ಉಪನೋಂದಣಿ ಕಚೇರಿಯಲ್ಲಿ ಕುರುಡು ಕಾಂಚಾಣಾ ಆದರೆ ಕಾರ್ಯಸಿದ್ದಿ

0
29
loading...

ಕನ್ನಡಮ್ಮ ಸುದ್ದಿ-ಇಂಡಿ: ಇಂಡಿ ಪಟ್ಟಣದ ತಾಲೂಕ ಉಪ ನೊಂದಣಿ ಅಧಿಕಾರಿಗಳ ಕಾರ್ಯಲಯದಲ್ಲಿ ಸದ್ದಿಲದೆ ಕುರುಡು ಕಾಂಚಣ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ.
ತಾಲೂಕಿನಲ್ಲಿ ಬರುವ 180 ಕ್ಕೂ ಹೆಚ್ಚು ಹಳ್ಳಿಯ ರೈತರು ತಮ್ಮ ಹೊಲ ಮತ್ತು ಮನೆ ನೊಂದಣಿ ಮತ್ತು ಹೊಲ ಮತ್ತು ಮನೆಗೆ ಸಂಭಂದಿಸಿದ ವಿವಿದ ದಾಖಲೆಯನ್ನು ಪಡೆಯಲು ಬಂದರೆ ಉಪ ನೊಂದಣಿ ಅಧಿಕಾರಿಗಳು ಕಾರ್ಯಲಯದ ಬಾಗಿಲಿನಿಂದ ಹಿಡಿದು ಮೇಲಾಧಿಕಾರಿಗಳ ಚೆಂಬರವರೆಗೂ ಲಂಚದ ರೂಪದಲ್ಲಿ ಸಿಕ್ಕವರಿಗೆ ದಕ್ಷಣೆ ನೀಡಿದರೆ ಮಾತ್ರ ಕೇಲಸ್‌ ಇಲ್ಲದೆ ಹೊದರೆ ಕೇಲಸ್‌ ನೊ ಗ್ಯಾರಂಟಿ ಒಟ್ಟಾರೆ ಈ ಕಚೇರಿ ನಿಯಮದಲ್ಲಿ ಕಾಂಚಣಂ ಕಾರ್ಯ ಸಿದ್ದಿ ಎಂಬಂತ್ತಿದೆ.
ಇಲ್ಲಿ ಭೂಮಿ ಖರಿದಿ ಮತ್ತು ಇನ್ನಿತರ ಕಾರ್ಯಕ್ಕೆ ಬರುವ ರೈತರು ನೇರವಾಗಿ ಅಧಿಕಾರಿಗಳಿಗೆ ಬೇಟಿಯಾಗಿಲು ಪರವಾನಿಕೆ ಇಲ್ಲಾ ಬದಲಿಗೆ ಇಲ್ಲಿನ ಎಜಂಟರನ್ನು ಮತ್ತು ಬಾಂಡ ರೈಟರ್‌ ಬೇಟಿ ಮಾಡಿ ತಮ್ಮ ಕೇಲಸ್‌ ಹೇಳಿದರೆ ನಮ್ಮಗೆ ಇಷ್ಠು ಸೈಬ್ರಿಗೆ ಇಂತಿಷ್ಟು ಮತ್ತು ಕಂಪೂಟರ್‌ ಅಪರೇಟ್‌ರಿಗೆ ಇಷ್ಠು ಒಟ್ಟಾರೆ ನಾಲ್ಕಣೆ ಸರಕಾರಿ ಪೀ ಎಂಟಣೆ ಸೈಬರ್‌ ಮತ್ತು ನಮ್ಮ ಪೀ ಎಂದು ಯಾರದು ಭಯವಿಲದೆ ನೇರವಾಗಿ ಹೇಳುತ್ತಾರೆ
ಈ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿವಿದ ಕಾರ್ಯ ಹಣ ನೀಡಿದರೆ ಮಾತ್ರ ಕೆಲಸ್‌ ಇಲ್ಲದಿದ್ದರೆ ನೋ ಎಂಬುವದು ಇಲ್ಲಿನ ಅಧಿಕಾರಿ ರವಿಂದ್ರ ಹಂಚಿನಾಳ ಅವರ ಕೈ ಕಳಗಿನ ವ್ಯಕ್ತಿಗಳಿಂದ ಕೇಳಿಬರುತ್ತಿದೆ ಒಟ್ಟಾರೆ ಲಂಚ ಎಂಬ ಅನಿಷ್ಠ ಎರಡಕ್ಷರ ಪದಕ್ಕೆ ಇಲ್ಲಿ ತಕ್ಷಣಾ ಮೆಲಾಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ.

loading...