ಉನ್ನತಿ ಶಿಬಿರಕ್ಕೆ ಚಾಲನೆ ನೀಡಿದ ಹೆಗಡೆ

0
14
loading...

ಕನ್ನಡಮ್ಮ ಸುದ್ದಿ-ಕುಮಟಾ: ಕೆನರಾ ವೆಲ್‍ಫೆರ್ ಟ್ರಸ್ಟ್ ಅಂಕೋಲಾ ಮತ್ತು ಸಿಸ್ಕೋ ಸಂಭ್ರಮ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಡಾ ಎ.ವಿ ಬಾಳಿಗಾ ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ 5 ದಿನಗಳ ಉನ್ನತಿ ಶಿಬಿರಕ್ಕೆ ಪದವೀಪೂರ್ವ ಕಾಲೇಜಿನ ಪ್ರಾಚಾರ್ಯ ಎನ್ ಜಿ ಹೆಗಡೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ ಅವರು, ಹಿಂದೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಯಾವುದೇ ಮಾರ್ಗದರ್ಶಕರಿರಲಿಲ್ಲ. ಸಂಘ-ಸಂಸ್ಥೆಗಳ ಸಹಕಾರ ಕೂಡ ಇರಲಿಲ್ಲ. ಆದರೆ ಇಂದು ಸಿಸ್ಕೋ, ಕೆನರಾ ವೆಲ್‍ಫೆರ್ ಟ್ರಸ್ಟ್ ಅಂಕೋಲಾದಂತಹ ಸಂಘ-ಸಂಸ್ಥೆಗಳು ನಿಮ್ಮ ಬೆಂಬಲಕ್ಕಿದ್ದು, ಅಧ್ಯಯನಕ್ಕೆ ಪೂರಕವಾದ ವಾತಾವರಣ ಕಲ್ಪಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮ ಸಂಘಟಕ ಜನತಾ ವಿದ್ಯಾಲಯ ಕಡತೋಕಾ ಶಿಕ್ಷಕ ಎಂ ಜಿ ಶಾಸ್ತ್ರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಿಸ್ಕೋ ಸಂಸ್ಥೆಯ ನೇತೃತ್ವದಲ್ಲಿ ಈ ಶಿಬಿರ ನಡೆಯುತ್ತಿದ್ದು, ಮಾರ್ಗದರ್ಶಕ ಮಂಜು ಶಂಕರ ಮೈಸೂರ ರವರ ಸಹಕಾರವನ್ನು ಸ್ಮರಿಸಿದ್ದಲ್ಲದೆ, ಕುಮಟಾ ಮತ್ತು ಹೊನ್ನಾವರ ತಾಲೂಕಿನ 45 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಅಲ್ಲದೇ ಎಸ್ ಎ ಭಟ್, ವಿ ಪಿ ಶಾನಭಾಗ, ಎಸ್ ಎಸ್ ಪೈ, ಉಷಾ ಭಟ್, ಜಿ ಎಸ್ ಹೆಗಡೆ, ಶುಭಾ ಭಟ್, ವಿಜಯ ಕುಮಾರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಕೆನರಾ ವೆಲ್‍ಫೆರ್ ಟ್ರಸ್ಟ ಅಂಕೋಲಾದ ಆಡಳಿತಾಧಿಕಾರಿ ಕೆ ವಿ ಶೆಟ್ಟಿಯವರು ಶಿಬಿರಾರ್ಥಿಗಳಿಗೆ ಉಟೋಪಚಾರವ್ಯವಸ್ಥೆ ಕಲ್ಪಿಸಿ ಉಪಕರಿಸಿದ್ದಾರೆ ಎಂದು ತಿಳಿಸಿದರು.
ವೈಷ್ಣವಿ ಭಟ್ ಪ್ರಾರ್ಥಿಸಿದರು. ಜನತಾ ವಿದ್ಯಾಲಯ ಕಡತೋಕಾದ ಮುಖ್ಯಾಧ್ಯಾಪಕಿ ಉಷಾ ಭಟ್ ಸ್ವಾಗತಿಸಿದರು. ಶಿಕ್ಷಕ ಜಿ ಎಸ್ ಭಟ್ ನಿರೂಪಿಸಿದರು. ಶಿಕ್ಷಕ ಡಿ ಎನ್ ವೈದ್ಯ ವಂದಿಸಿದರು.

loading...