ಅಭ್ಯರ್ಥಿಗಳ ನಡೆ ನೋಡಿ ಮತ ಹಾಕಿ: ಜಾರಕಿಹೊಳಿ

0
45
loading...

ಶೇಡಬಾಳ : ಮತದಾರರು ಮತದಾನ ಮಾಡುವ ಮುಂಚೆ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ನಡೆ, ನುಡಿ, ಆಚಾರ, ವಿಚಾರಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡ ನಂತರ
ಮತ ಚಲಾಯಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕರೆ ನೀಡಿದರು.
ಅವರು ಗುರುವಾರ ದಿ. 26 ರಂದು ಉಗಾರ ಖುರ್ದ ಪಟ್ಟಣದಲ್ಲಿ ಶನಿವಾರ ದಿ. 28 ರಂದು ಉಗಾರ ಖುರ್ದ ಪಟ್ಟಣಕ್ಕೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪ್ರಚಾರ ಸಭೆಯ ಪೂರ್ವಭಾವಿ ಸಮಾಲೋಚನೆ ಸಭೆ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ ವಿರೋಧ ಪಕ್ಷದ ಶಾಸಕರ ಬಗ್ಗೆ ಟೀಕೆ ಟಿಪ್ಪಣೆ ಮಾಡಿ ಮಾತನಾಡುವುದಕ್ಕಿಂತ ನಮ್ಮ ಕಾಂಗ್ರೆಸ್‌ ಪಕ್ಷದ ಸಾಧನೆಗಳನ್ನು ಮತದಾರರ ಮನೆ ಮನೆಗೆ ತಲುಪಿಸಿ ಅವರ ಮನ ಗೆಲ್ಲುವಂತೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ದೇಶ ಉಳಿಯಬೇಕಾದರೆ ಕರ್ನಾಟಕದಲ್ಲಿ ಮತ್ತೆ ಸಿದ್ಧರಾಮಯ್ಯನ ಸರಕಾರ ಬರಬೇಕು ಎಂದು ಒತ್ತಿ ಹೇಳಿದರು.
ಕಾಗವಾಡ, ಅಥಣಿ, ಕುಡಚಿ, ರಾಯಬಾಗದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಹೇಳಿದರು.
ಕಾಂಗ್ರೆಸ್‌ ಅಭ್ಯರ್ಥಿ ಶ್ರೀಮಂತ ಪಾಟೀಲ ಮಾತನಾಡಿ ಕಾಗವಾಡ ಮತಕ್ಷೇತ್ರವು ಕಾಂಗ್ರೆಸ್‌ಮಯವಾಗಿದ್ದು, ದಿನದಿಂದ ದಿನಕ್ಕೆ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ಗ್ರಾಮಗಳಲ್ಲಿ ಶೇ. 75 ರಷ್ಟು ಮತಗಳನ್ನು ಕಾಂಗ್ರೆಸ್‌ ಪಕ್ಷ ಪಡೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೇ 12 ಮತದಾನ ಮುಗಿಯುವವರೆಗೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಹಗಲು, ರಾತ್ರಿ ಎನ್ನದೇ ಶ್ರಮ ವಹಿಸಿ ದುಡಿದು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿರಿ, ಮುಂದಿನ 5 ವರ್ಷಗಳ ಕಾಲ ನಾನು ನಿಮ್ಮ ಸೇವೆಗಾಗಿ ಹಗಲಿರುಳು ಶ್ರಮಿಸುವುದಾಗಿ ಶ್ರೀಮಂತ ಪಾಟೀಲರು ಆಶ್ವಾಸನೆ ನೀಡಿದರು.
ಈ ಸಮಯದಲ್ಲಿ ಕೆಪಿಸಿಸಿ ಸದಸ್ಯರಾದ ಕಿರಣ ಪಾಟೀಲ, ಚಂದ್ರಕಾಂತ ಇಮ್ಮಡಿ, ಕಾರ್ಯದರ್ಶಿ ಕಾಂತಾ ನಾಯಿಕ, ಯುವ ನಾಯಕ ಯೋಗೇಶ ಪಾಟೀಲ, ಅನಂತಪೂರ ಬ್ಲಾಕ ಅಧ್ಯಕ್ಷ ಮಹಾದೇವ ಕೊರೆ, ಕಾಗವಾಡ ಬ್ಲಾಕ ಅಧ್ಯಕ್ಷ ವಿಜಯ ಅಕಿವಾಟೆ, ಅಸ್ಲಂ ನಾಲಬಂದ, ಶಶಿಕಾಂತ ಕಾಂಬಳೆ, ಸುರೇಶ ಥೋರುಸೆ, ಕುಡಚಿ ಜಿಪಂ ಸದಸ್ಯ ಮಾರುಫ, ಅಶೋಕ ಅಸೂದೆ, ಅಣ್ಣಾಸಾಬ ಸಾಂಗಲೆ, ಜಿಪಂ ಸದಸ್ಯ ಆರ್‌.ಎಂ.ಪಾಟೀಲ, ದಾದಾ ಸಿಂಧೆ,ರುಸ್ತುಂ ಸುತಾರ, ವಿವೇಕ ಶೆಟ್ಟಿ, ಸುಭಾಷ ಕುರಾಡೆ, ನಂದಿನಿ ಪರಾಕಟೆ, ಸುನಂದಾ ನಾಯಿಕ, ಉಜ್ವಲಾ ಶೆಟ್ಟಿ, ಶಮಿನಾಬಾನು ಹುಕ್ಕೇರಿ ಸೇರಿದಂತೆ ಸಾವಿರಾರು ಜನ ಇದ್ದರು.

loading...