ಈ ಭಾರಿ ಗೆಲವು ನನ್ನದೇ: ಬಿ.ಸಿ.ಪಾಟೀಲ

0
10
loading...

ಕನ್ನಡಮ್ಮ ಸುದ್ದಿ-ಹಿರೇಕೆರೂರ: ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಕ್ಷೇತ್ರದಿಂದ ಮಂಗಳವಾರ ಮಾಜಿ ಶಾಸಕ ಬಿ.ಸಿ.ಪಾಟೀಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಿ.ಪಾರಂ ನೊಂದಿಗೆ ಅಧಿಕೃತವಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು.

ಪಟ್ಟಣದ ಜಿ.ಬಿ.ಶಂಕರಾವ್ ವೃತ್ತದಿಂದ ತೆರದ ವಾಹನದಲ್ಲಿ ಬೃಹತ್ ಮೆರವಣಿಗೆಯೊಂದಿಗೆ ಸಹಸ್ರಾರು ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಅವರು, ರಾಜ್ಯದ ಬಡ ಜನರನ್ನು ಹಸಿವು ಮುಕ್ತರನ್ನಾಗಿಸುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮ್ಯನವರು, ದೇಶದಲ್ಲೆ ಮಾದರಿಯಾಗಿದ್ದಾರೆ. ಈ ತಾಲೂಕಿಗೆ ರೈತರಿಗೆ ಅತಿ ಅವಶ್ಯಕವಾಗಿರುವ ನೀರಾವರಿ ಯೋಜನೆ ಸೇರಿದಂತೆ, ರಟ್ಟೀಹಳ್ಳಿ ತಾಲೂಕು ರಚನೆ, ಸರ್ವಜ್ಞ ಪ್ರಾಧಿಕಾರ, ಕೆರೆಗಳ ನೀರು ತುಂಬಿಸುವ ಯೋಜನೆ ನೀಡುವ ಮೂಲಕ ಭಗಿರಥರಾಗಿದ್ದಾರೆ. ಶಾಸಕ ಯು.ಬಿ.ಬಣಕಾರ ಅವರು ತಮ್ಮ ಅವಧಿಯಲ್ಲಿ ಈ ತಾಲೂಕಿಗೆ ಯಾವುದಾದರೂ ದೊಡ್ಡ ಯೋಜನೆ ಅಥವಾ ಕೆಲಸವನ್ನು ಮಾಡಿದ್ದರೆ ಹೇಳಲಿ?. ತಾಲೂಕು ಅಭಿವೃದ್ಧಿಯಲ್ಲಿ ಮತ್ತೆ ಬಹಳಷ್ಟು ಹಿಂದುಳಿದಿದ್ದು, ಇವರ ಆಡಳಿತದ ವೈಖರಿಯಿಂದ ಜನತೆ ಬೇಸತ್ತಿದ್ದು, ಈ ಭಾರಿ ಬಹಳಷ್ಟು ಅಂತರದಿಂದ ನನ್ನನ್ನು ಗೆಲ್ಲಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ, ಜಿ.ಪಂ ಸದಸ್ಯರಾದ ಎಸ್.ಕೆ.ಕರಿಯಣ್ಣನವರ, ಪ್ರಕಾಶ ಬನ್ನಿಕೋಡ, ಮಹದೇವಕ್ಕ ಗೋಪಕ್ಕಳಿ, ಎಪಿಎಂಸಿ ಅಧ್ಯಕ್ಷ ಹನುಮಂತಪ್ಪ ಹಡಗದ, ಪ.ಪಂ ಉಪಾಧ್ಯಕ್ಷೆ ಶಿವಲೀಲಾ ರಂಗಕ್ಕನವರ, ಬಿ.ಎನ್.ಬಣಕಾರ,ದುರಗಪ್ಪ ನಿರಲಗಿ. ಮಂಜುಳಾ ಬಾಳಿಕಾಯಿ, ಎ.ಕೆ.ಪಾಟೀಲ, ಆರ್.ಎನ್.ಗಂಗೋಳ, ಜಿ.ಶಿವನಗೌಡ್ರ, ಕರೇಗೌಡ ಸಣ್ಣಕ್ಕಿ, ಸಲೀಂ ಮುಲ್ಲಾ, ಗುರುಶಾಂತ ಯತ್ತಿನಹಳ್ಳಿ, ಜಿಲಾನಿ ಬಳಿಗಾರ, ಪ್ರಶಾಂತ ತಿರಕಪ್ಪನವರ, ಕುಸುಮಾ ಬಣಕಾರ, ಮುಜೀಬ್ ರಿಕಾರ್ಟಿ, ಮಹ್ಮದ್‍ಹುಸೇನಸಾಬ್ ವಡ್ಡಿನಕಟ್ಟಿ, ರತ್ನವ್ವ ತಿಪ್ಪಣ್ಣನವರ, ವನಜಾ ಪಾಟೀಲ, ಸೃಷ್ಟಿ ಪಾಟೀಲ ಕವಿತಾ ಭರಮಗೌಡ್ರ. ಬಸವರಾಜ ಭರಮಗೌಡ್ರ. ಹಾಗೂ ಮತ್ತಿತರರು ಇದ್ದರು.

loading...