ಅಲ್ಪಸಂಖ್ಯಾತರ ಹಿತ ಕಾಪಾಡುವಲ್ಲಿ ರಾಜ್ಯ sಸರ್ಕಾರ ವಿಫಲ: ಅಲ್ತಾಪ್‌

0
14
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಅಲ್ಪಸಂಖ್ಯಾತರ ಹಿತ ಕಾಪಾಡುವಲ್ಲಿ ರಾಜ್ಯದಲ್ಲಿ ವಿಫಲವಾದ ಕಾಂಗ್ರೆಸ್‌ ಸರ್ಕಾರದ ಬದಲಾವಣೆಗೆ ಅಲ್ಪಸಂಖ್ಯಾತರು ಆಸಕ್ತಿ ತೋರಿಸುತ್ತಿದ್ದಾರೆ. ಜಾತ್ಯಾತೀತ ಮನೋಭಾವನೆಯ ಜನತಾದಳಕ್ಕೆ ಅಲ್ಪಸಂಖ್ಯಾತರು ಒಲವು ತೋರಿಸುತ್ತಿದ್ದಾರೆಂದು ಜನತಾದಳ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯ್ಯದ್‌ ಮೋಹಿದ್‌ ಅಲ್ತಾಪ್‌ ಹೇಳಿದರು.
ರಾಜ್ಯದಲ್ಲಿ ಕುಮಾರಸ್ವಾಮಿಯವರ ಹಿಂದಿನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಕಾರ್ಯಯೋಜನೆ ಹಮ್ಮಿಕೊಂಡಿರುವುದಲ್ಲದೇ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡಿರುವುದು ವಿಶೇಷವಾಗಿತ್ತು. ಈ ದಿಶೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕೆಂದು ಜನರು ಬಯಸಿದ್ದಾರೆಂದು ಹೇಳಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್‌.ನಾಯ್ಕ ಹೆಗ್ಗಾರಕೈ ಸಭೆಯ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಳಾದ ಎಮ್‌.ಎನ್‌. ಶರೀಫ್‌, ಜಬ್ಬಾರ ಕಲ್ಬುರ್ಗಿ, ಇಮಾಮ್‌ ಹುಸೇನ್‌ ಸಾಮುದ್ರಿ, ಘೋಷಿತ ಅಭ್ಯರ್ಥಿ ಎ.ರವೀಂದ್ರ ನಾಯ್ಕ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಎನ್‌.ವಿ. ಭಟ್ಟ ದೇವಸ್‌, ಯಲ್ಲಾಪುರ ನಗರ ಘಟಕದ ಕಾರ್ಯಾಧ್ಯಕ್ಷ ಚಾಂದಬಾಯಿ,ಮಾತನಾಡಿದರು.
ವೇದಿಕೆಯ ಮೇಲೆ ಯುವ ಘಟಕದ ಅಧ್ಯಕ್ಷ ಶಿವರಾಮ್‌ ಗಾಂವಕರ್‌, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜುಬೇರ ಜುಕಾಕೋ, ತಾಲ್ಲೂಕು ಕಾರ್ಯದರ್ಶಿ ನರಹರಿ ನಾಯ್ಕ, ನಗರ ಮಹಿಳಾ ಘಟಕಾಧ್ಯಕ್ಷೆ ಸರಸ್ವತಿ ಗುನಗಾ, ಶಾಂತವ್ವಾ ನೂರ ಅಹ್ಮದ್‌, ರಿಯಾಜ್‌, ಸಯ್ಯದ್‌ ಅಬ್ದುಲ್‌, ಫಕ್ರೂದ್ದಿನ್‌ ಮುಂತಾದವರು ಉಪಸ್ಥಿತರಿದ್ದರು.ಬಾಬಾಜಾನ್‌ ಸ್ವಾಗತಿಸಿದರು.

loading...