ಎಲ್ಲೆ ಇರುವ ನೀ ಸುಖವಾಗಿರು, ಮರೆಯಾಗಿರುವ ನನ್ನ ಇನಿಯ …

0
22
loading...

ಅವನು ನನ್ನ ನೋಡೋಕೆ ದಿನ ಬರ್ತಾ ಇದ್ದ , ನಾನು ಕಾಣಲಿಲ್ಲ ಅಂದ್ರೆ ನಾನು ಹೊರಗಡೆ ಬಾಲ್ಕನಿಯಲ್ಲಿ ಬಂದು ಅವನನ್ನು ನೋಡೊ ತನಕ ಒಂದೇ ಸಮನೇ ಶಬ್ದ ಮಾಡೋದು ಅವನ ಕೆಲಸ.
ನಾನು ಹೊರಗೆ ಬಂದು ನೋಡೊಷ್ಟರಲ್ಲಿ ಮರೆಯಾಗಿ ಬಿಡೋನು, ನನಗೆ ಗೊತ್ತಾಗ್ತಿತ್ತು ಅವನ ಇಲ್ಲೆÃ ಎಲ್ಲೊÃ ಇದ್ದಾನೆ ಅಂತಾ.
ಅವನಿಗೆ ಹೂವು ಅಂದ್ರೆ ತುಂಬಾನೆ ಇಷ್ಟ , ನಮ್ಮ ಪ್ಲಾಟ್‌ನಲ್ಲಿ ಇರೊ ಎಲ್ಲ ಹೂವಿನ ಗಿಡಗಳ ಮೇಲೆ ಕಣ್ಣು ಅವನಿಗೆ , ಅದನ್ನೆ ಕಾಯೋತಿದ್ದ ,ಆತ ಇನ್ನೆನು ಹೂವು ಬಿಡುತ್ತೆ ಅನ್ನೋಷ್ಟತ್ತಿಗೆ ಮೊಗ್ಗನ್ನೆ ಕಿತ್ತಿ ಒಯ್ಯುತ್ತಿದ್ದ . ಮಲ್ಲಿಗೆ ಮತ್ತು ದಾಸವಾಳ ಅವನಿಗೆ ಫೇವರಟ್.
ನಮ್ಮ ಕಾಂಪೌಂಡ್ ಹಿಂದೆ ಅವನ ಒಂದು ಚಿಕ್ಕ ಮನೆ ಇತ್ತು, ನಮ್ಮ ಬಾಲ್ಕನಿಗೂ ಅವನ ಮನೆಗೂ ದೂರ ಇರಲಿಲ್ಲ ಅವನ ಮತ್ತು ನನ್ನ ಮಧ್ಯೆ ಗಿಡಗಳು ಇದ್ದವು ಅಷ್ಟೇ , ಅವನ ಮನೆ ನಮ್ಮ ಬಾಲ್ಕನಿ ಚೆನ್ನಾಗಿ ಕಾಣ್ತಾ ಇತ್ತು , ಆತನೇ ಯಾವಾಗಲೂ ನಮ್ಮ ಬಾಲ್ಕನಿಗೆ ಬರ್ತಾ ಇದ್ದ ಅದೇ ಯಾವತ್ತು ಅವನು ನನ್ನನ್ನು ಮನೆಗೆ ಕರಿತಾ ಇರಲಿಲ್ಲಾ ಬಹುಶಃ ಅವನ ಮನೆ ಚಿಕ್ಕದಿರುವ ಕಾರಣ ಅವನ ಮನೆಗೆ ನನ್ನ ಕರೆತಿರಲಿಲ್ಲಾ. ಅವನಿಗೆ ಬೇಕಾದಾಗ ನಮ್ಮ ಬಾಲ್ಕನಿಗೆ ಬಂದು ಹೋಗ್ತಿದ್ದ ಅಷ್ಟೇ ನಾವು ರೂಮ್‌ಲ್ಲಿ ಯಾರು ಕಾಣಲಿಲ್ಲ ಅಂದ್ರೆ ಸೀದಾ ರೂಮ್ ಒಳಗೆ ನುಗ್ಗಿ ಬಿಡ್ತಾ ಇದ್ದ ಕಳ್ಳ . ನಮ್ಮ ಅಪ್ಪ ಅಮ್ಮನಿಗೂ ಅವನು ಅಂದ್ರೆ ತುಂಬಾ ಇಷ್ಟ ಅವರು ಅವನ ಜೊತೆ ಸಮಯ ಕಳಿತಿದ್ರು , ನಾನು ಬಂದ್ರೆ ಮಾತ್ರ ಹೂವಿನ ಮೊಗ್ಗೆ ಕಿತ್ತಿದ್ದಕ್ಕೆ ಬೈತಿನಿ ಅಂತಾ ಮರೆಯಾಗಿ ಹೋಗತಿದ್ದ ಕಳ್ಳ ಅವನು. ಒಂದ ವೇಳೆ ನಾನೆನಾದ್ರು ಅವನ ಮೇಲೆ ಕೋಪ ಮಾಡ್ಕೊಂಡಿದ್ರೆ ಹೋರಗೆ ಬಂದಿರಲಿಲ್ಲ ಅಂದರೆ ಅವನು ತನ್ನ ಬಳಗವನ್ನು ಕರೆದುಕೊಂಡು ಬಂದು ದಾಳಿ ಮಾಡಿ ವಟ ವಟ ಅಂತಾ ಕೀರ್ಚೋನು ಇರಿಟೆಟ್ ಮಾಡೋನು , ಅವನ ನೋಡಿದ್ರೆ ಸಿಟ್ಟೆಲ್ಲಾ ಮರೆತು ಹೋಗ್ತಿತ್ತು .ಮತ್ತೆ ಮರೆಯಾಗೋನು
ಅವನು ಅಡುಗೆಯಲ್ಲಿ ಮೆತ್ತಗಿರುವ ಆಹಾರ ಅಷ್ಟೇ ತಿಂತಾ ಇದ್ದ , ಅಮ್ಮ ಏನೇ ಮಾಡಿದ್ರು ಕೊಡ್ತಿದ್ರು ಅವನಿಗೆ . ದಿನ ಬೆಳಗಾದ್ರೆ ಸಾಕು ಯಾವ ಅಲರಾಮು ಬೇಡ ಬಂದು ಅವನೆ ಎಬ್ಬಿಸೊನು , ನನಗೆ ಇರಿಟೆಟ್ ಆದ್ರು ಮರೆಯದೆ ಇಲ್ಲಿಗೆ ಬರ್ತಾನೆ ಅಲ್ಲಾ ಅಂತಾ ಖುಷಿಯಾಗೋದು .
ಆದರೆ…….. ಈಗ ನನ್ನ ಕಾಡಿಸೊಕೆ , ಇರಿಟೆಟ್ ಮಾಡೋಕೆ ಯಾರು ಇಲ್ಲ ಅವನು ಕಾಣ್ತಾ ಇಲ್ಲ ಎಲ್ಲಿ ಹೋದೇ ನೀನು….?
ಅವನು ದಿನ ಬಂದು ಹೋಗುವಾಗ ಹೂವು ಕಿತ್ತಿದ್ದಕ್ಕೆ ಬೈತಾ ಇದ್ದೆ , ಈಗ ದಿನ ಅವನನ್ನ ನೋಡಬೇಕು ಅಂತಾ ಕಾಯ್ತಾ ಇರ್ತೀನಿ , ಬೆಳಗಾದರೆ ಅವನಿಗಾಗಿ ಹೂ ಕಿತ್ತು ಇಡ್ತಾ ಇದಿನಿ ಅವನಿಗೆ ಇಷ್ಟ ಅಂತಾ ಮೆತ್ತಗಿನ ತಿಂಡಿ ಬಾಕ್ಸಲ್ಲಿ ಹಾಕಿಡ್ತಿದಿನಿ ಅದನ್ನು ಬಂದು ತಗೋಂಡು ಹೋಗು ಖಂಡಿತ ಈ ಸಲ ನಿನ್ನನ್ನು ಬೈಯೋದಿಲ್ಲ…… ರ‍್ತಿಲ್ವಾ….?
ನಮ್ಮ ಕಂಪೌಡ ಸುತ್ತ ಮುತ್ತ ಇದ್ದ ಎಲ್ಲ ಗಿಡಗಳನ್ನು ಕಡಿದಿದ್ದಾರೆ ಅವನ ಮೆನೆಯೂ ಹೋಗಿದೆ , ನಮ್ಮ ಬಾಲ್ಕನಿಗೆ ಬರಲು ಅವನಿಗೆ ಈಗ ಆಗಲ್ಲ , ಕಡಿದ ಗಿಡದಲ್ಲಿಯೇ ಮನೆ ಇತ್ತು ಅವನದು , ಗಿಡ ಹತ್ತಿ ಕಂಪೌಡ ಹಾರಿ ನಮ್ಮ ಬಾಲ್ಕನಿಗೆ ಬರ್ತಾ ಇದ್ದ ಅವನು ಈಗ ಬರತಿಲ್ಲಾ ಅನ್ನುವ ಕೊರಗು ನನ್ನನ್ನು ಕಾಡುತ್ತಿದೆ.
ಈಗ ಎಲ್ಲಿದ್ದಾನೊ ಗೋತ್ತಿಲ್ಲ ಎಲ್ಲೆ ಇದ್ರು ಚೆನ್ನಾಗಿರು ಅಂತಾ ದೇವರಿಗೆ ಕೇಳ್ಕೊತಿನಿ ಗೆಳೆಯ ….ಇವನೆ ನನ್ನ ಗೆಳೆಯ “ಅಳಿಲು”!!!!!

loading...