ಅರಭಾಂವಿ ವಿಧಾನಸಭಾ ಮತಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಘೋಷಣೆ

0
61
loading...

ಕನ್ನಡಮ್ಮ ಸುದ್ದಿ-ಮೂಡಲಗಿ: ಕುತೂಹಲ ಮೂಡಿಸಿದ್ದ ಅರಭಾಂವಿ ವಿಧಾನಸಭಾ ಮತಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಕೇಳಿ ಬರುತ್ತಿದ್ದ ಊಹಾಪೋಹಗಳಿಗೆ ಏ.5 ರಂದು ತೆರೆ ಬೀಳುವುದು ನಿಶ್ಚಿತವಾಗಿದೆ. ಈ ಕುರಿತು ಮೂಡಲಗಿ ತಾಲೂಕು ಅಭಿವೃದ್ದಿ ಸಮಿತಿ ಸದಸ್ಯ ಶಿವಬಸು ಹಂದಿಗುಂದ ಶುಕ್ರವಾರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತ, ಸ್ವತಂತ್ರ್ಯ ಅಭ್ಯರ್ಥಿಯನ್ನಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಇವರನ್ನು ಸರ್ವಾನುಮತದಿಂದ ಕಣಕ್ಕಿಳಿಸುವ ಕುರಿತು ಅಭ್ಯರ್ಥಿ ಘೋಷಣೆಯ ಸಭೆಯನ್ನು ಏ.5 ರಂದು ಸ್ಥಳೀಯ ಬಸವ ರಂಗ ಮಂಟಪದಲ್ಲಿ ಸಂಜೆ 4 ಗಂಟೆಗೆ ನಡೆಸಲಾಗುವುದು ಎಂದು ತಿಳಿಸಿದರು.
ನ್ಯಾಯವಾದಿ ಎಂ.ಟಿ. ಪಾಟೀಲ್ ಮಾತನಾಡಿ, 2018ರ ವಿಧಾನಸಭಾ ಚುನಾವಣೆಯಲ್ಲಿ ಅರಭಾಂವಿ ಮತಕ್ಷೇತ್ರದಲ್ಲಿ ಜನತೆ ಬದಲಾವಣೆ ಬಯಸುತ್ತಿದ್ದು ಈ ಚುನಾವಣೆಯು ಧರ್ಮ ಮತ್ತು ಅಧರ್ಮದ ನಡುವಿನ ಸಮರವಾಗಿದೆ ಎಂದರು. ಮೂಡಲಗಿ ತಾಲೂಕು ಅಭಿವೃದ್ದಿ ಸಮಿತಿ ಸದಸ್ಯ ಈರಣ್ಣ ಕೊಣ್ಣೂರ ಮಾತನಾಡಿ, ಏ. 5ರಂದು ನಡೆಯುವ ಸ್ವತಂತ್ರ ಅಭ್ಯರ್ಥಿಯ ಘೋಷಣೆಯ ಸಭೆಯಲ್ಲಿ 10 ಸಾವಿರ ಜನ ಪಾಲ್ಗೋಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಂ.ವಿ. ಅರ್ಶೀತ, ಸಂಗಪ್ಪ ಕಳ್ಳಿಗುದ್ದಿ, ಶಿವಾನಂದ ಕಪರಟ್ಟಿ ಉಪಸ್ಥಿತರಿದ್ದರು.

loading...