ಅವೈಜ್ಞಾನಿಕ ಕಾಮಗಾರಿಗೆ ವಿರೋದ್ಧಿಸಿ ಮನವಿ

0
24
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಪಟ್ಟಣದ ನಂದೀಶ್ವರ ನಗರ ಬಡಾವಣೆಯಲ್ಲಿ ರಾಜಕಾಲುವೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಂದೀಶ್ವರನಗರದ ನಿವಾಸಿಗಳು ಮುಂಡಗೋಡ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ನಂದೀಶ್ವರ ನಗರದಲ್ಲಿ ರಾಜಕಾಲುವೆ(ಚರಂಡಿ) ಕಾಮಗಾರಿಯು ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ. ಮಾರ್ಕಿಂಗ್ ಮಾಡದೇ ಬೇಕಾಬಿಟ್ಟಿಯಾಗಿ ಕಾಲುವೆಯನ್ನು ಅಗೆಯಲಾಗಿದೆ. ವಾಹನ ಚಾಲನಾ ಪರವಾನಿಗೆ ಇಲ್ಲದೇ ಜೆ.ಸಿ.ಬಿ ಚಲಾಯಿಸಿ ರಸ್ತೆ ಹಾಳು ಮಾಡಿದ್ದಾರೆ. ಬಿ.ಎಸ್.ಎನ್.ಎಲ್, ಇಂಟರ್‍ನೆಟ್ ಹಾಗೂ ನೀರಿನ ಸಂಪರ್ಕ ಪೈಪ್ ಗಳನ್ನು ಕಡಿದು ಹಾಳು ಮಾಡಲಾಗಿದೆ. ಕಾಮಗಾರಿಯ ಸಾಮಗ್ರಿಗಳನ್ನು ಬೇಕಾಬಿಟ್ಟಿಯಾಗಿ ರಸ್ತೆಯ ಮೇಲೆ ಒಗೆದು ಸಾರ್ವಜನಿಕರು ತಿರುಗಾಡಲು ಹಾಗೂ ವಾಹನ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಮೇಲ್ವಿಚಾರಕರು, ಇಂಜಿನೀಯರ ಸೈಟ್‍ನಲ್ಲಿ ಇರುವುದಿಲ್ಲ. ತಕ್ಷಣ ಈ ಬಗ್ಗೆ ಗಮನಹರಿಸಿ ಮೊದಲು ಅಗೆದ ಚರಂಡಿಯ ಕೆಲಸವನ್ನು ಮುಗಿಸಿ ನಂತರ ಉಳಿದ ಭಾಗಗಳ ಕಾಮಗಾರಿಯನ್ನು ಮಾಡುವ ಕ್ರಮ ಕೈಗೊಳ್ಳಬೇಕೆಂದು ನಂದೀಶ್ವರ ನಗರದ ನಿವಾಸಿಗಳು ಮುಂಡಗೋಡ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ. ಮನವಿ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ ಹಾಗೂ ಪೌರಾಡಳಿತ ನಿರ್ದೇಶಕರಿಗೆ ಕಳಿಸಲಾಗಿದೆ ಎಂದು ತಿಳಿದುಬಂದಿದೆ.

loading...