ಎಟಿಎಂ ಖಾಲಿ ಖಾಲಿ ಜನರ ಪರದಾಟ

0
21
loading...

ಹುಬ್ಬಳ್ಳಿ: ರಾಜ್ಯ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಣದ ಕೊರತೆ ಉಂಟಾಗಿದ್ದು, ಬಹುತೇಕ ಎಟಿಎಂ ಗಳಲ್ಲಿ ನೋ ಕ್ಯಾಶ್ ಬೋರ್ಡ್ ಕಂಡುಬರುವುದು ಸರ್ವೆ ಸಾಮಾನ್ಯವಾಗಿದ್ದು ಇದರಿಂದ ಗ್ರಾಹಕರು ಬೇಸತ್ತು ಹೋಗಿರುವದಂತೂ ನಿಜ.
ಚೋಟಾ ಮುಂಬೈ ವಾಣಿಜ್ಯನಗರಿ ಎಂದೇ ಪ್ರಖ್ಯಾತಿ ಗಳಿಸಿರುವ ಹುಬ್ಬಳ್ಳಿ ನಗರದಲ್ಲಿ ಕೂಡಾ ಹಣದ ಕೊರತೆ ಕಂಡು ಬಂದಿದ್ದು ಇಲ್ಲಿಯ ಹಳೇ ಕಾಟನ್ ಮಾರ್ಕೆಟ್ ನ ಕರ್ನಾಟಕ ಬ್ಯಾಂಕ್ ನ ಎಟಿಎಂ ಸೇರಿದಂತೆ ಹಲವಾರು ಎಟಿಎಂಗಳಲ್ಲಿ ಹಣ ಕೊರತೆ ಇದ್ದು ಗ್ರಾಹಕರು ಪರದಾಡುವಂತಾಗಿದೆ. ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿದ್ದರು. ಕೈಗೆ ಸಿಗದೆ ಜನರು ಬೇಸರಗೊಂಡು ಹಿಡಿಶಾಪವನ್ನು ಹಾಕುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಎಟಿಎಂಗಳಲ್ಲಿ ಹಣ ಖಾಲಿ ಖಾಲಿ ಆಗುತ್ತಿದ್ದು ಇದು ನಿನ್ನೆ ಮೊನ್ನೆಯದ್ದಲ್ಲ, ಸುಮಾರು ಒಂದು ತಿಂಗಳಿನಿಂದ ಹಣ ಕೊರತೆ ಕಂಡು ಬಂದಿದೆ. ಕೆಲವು ಕಡೆ ಹಣ ಸಿಕ್ಕರೂ 5000ಕ್ಕಿಂತ ಹೆಚ್ಚು ಹಣ ಬಾರದೆ ಗ್ರಾಹಕರು ನಿರಾಸೆಗೊಂಡಿದ್ದಾರೆ. ಇಂದು ಎಟಿಎಂಗಳಲ್ಲಿ ನೋ ಕ್ಯಾಶ್ ಬೋರ್ಡ್ ನೋಡಿದರೆ ನೋಟು ರದ್ಧತಿಯ ನಂತರದ ದಿನಗಳನ್ನು ನೆನಪಿಸುವಂತಾಗಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಾರೆ.

loading...