ಅಸ್ನೋಟಿಕರ್‍ರಿಂದ ಧಾರ್ಮಿಕ ಸ್ಥಳದಲ್ಲಿ ರಾಜಕೀಯ ಸಭೆ: ದೂರು ದಾಖಲು

0
15
loading...

ಕನ್ನಡಮ್ಮ ಸುದ್ದಿ-ಕಾರವಾರ: ಧಾರ್ಮಿಕ ಸ್ಥಳದಲ್ಲಿ ಜೆಡಿಎಸ್ ಪಕ್ಷದ ಸಭೆಗೆ ಅವಕಾಶ ನೀಡಿ ರಾಜಕೀಯ ಉದ್ದೇಶದ ಬಳಕೆಗೆ ನೀಡಿದ್ದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದ್ದು ದೇವಸ್ಥಾನದ ಕಮೀಟಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ವೀಕ್ಷಕ ತಂಡದ ಪ್ರಭಾರ ಅಧಿಕಾರಿ ಅಕ್ಷಯ ಕುಮಾರ ಉಪಾಧ್ಯೆ ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಜ್ಯದ ವಿಧಾನಸಭಾ ಚುನವಣೆಯ ಹಿನ್ನೆಲೆಯಲ್ಲಿ ಮಾ.27 ರಿಂದ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಿರುವಾಗ ಏ.19 ರಂದು ತಹಶೀಲ್ದಾರ ನಿಯಂತ್ರಣ ಕೊಠಡಿಯಿಂದ ನಗರವ್ಯಾಪ್ತಿಯ ಹರಿಕಂತ್ರವಾಡಾದಲ್ಲಿ ಜೆಡಿಎಸ್ ಪಕ್ಷದ ಸಭೆ ನಡೆಯುತ್ತಿರುವ ಬಗ್ಗೆ ಸಂದೇಶ ದೊರೆತಿದೆ. ತಕ್ಷಣ ಸಹಾಯಕ ವಿಡಿಯೋಗ್ರಾಫರ್ ರಾಮದಾಸ್ ಗುರವ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ ಕೊಡಿಬೀರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರು ಜೆಡಿಸ್‍ನ ಕಾರ್ಯಕರ್ತರು ಹಾಗೂ ಕ್ಷೇತ್ರದ ಅಭ್ಯರ್ಥಿ ಆನಂದ ಅಸ್ನೊಟಿಕರ್ ಸಹ ಸೇರಿದ್ದು ಕಂಡುಬಂದಿದೆ. ಈ ಸಮಯದಲ್ಲಿ ಸಭೆಯ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಸಭೆಯ ಜೆಡಿಎಸ್‍ಗೆ ಸಂಬಂಧಿಸಿದ್ದು ದೇವಸ್ಥಾನದ ಆಡಳಿತ ಮಂಡಳಿಯವರು ದೇವಸ್ಥಾನದ ಆವರಣದಲ್ಲಿ ಸಭೆಗೆ ಅವಕಾಶ ಮಾಡಿಕೊಟ್ಟಿದ್ದು ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಧಾರ್ಮಿಕ ಸ್ಥಳವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಲು ನೀಡಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿರುವುದರಿಂದ ಕೋಡಿಬೀರ ದೇವಸ್ಥಾನದ ಕಮೀಟಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

loading...