ಅಮದಳ್ಳಿ ಗಣಪತಿ ದೇವಸ್ಥಾನದಲ್ಲಿ ಸಂಭ್ರಮದಿಂದ ನಡೆದ ಮಹೋತ್ಸವ

0
20
loading...

ಕಾರವಾರ: ಇಲ್ಲಿಯ ಅಮದಳ್ಳಿಯ ಪ್ರಸಿದ್ಧ ಶ್ರೀ ವೀರ ಮಹಾಗಣಪತಿ ಸಂಸ್ಥಾನದಲ್ಲಿ ಅಕ್ಷಯ ತೃತೀಯ ನಿಮಿತ್ತ ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಾಮೂಹಿಕ ಸತ್ಯ ಗಣಪತಿ ವೃತ ಆಚರಣೆ ಮೂಲಕ ಪ್ರಾರಂಭಿಸಲಾಯಿತು.

ದೇವಸ್ಥಾನದಲ್ಲಿ ಅಕ್ಷಯ ತೃತೀಯ ಮುನ್ನಾ ದಿನದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಮುಂಜಾನೆ ಗಣಹೋಮ 12.30 ಕ್ಕೆ ಅಭಿಷೇಕ, ಬೆಳಗ್ಗೆ 10.30 ಕ್ಕೆ ಸಾಮೂಹಿಕ ಸತ್ಯ ಗಣಪತಿ ವೃತ ನಡೆಸಲಾಯಿತು. ಬಳಿಕ ಮಧ್ಯಾಹ್ನ 1.30 ಕ್ಕೆ ಮಹಾ ಮಂಗಳಾರತಿ ನಡೆದು ನಂತರ ದೇವರ ದರ್ಶನ ಪಡೆಯಲು ಬಂದ ಸಾವಿರಾರು ಭಕ್ತರಿಗೆ ಅನ್ನ ಪ್ರಸಾದ ವಿತರಿಸಲಾಯಿತು.
ಶ್ರೀ ವೀರ ಗಣಪತಿ ಸಂಸ್ಥಾನದಲ್ಲಿ ಅಕ್ಷಯ ತೃತೀಯ ದಿನದಂದು 34 ನೇ ಜಾತ್ರಾ ಮಹೋತ್ಸವದ ನಿಮಿತ್ತ ಮುಂಜಾನೆ 5.30 ಕ್ಕೆ ಮಂಗಳಾರತಿ, ಬೆಳಗ್ಗೆ 9.30 ರಿಂದ 11.30 ರ ವರೆಗೆ ಸಾಮೂಹಿಕ ಹಾಗೂ ಶ್ರೀ ದೇವಸ್ಥಾನದ ವತಿಯಿಂದ 108 ತೆಂಗಿನಕಾಯಿ ಗಣಹೋಮ ಮತ್ತು ಪೂರ್ಣಾಹುತಿ ನಡೆಯಿತು. ಕಳೆದ ಸತತ 14 ವರ್ಷಗಳಿಂದ ಗೋವಾದ ಮಡಗಾಂವದ ಇಚ್ಛಿತ್ ಗುರುದಾಸ್ ತಳಾವಳಿಕರ ಅನ್ನ ಸಂತರ್ಪಣೆ ಸೇವೆ ನಡೆಸಿಕೊಟ್ಟರು.

loading...