ಈ ಬಾರಿ ಬಿಜೆಪಿ ಗೆಲುವು ಶತಸಿದ್ಧ: ಶಾಸಕ ಕಾಗೇರಿ

0
17
loading...

ಶಿರಸಿ: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ಏ.19 ರಂದು ಬೆಳಿಗ್ಗೆ 10.30ಕ್ಕೆ ಶಿರಸಿ-ಸಿದ್ದಾಪುರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಈ ಬಾರಿ ಬಿಜೆಪಿ ಗೆಲುವು ಶತಸಿದ್ಧ ಎಂದು ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು, ಏ.19 ರಂದು ಬೆಳಿಗ್ಗೆ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದು ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಅಭಿಮಾನಿಗಳ ಜೊತೆಯಲ್ಲಿ ನಾಮಪತ್ರವನ್ನು ಸಲ್ಲಿಕೆ ಮಾಡಲಾಗುತ್ತದೆ ಎಂದರು.

ಜನರಿಗೆ ಬಿಜೆಪಿಯ ಮೇಲೆ ನಂಬಿಕೆಯಿದೆ. ಅಲ್ಲದೇ ರಾಜ್ಯ ಕಾಂಗ್ರೆಸ್ ಸರ್ಕಾದ ಆಡಳಿತದಿಂದ ಬೇಸತ್ತು ಹೋಗಿದ್ದಾರೆ. ಕಳೆದ 5 ಬಾರಿಯೂ ನಮ್ಮ ಆಡಳಿತ ವೈಖರಿಯನ್ನು ಗಮನಿಸಿದ್ದಾರೆ. ಆದ ಕಾರಣ ಈ ಬಾರಿಯೂ ಬಿಜೆಪಿ ಗೆಲ್ಲಲಿದೆ. ಕಾಗೇರಿ ಅವರ ಗೆಲುವಿನಿಂದ ಕ್ಷೇತ್ರಕ್ಕೆ ಮತ್ತು ಮತದಾರರಿಗೆ ಒಳಿತು ಎಂದು ಜನರು ತಿಳಿದುಕೊಂಡಿದ್ದಾರೆ. ಇದರೊಂದಿಗೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಗಮನಿಸಿದ ಕಾರಣ ಬಿಜೆಪಿ ಅತೀ ಹೆಚ್ಚು ಮತದಲ್ಲಿ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯದಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಪಕ್ಷ ಸದೃಢವಾಗಿದೆ. ಕಾರ್ಯಕರ್ತರು ನಮ್ಮ ಶಕ್ತಿಯಾಗಿದೆ. ಅವರು ನಿರಂತರವಾಗಿ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದು, ಅವಿರತವಾಗಿ ಪಕ್ಷ ಬೆಳೆಸಲು ಶ್ರಮಿಸಿದ್ದಾರೆ. ರಾಜ್ಯದಲ್ಲಿನ ಸಾಮಾನ್ಯ ಜನರೂ ಸಹ ಬಿಜೆಪಿಯತ್ತ ಒಲುವನ್ನು ತೋರಿಸಿದ್ದಾರೆ. ಇನ್ನೊಮ್ಮೆ ಬಿಜೆಪಿ ಗೆಲ್ಲಲಿದೆ ಎಂದ ಅವರು, ಪಕ್ಷದಲ್ಲಿಯೂ ಒಟ್ಟಾಗಿ ಇದ್ದೇವೆ. ಯಾವುದೇ ಗೊಂದಲ ಇಲ್ಲ. ಎಲ್ಲರೂ ಕೂಡಿಕೊಂಡು ವಿಜಯದ ಪತಾಕೆ ಹಾರಿಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಆರ್.ಡಿ.ಹೆಗಡೆ, ಆರ್.ವಿ.ಹೆಗಡೆ, ಗಣಪತಿ ನಾಯ್ಕ, ಶೋಭಾ ನಾಯ್ಕ, ನಂದನ್ ಸಾಗರ್, ಶ್ರೀಕಾಂತ್ ನಾಯ್ಕ , ಶ್ರೀರಾಮ್ ನಾಯ್ಕ ಇದ್ದರು.

loading...