ಅರಬಾವಿ ಟಿಕೆಟ್ ಹಂಚಿಕೆ: ಕಾರ್ಯಕರ್ತರ ಅಸಮಾಧಾನ

0
41
loading...

ಮೂಡಲಗಿ: ಮೆ.12ಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಭಾನುವಾರ ಬಿಡುಗಡೆಗೊಂಡಿದ್ದು. ಅರಬಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇತ್ತಿಚಿಗೆ ಪಕ್ಷಕ್ಕೆ ಸೇರ್ಪಡೆಯಾದ ಅರವಿಂದ ದಳವಾಯಿಯವರಿಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್ ಕಾರ್ಯಕರ್ತರ ಅಸಮಧಾನಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಸ್ಥಳೀಯ ಕಲ್ಮೇಶ್ವರ ವೃತ್ತದಲ್ಲಿ ಟೈರ್‍ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಜಿಲ್ಲಾ ಕಾಂಗ್ರೇಸ್ ಕಾರ್ಮಿಕ ವಿಭಾಗದ ಮುಖಂಡ ಹಾಗೂ ಟಿಕೆಟ್ ಅಕಾಂಕ್ಷಿಯಾಗಿದ್ದ ಲಕ್ಕಣ್ಣ ಸವಸುದ್ದಿ ಮಾತನಾಡಿ, ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡುವುದಾಗಿ ನಂಬಿಸಿ ಕಳೆದ ಎರಡು ತಿಂಗಳಿನಿಂದ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಅನುಮತಿ ನೀಡಿ ಕೊನೆಯ ಕ್ಷಣದಲ್ಲಿ ಯಾವುದೋ ಒತ್ತಡಕ್ಕೆ ಮಣಿದು ಅರಬಾಂವಿ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿ ಅರವಿಂದ ದಳವಾಯಿಯವರಿಗೆ ಟಕೆಟ್ ನೀಡಿರುವುದು ಕಾರ್ಯಕರ್ತರಲ್ಲಿ ಅಸಮಾಧಾನ ತಂದಿದೆ. ವರಿಷ್ಠರು ನಿಷ್ಠವಂತ ಕಾರ್ಯಕರ್ತರಿಗೆ, ಯುವ ನಾಯಕರಿಗೆ ಮನ್ನಣೆ ನೀಡಬೇಕಾಗಿತ್ತು. ನಾವು ನಿರಂತರವಾಗಿ 52 ಹಳ್ಳಿಗಳಿಗೆ ಭೇಟಿ ನೀಡಿ ಜನ ಸಂಪರ್ಕಕೈಗೊಂಡು ಸಂಘಟನೆ ಮಾಡಿದ್ದೆವೆ. ಈಗ ನಮ್ಮನ್ನು ಕಡೆಗಣಿಸಿ 5ವರ್ಷದಲ್ಲಿ 3 ಬಾರಿ ಚುನಾವಣೆ ಸ್ಪರ್ಧಿಸಿ ಕಡಿಮೆ ಮತಗಳನ್ನು ಪಡೆದು ಸೋತಿರುವ ದಳವಾಯಿಯವರಿಗೆ ಟಕೆಟ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅರಬಾಂವಿ ಕ್ಷೇತ್ರದ ಅಭಿವೃದ್ದಿಗಾಗಿ ಹಾಗು ಭ್ರಷ್ಟರ ವಿರುದ್ಧ ಹೋರಾಟ ನಡೆಸುತ್ತೆನೆ. ಜನರು ನಮಗೆ ಸಹಕರಿಸಿದ್ದಾರೆ ಮುಂದೆಯೂ ಜನರ ಕಷ್ಟಕ್ಕೆ ಸದಾ ಸ್ಪಂದಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಅರಬಾಂವಿ ಅಲ್ಪಸಂಖ್ಯಾತರ ಅಧ್ಯಕ್ಷ ನಜೀರಸಾಬ್ ನದಾಪ್, ಹೊಳೆಯಪ್ಪ ಶಿವಪೂರ, ಲಕ್ಕಪ್ಪ ಛೆಬ್ಬಿ, ಭೀಮಶಿ ಬೆಣ್ಣಿ ಮತ್ತಿತರರು ಉಪಸ್ಥಿತರಿದ್ದರು.

loading...