ಉತ್ತರಕನ್ನಡ: ಚುನಾವಣಾ ಅಕ್ರಮ ತಡೆಗೆ 30 ಚೆಕ್ ಪೋಸ್ಟ್ ಸ್ಥಾಪನೆ

0
20
loading...

ಕನ್ನಡಮ್ಮ ಸುದ್ದಿ-ಕಾರವಾರ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮಗಳು ಜರುಗದಂತೆ ಹಣ, ಮದ್ಯ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಕಾನೂನು ಬಾಹಿರವಾಗಿ ಸಾಗಾಟ ಮಾಡುವವರ ವಿರುದ್ಧ ಹದ್ದಿನ ಕಣ್ಣಿಡಲು ಜಿಲ್ಲೆಯ ಪೊಲೀಸ್ ಇಲಾಖೆಯು ಸುಮಾರು 30 ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಿದೆ.
ಉತ್ತರಕನ್ನಡ ಜಿಲ್ಲೆಯು ಗೋವಾ ರಾಜ್ಯ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಪೋಲಿಸ್ ಇಲಾಖೆಯು ಚುನಾವಣಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಗಡಿಗಳಲ್ಲಿ ಅಂತರರಾಜ್ಯ ಮತ್ತು ಅಂತರ ಜಿಲ್ಲೆ ರಸ್ತೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ 30 ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಿದೆ. ಎಲ್ಲ 30 ಚೆಕ್ ಪೋಸ್ಟ್‍ಗಳಲ್ಲಿ ಕೂಡಾ ಅತ್ಯಾಧುನಿಕ ಸಿ.ಸಿ.ಟಿ.ವಿ. ಕ್ಯಾಮೆರಾಗಳ ಕಣ್ಗಾವಲು ಇದ್ದು ಅವುಗಳು ನೇರವಾಗಿ ಜಿಲ್ಲಾ ನಿಯಂತ್ರಣ ಕೊಠಡಿಗೆ ಸಂಪರ್ಕ ಹೊಂದಿವೆ.

ಪೊಲೀಸ್, ಅಬಕಾರಿ, ಅರಣ್ಯ, ಗಣಿ ಮತ್ತು ಭೂವಿಜ್ಞಾನ, ಪಶುವೈದ್ಯ ಇಲಾಖೆಗಳು ತಮ್ಮ ಸಿಬ್ಬಂದಿಗಳನ್ನು ನಿಯೋಜಿಸಿವೆ. ಅಲ್ಲದೆ ಜಿಲ್ಲಾಧಿಕಾರಿಗಳು ದಿನದ 24 ಗಂಟೆಗಳ ಕಣ್ಗಾವಲು ತಂಡವನ್ನು ಸಹ ನಿಯೋಜಿಸಿದ್ದಾರೆ.

ರಾ.ಹೆ. 66ರ ಮಾಜಾಳಿ ಚೆಕ್ ಪೋಸ್ಟ್‍ನಲ್ಲಿ ವಾಹನದ ಚಲನವಲವನದ ಮೇಲೆ ನಿಗಾ ಇಡಲು ಅಬಕಾರಿ ಇಲಾಖೆಯು 2, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತವು ತಲಾ ಒಂದೊಂದು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿವೆ. ಇವು ನೇರವಾಗಿ ಅಬಕಾರಿ, ಪೋಲಿಸ್ ಮತ್ತು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ವೀಕ್ಷಣೆಯಲ್ಲಿರುತ್ತವೆ. ಜೊತೆಗೆ ಅನಮೋಡದಲ್ಲಿ ಅಬಕಾರಿ ಇಲಾಖೆಯು 2 ಸಿ.ಸಿ.ಟಿ.ವಿ. ಕ್ಯಾಮರಾಗಳನ್ನು ಅಳವಡಿಸಿದ್ದು ಇದು ಪೊಲೀಸ್ ಇಲಾಖೆಯ ನೇರ ಸಂಪರ್ಕವನ್ನು ಹೊಂದಿದ್ದು ಎರಡೂ ಇಲಾಖೆಗಳ ನಿಗಾವಣೆಯಲ್ಲಿರುತ್ತವೆ.

loading...