ಎಚ್ಚರಿಕೆಯಿಂದ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯನಿರ್ವಹಿಸಿ : ಡಿಸಿ ಶಾಂತಾರಾಮ

0
19
loading...

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ಬೇಸಿಗೆ ಆರಂಭಗೊಂಡಿರುವ ಹಿನ್ನಲೆಯಲ್ಲಿ ರೋಗವಾಹಕ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಂಬಂಧಿಸಿದ ವೈದ್ಯಾಧಿಕಾರಿಗಳು ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಶಾಂತಾರಾಮ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಆರೋಗ್ಯ ಇಲಾಖೆಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಚಿಕನ್‍ಗುನ್ಯಾ, ಡೆಂಗ್ಯೂ, ಕಾಲರಾ ಮುಂತಾದ ರೋಗಗಳ ಹರಡದಂತೆ ತಕ್ಷಣವೇ ಎಲ್ಲ ವೈದ್ಯಾಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಹಾಗೂ ನಿರಾಸಕ್ತ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.ಮನೆ ಮನೆ ಭೇಟಿ ನೀಡಿ ಮನೆಗಳಲ್ಲಿ ಹಾಗೂ ಸುತ್ತಲೂ ನೀರು ಸಂಗ್ರವಾಗದಂತೆ ಅರಿವು ಮೂಡಿಸಲು ಜಾಗೃತಿಗಾಗಿ ಕರಪತ್ರ ವಿತರಣೆ ಹಾಗೂ ಸೂಕ್ತ ನಿಯಂತ್ರಣ ಕ್ರಮಕೈಗೊಳ್ಳುವಂತೆ ಸೂಚಿಸಲಾಯಿತು. ತಕ್ಷಣವೇ ಕ್ರೀಯಾಯೋಜನೆ ತಯಾರಿಸಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಜಿ.ಇ ಹಾಗೂ ಕಾಲರಾ ನಿಯಂತ್ರಣಕ್ಕೆ ನೀರಿನ ಎಲ್ಲ ಮೂಲಗಳನ್ನು ಪರಿಕ್ಷಿಸಿ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ವೈದ್ಯಾಧಿಕಾರಿಗಳನ್ನೇ ಜವಾಬ್ದಾರಿಗಳನ್ನಾಗಿಸಲಾಗುವುದು ಎಂದರು. ಜಿಲ್ಲಾ ಪಂಚಾಯತ ಸಿಇಓ ವಿಕಾಸ ಸುರಳಕರ ಮಾತನಾಡಿ ಬೇಸಿಗೆ ಹೆಚ್ಚಾಗುತ್ತಿರುವದರಿಂದ ಕೊಳವೆಬಾವಿ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ.ಇಂದೇ ನಿಮ್ಮ ಮನೆಯಲ್ಲಿನ ನೀರು ಸಂಗ್ರಹ ತೊಟ್ಟಿಗಳನ್ನು ಪರೀಕ್ಷಿಸಿ, ಸೊಳ್ಳೆಯ ಮರಿ ಬಾಲಹುಳಗಳು ನೀರಿನಲ್ಲಿ ಕಂಡು ಬಂದರೆ ತಕ್ಷಣ ನೀರಿನ ತೊಟ್ಟಿಗಳನ್ನು ಸ್ವಚ್ಚಗೊಳಿಸಿ ಮುಚ್ಚಳಿಕೆಯಿಂದ ಭದ್ರಪಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಾದ ಆರ್‍ಸಿಎಚ್ ಡಾ.ದಿಲೀಪ ಗಂಜಾಳ ಡಿ.ಎಸ್.ಓ ಶ್ರೀಕಾಂತ ತೇಲಸಂಗ, ಎಫ್‍ಡಬ್ಲುಓ ಡಾ.ಡಿ.ಬಿ.ಪಟ್ಟಣಶೆಟ್ಟಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಜಯಶ್ರೀ ಸೇರಿದಂತೆ ಆಯಾ ತಾಲೂಕಿನ ವೈದ್ಯಾಧಿಕಾರಿಗಳು, ಇತರೆ ಇಲಖೆಯ ಅ ಧಿಕಾರಿಗಳು ಉಪಸ್ಥಿತರಿದ್ದರು.

loading...