ಅಭಿವೃದ್ಧಿ ಕಾರ್ಯಗಳೆ ಶ್ರೀರಕ್ಷೆ: ದೇಶಪಾಂಡೆ

0
30
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದ ಸಮಗ್ರ ಮತ್ತು ಶಾಶ್ವತ ಅಭಿವೃದ್ಧಿಯೆ ನನ್ನ ಮೂಲಮಂತ್ರ. ಕ್ಷೇತ್ರದ ಶಾಸಕನಾಗಿ, ರಾಜ್ಯದ ಸಚಿವನಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಶ್ರಮಿಸಿದ ಧನ್ಯತೆ ನನಗಿದೆ. ಈ ಅವಧಿಯಲ್ಲಿನ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳು ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ನಗರದ ಟೌನ್‍ಶಿಪ್ ನಲ್ಲಿರುವ ಪಕ್ಷದ ಹಿರಿಯ ಮುಖಂಡ ರಾಧಾಕೃಷ್ಣ ಕನ್ಯಾಡಿಯವರ ಮನೆಯಂಗಳದಲ್ಲಿ ನಡೆದ ವಾರ್ಡಿನ ನಾಗರೀಕರನ್ನು ಉದ್ದೇಶಿಸಿ ಮಾತನಾಡಿದರು. ದಾಂಡೇಲಿ ಜನತೆಯ ಬಹುವರ್ಷಗಳ ಬೇಡಿಕೆಯಾಗಿದ್ದ ದಾಂಡೇಲಿಯನ್ನು ತಾಲೂಕನ್ನಾಗಿ ಘೋಷಿಸಲಾಗಿರುವ ಜೊತೆಗೆ ತಾಲೂಕಿಗೆ ಬೇಕಾದ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸೂಕ್ತ ರೀತಿಯ ಕ್ರಮ ಕೈಗೊಳ್ಳಲಾಗಿದೆ. ದಾಂಡೇಲಿಯಲ್ಲಿ ಪ್ರಮುಖವಾಗಿ ಕರ್ನಾಟಕ ಒನ್ ಪ್ರಾರಂಭಿಸಲಾಗಿದೆ.

ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರವನ್ನು ರಾಜ್ಯದಲ್ಲೆ ಮಾದರಿ ಕ್ಷೇತ್ರವನ್ನಾಗಿಸುವ ಮಹತ್ವದ ದೂರದೃಷ್ಟಿಯನ್ನಿಟ್ಟುಕೊಂಡು ಚುನಾವಣೆಯ ಅಖಾಡಕ್ಕೆ ಇಳಿದಿದ್ದು, ನನ್ನ ಸುದೀರ್ಘ ರಾಜಕೀಯ ಜೀವನ ಮತ್ತು ಅಭಿವೃದ್ಧಿಯ ನಡೆಯನ್ನು ಬೆಂಬಲಿಸಿ, ಅಮೂಲ್ಯ ಮತ ನೀಡಬೇಕೆಂದು ಸಚಿವ ದೇಶಪಾಂಡೆ ವಿನಂತಿಸಿದರು. ಈ ಸಂದರ್ಭದಲ್ಲಿ ಪ್ರಸಾದ ದೇಶಪಾಂಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ, ನಗರ ಸಭಾ ಅಧ್ಯಕ್ಷ ಎನ್.ಜಿ.ಸಾಳುಂಕೆ,  ಆರ್.ಜಿ. ಶೆಟ್ಟಿ, ಬಾಬಾ ಮುಲ್ಲಾ, ಮುಸ್ತಾಕ ಮಿಶ್ರಿಕೋಟಿ, ನಗರ ಸಭಾ ಸದಸ್ಯರುಗಳಾದ ಕೀರ್ತಿ ಗಾಂವಕರ, ನಂದೀಶ ಮುಂಗರವಡಿ, ಬಸೀರ್ ಗಿರಿಯಾಳ, ರಾಮಲಿಂಗ ಜಾಧವ, ಮಂಜುನಾಥ ರಾಥೋಡ, ಅಡಿವೆಪ್ಪ ಭದ್ರಕಾಳಿ, ರೈಸಾ ಬಿಡಿಕರ ಮೊದಲಾದವರು ಉಪಸ್ಥಿತರಿದ್ದರು. ಮೀನಾಕ್ಷಿ ಕನ್ಯಾಡಿ ಸ್ವಾಗತಿಸಿ, ವಂದಿಸಿದರು.

loading...