಪಾಂಡೆ ಪ್ರಜಾಪ್ರಭುತ್ವದಲ್ಲಿ ಮತದಾರರು ದೇವರಾಗಿದ್ದು, ಕಾರ್ಯಕರ್ತರು ಪಕ್ಷದ ಆಸ್ತಿ ಹಾಗೂ ಶಕ್ತಿಯಾಗಿದ್ದಾರೆ ಎಂದರು.

ಶುಕ್ರವಾರ ಹಂದಲಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಅಂಬಿಕಾನಗರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಆರ್.ವಿ. ದೇಶಪಾಂಡೆ ಮಾತನಾಡಿದರು. ನನ್ನ ಪರವಾಗಿ ಮತಯಾಚನೆ ಮಾಡಲು ತೆರಳಿದರೆ ಮತದಾರರು ಯಾವುದೇ ಆಕ್ಷೇಪಗಳನ್ನು ಎತ್ತುವುದಿಲ್ಲ. ಏಕೆಂದರೆ ನನ್ನ ಮೇಲೆ ಯಾವುದೇ ಭಾನಗಡಿ ಆರೋಪಗಳಿಲ್ಲ. ನಾನು ವ್ಯಭಿಚಾರ ಮಾಡಿಲ್ಲ, ವಂಚನೆಯನ್ನೂ ಮಾಡಿಲ್ಲ. ಅತ್ಯಂತ ಹೊಣೆಗಾರಿಕೆಯಿಂದ ನನ್ನ ಕಾರ್ಯವನ್ನು ಕ್ರಿಯಾಶೀಲ ಹಾಗೂ ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಹೇಳಲು ನನಗೆ ಗೌರವ ಹಾಗೂ ಅಭಿಮಾನವಾಗುತ್ತದೆ ಎಂದರು.
ಕ್ಷೇತ್ರದ ರೈತರ ಬೇಡಿಕೆಯಂತೆ ಅತಿ ಅವಶ್ಯಕವಾದ ಕಾಳಿನದಿ ನೀರಾವರಿ ಯೋಜನೆಯನ್ನು ತುಂಬಾ ಪ್ರಯಾಸ ಪಟ್ಟು ದೇವರ ಆಶೀರ್ವಾದದಿಂದ ಮಂಜೂರಿ ಮಾಡಿಸಿಕೊಳ್ಳಲಾಗಿದೆ.

ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣಾ ಪಾಟೀಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಡಿ. ಚೌಗುಲೆ ಸಾಂದರ್ಭಿಕವಾಗಿ ಮಾತನಾಡಿದರು. ತಾಲೂಕ ಪಂಚಾಯತ ಸದಸ್ಯರಾದ ಜಯಶ್ರೀ ಸುಭಾಸ ಗಾವಡೆ, ಬಾಳು ಪಾಟೀಲ, ಭಾಗವತಿ ಪಂಚಾಯತ ಅಧ್ಯಕ್ಷ ರಾಮಚಂದ್ರ ಬುರ್ಲಿ, ಆಲೂರ ಪಂಚಾಯತ ಅಧ್ಯಕ್ಷೆ ಕಸ್ತೂರಿ ಹರಿಜನ, ಅಂಬಿಕಾನಗರ, ಅಂಬೇವಾಡಿ ಪಂಚಾಯತ ಅಧ್ಯಕ್ಷರುಗಳು, ತಾಲೂಕ ಪಂಚಾಯತ ಮಾಜಿ ಉಪಾಧ್ಯಕ್ಷ ಪಾಂಡು ಪಾಟೀಲ ವೇದಿಕೆಯಲ್ಲಿದ್ದರು. ಪರಶುರಾಮ ಆಲೂರ ಕಾರ್ಯಕ್ರಮ ನಿರ್ವಹಿಸಿದರು.

loading...