ಆರೋಗ್ಯವಂದು ಅದ್ಬುತ್ ವರದಾನ: ಡಾ.ಧಾರವಾಡ

0
29
ಕನ್ನಡಮ್ಮ ಸುದ್ದಿ-ಬೆಳಗಾವಿ: ಆರೋಗ್ಯ ಎನ್ನುವದು ಒಂದು ಅಧ್ಬುತ ವರದಾನ. ಅದು ಹದಗೆಡುವದಕ್ಕಿಂತ ಮುಂಚೆಯೇ ಕಾಳಜಿ ತೆಗೆದುಕೊಂಡು ಕಾಲ ಕಾಲಕ್ಕೆ ನಿಯಮಿತ ಆರೋಗ್ಯ ತಪಾಸಣೆಗಳ ಮೂಲಕ ನಿರೋಗಿಯಾಗಿ ಜೀವನ ನಡೆಸಿರಿ ಎಂದು ಕೆಎಲ್‍ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್.ಸಿ ಧಾರವಾಡ ಮಾತನಾಡಿದರು.
ಶನಿವಾರದಂದು ಕೆಎಲ್‍ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆಯ ಕಾರ್ಯಕ್ರಮದವನ್ನು ಉದ್ಘಾಟಿಸಿ ಮಾತನಾಡಿದರು.
 ಜಾಗತಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. 1948 ರಲ್ಲಿ ನಡೆದ ಮೊದಲ ವಿಶ್ವ ಆರೋಗ್ಯ ಸಭÉಯಲ್ಲಿ ಏಪ್ರಿಲ್ 7 ಅನ್ನು ವಿಶ್ವ ಆರೋಗ್ಯ ದಿನವಾಗಿ ಆಚರಿಸಲು ನಿರ್ದೇಶಿಸಲಾಗಿದೆ. 1950 ರಿಂದ ವಿಶ್ವ ಆರೋಗ್ಯ ದಿನ ಆಚರಿಸಲಾಗುತ್ತದೆ. ಈ ದಿನದಂದು ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ವಿವಿಧ ಸಂಘಟನೆಗಳು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎಂದರು.
ಪ್ರತಿವರ್ಷ ಒಂದು ಧ್ಯೇಯವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯ ಯೂನಿವರ್ಸಲ್ ಹೆಲ್ತ ಕವರೇಜ್: ಎವರಿವನ್, ಎವರಿವೇರ್, ಯು.ಎಚ್.ಸಿ ಮೂಲಕ ಕೆಲವು ದೇಶಗಳು ಈಗಾಗಲೇ ಸಾರ್ವಜನಿಕ ಆರೋಗ್ಯ ರಕ್ಷಣೆಯತ್ತ ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ. ಆದರೆ ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಇನ್ನೂ ಅಗತ್ಯವಿರುವ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗಿಲ್ಲ ರಾಷ್ಟ್ರಗಳು ಆರೋಗ್ಯ ಗುರಿಯನ್ನು ಸಾಧಿಸಬೇಕಾದರೆ, ಜಗತ್ತಿನ ಬಹುತೇಕ ಜನರು 2023 ರೊಳಗೆ ಯು.ಎಚ್.ಸಿ ಪ್ರಯೋಜನೆ ಪಡೆಯಬೇಕು ಎಂಬುದು ಈ ದಿನ ಮಹತ್ವವಾಗಿದೆ ಎಂದು ಈ ದಿನದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅತಿಥಿಯಾಗಿದ್ದ ಡಾ. ಬಿ.ಎಸ್ ಮಹಾಂತಶೆಟ್ಟಿ ಮಾತನಾಡಿ ಆರೋಗ್ಯವೇ ಭಾಗ್ಯ ಎಂಬ ಮಾತಿದೆ ಒಂದು ಜೀವಿಯ ದೇಹ ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯ ಪ್ರಕಾರ ಆರೋಗ್ಯವೆಂದರೆ ಕೇವಲ ರೋಗ, ಬಾಧೆಗಳ ಗೈರು ಹಾಜರಿಯಷ್ಟೆ ಅಲ್ಲ, ಸಂಪೂರ್ಣ ದೈಹಿಕ ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿ ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ, ಒಬ್ಬ ಮನುಷ್ಯ ಆರೋಗ್ಯವಾಗಿದ್ದರೆ ಇಡಿ ಕುಟುಂಬ ಆರೋಗ್ಯವಾಗಿರುತ್ತದೆ. ಇದರಿಂದ ಆರೋಗ್ಯಕರ ಸಮಾಜ ರೂಪುಗೊಳ್ಳುತ್ತದೆ ಹಾಗೂ ದೇಶದ ಪ್ರಗತಿ ಹೆಚ್ಚುತ್ತದೆ ಎಂದು ಆರೋಗ್ಯಯುತ ಜೀವ£ದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಜಿಲ್ಲಾ ಜೇಷ್ಠ ನಾಗರಿಕರ ಸಂಘದ ಅದ್ಯಕ್ಷರಾದ ಡಿ.ಪಿ ಶಿಂಧೆ ವಹಿಸಿದ್ದರು. ಕೆಎಲ್‍ಇ ಹೋಮಿಯೊಪಥಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎ ಉಡಚನಕರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮವನ್ನು  ಅರುಣ ನಾಗಣ್ಣವರ ನಿರೂಪಿಸಿದರು. ಸಂತೋಷ ಇತಾಪೆ ಸ್ವಾಗತಿಸಿದರು. ಕು. ಪ್ರಭಾವತಿ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರು , ಆರೋಗ್ಯ ಸಹಾಯಕಿ ವಿದ್ಯಾರ್ಥಿಗಳು ಹಾಗೂ ವೈದ್ಯಕಿಯೇತರ ಸಿಬ್ಬಂದಿ ಭಾಗವಹಿಸಿದ್ದರು.
loading...