ಅಸಭ್ಯ ವರ್ತನೆ ತೋರಿದ ಬಿಜೆಪಿ ಕಾರ್ಯಕರ್ತರು

0
16
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಬಿ.ಜೆ.ಪಿ. ಅಭ್ಯರ್ಥಿ ಸುನಿಲ್ ನಾಯ್ಕ ಅವರು ನಾಮ ಪತ್ರ ಸಲ್ಲಿಸುವ ವೇಳೆಯಲ್ಲಿ ಮೆರವಣಿಗೆಯ ಮೂಲಕ ಬಂದಿದ್ದ ಕಾರ್ಯಕರ್ತರು ಚುನಾವಣಾಧಿಕಾರಿಗಳ ಕಚೇರಿಗೆ ತೆರಳುವ ಮಾರ್ಗದಲ್ಲಿ ಜಮಾವಣೆ ಗೊಂಡಿದ್ದು ರಸ್ತೆಯನ್ನು ಬಂದ್ ಮಾಡಿ ಘೋಷಣೆಯನ್ನು ಕೂಗುತ್ತಿದ್ದರು. ಇದೇ ವೇಳೆ ನಾಮ ಪತ್ರ ಸಲ್ಲಿಸಿ ವಾಪಾಸಾಗುತ್ತಿದ್ದ ಶಾಸಕ ಮಂಕಾಳ ವೈದ್ಯ ಅವರ ಕಾರನ್ನು ಅಡ್ಡಗಟ್ಟಿದ ಕಾರ್ಯಕರ್ತರು ಅವರಿಗೆ ಘೆರಾವ್ ಹಾಕಿದರು. ಇದೇ ಸಂದರ್ಭದಲ್ಲಿ ಮೋದಿ ಮೋದಿ ಎಂದು ಕೂಗಿದ ಕಾರ್ಯಕರ್ತರು ಪೊಲೀಸರ ಮಾತನ್ನೂ ಕೇಳದೇ ಕೆಲ ಕಾಲ ರಸ್ತೆಯನ್ನು ಬಿಟ್ಟು ಕೊಡದೇ ಗೊಂದಲ ಸೃಷ್ಟಿಸಲು ಕಾರಣರಾದರು. ನಂತರ ಮಧ್ಯ ಪ್ರವೇಶಿಸಿದ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿಸೋಜ, ಸಿ.ಆರ್.ಪಿ.ಎಫ್. ಪಡೆಯ ಪೊಲೀಸರು ಕಾರ್ಯಕರ್ತರನ್ನು ಚದುರಿಸಿ ಮಂಕಾಳ ವೈದ್ಯ ಅವರಿಗೆ ದಾರಿ ಸುಗಮಗೊಳಿಸಿದರು.
ಈ ಬಗ್ಗೆ ಪ್ರತಿಕ್ರೀಯೆ ನೀಡಿದ ಮಂಕಾಳ ವೈದ್ಯ ನಾಮ ಪತ್ರ ಸಲ್ಲಿಸಿ ವಾಪಾಸಾಗುವಾಗ ದಾರಿಯಲ್ಲಿ ನೂರಾರು ಜನರು ಸೇರಿ ನಮ್ಮ ಕಾರನ್ನು ಅಡ್ಡಗಟ್ಟಿ ಮೋದಿ ಮೋದಿ ಎಂದು ಘೋಷಣೆ ಕೂಗಿರುವುದು ಉತ್ತಮ ಸಂಸ್ಕøತಿಯವರ ಲಕ್ಷಣವಲ್ಲ. ಇದು ಬಿ.ಜೆ.ಪಿಯವರ ಹತಾಷ ಭಾವನೆಯನ್ನು ತೋರಿಸುತ್ತದೆ ಎಂದು ತಿಳಿಸಿದರು. ನಾಮ ಪತ್ರ ಸಲ್ಲಿಸಿದ್ದೇ ಇಷ್ಟೋಂದು ದಾಂಧಲೆ ಮಾಡುವ ಇವರು ನಾಳೆ ಕ್ಷೇತ್ರದಲ್ಲಿ ಗೆದ್ದು ಬಂದರೆ ಇನ್ನೇನು ಮಾಡಬಹುದೆಂದು ಜನತೆಯೇ ತೀರ್ಮಾನ ಮಾಡಬೇಕು. ನಮ್ಮ ಸಂಸ್ಕøತಿ ಸರಳ ಹಾಗೂ ಸಜ್ಜನಿಕೆಯದು. ಅವರು ಕಾರನ್ನು ಅಡ್ಡಗಟ್ಟಿ ಘೋಷಣೆ ಕೂಗಿರುವುದರ ಹಿಂದೆ ಬಿ.ಜೆ.ಪಿ. ಪ್ರಭಾವಿಗಳ ಕೈವಾಡ ಇದೆ ಎಂದ ಅವರು ತಾವು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.

loading...