ಏ.27ರಿಂದ `ಋಷಿ ಕಂಡ ಕೃಷಿ’ ಕಾರ್ಯಕ್ರಮ ಆಯೋಜನೆ

0
23
loading...

ಕನ್ನಡಮ್ಮ ಸುದ್ದಿ-ಶಿರಸಿ: ಬೆಳೆಗಳಿಗೆ ರೋಗಬಾಧೆ, ಅಸ್ಥಿರ ಬೆಲೆ, ಸಾಲಬಾಧೆ, ಕೃಷಿ ಕೂಲಿಗಳ ಸಮಸ್ಯೆಗಳಿಂದಾಗಿ ಕೃಷಿಕ ನಿರಾಸೆಯ ನಿಟ್ಟುಸಿರು ಬಿಡುತ್ತಿರುವ ಕಾಲಘಟ್ಟದಲ್ಲಿ ಕೃಷಿ ಕ್ಷೇತ್ರಕ್ಕೆ ಪುನಶ್ಚೇತನ ಕೊಡಲು ಆಯೋಜಿಸುತ್ತಿರುವ ಸ್ವರ್ಣವಲ್ಲೀ ಕೃಷಿ ಜಯಂತಿ 11 ವರ್ಷಕ್ಕೆ ಕಾಲಿಟ್ಟಿದೆ. ಅನ್ನದಾತ ಸುಖೀ ಭವ ಎಂಬ ಗುರಿಯೊಂದಿಗೆ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸದಾಶಯದಂತೆ ಏ.27ರಿಂದ ಎರಡು ದಿನಗಳ ಕಾಲ `ಋಷಿ ಕಂಡ ಕೃಷಿ’ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ವಿದ್ವಾನ್ ಉಮಾಕಾಂತ ಬಟ್ಟ ಕೆರೇಕೈ ಇವರು ಭಾಗವಹಿಸಿ `ಪರಾಶರ ಕೃಷಿ ದರ್ಶನ’ ಕುರಿತು ಉಪನ್ಯಾಸ ನೀಡುವರು. ಪ್ರಾಧ್ಯಾಪಕ ಡಾ.ಮಧುಸೂಧನ ಅಡಿಗ `ಪ್ರಾಚೀನ ಕೃಷಿ ದರ್ಶನ’ ವಿಷಯವಾಗಿ ಉಪನ್ಯಾಸ ನೀಡುವರು. ಸಂಜೆ 6.30ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ಮಧ್ಯಾಹ್ನ 3.30ಕ್ಕೆ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಸಮಾರೋಪ ನಡೆಯಲಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ ದಂಟಕಲ್, ಪ್ರಾಧ್ಯಾಪಕಿ ಡಾ.ವಸುಂಧರಾ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕ ಡಾ.ವಿ.ಐ.ಬೆಣಗಿ ಇವರು ಆಗಮಿಸುವರು. ಸಂಜೆ 6.30ರಿಂದ `ದೇಹದಾನಂ’ ಭರತನಾಟ್ಯ ರೂಪಕ ಪ್ರದರ್ಶನಗೊಳ್ಳಲಿದೆ. ಮುಂಜಾನೆ ಹೊರೆಗಾಣಿಕೆ ಸಮರ್ಪಣೆ, ಶತರುದ್ರಾಭಿಷೇಕ, ಫಲಾಪಂಚಾಮೃತ ಮಹಾಪೂಜೆ, ಮಹಾಮಂಗಳಾರತಿ ತೀರ್ಥ-ಪ್ರಸಾದ, ಸಂಜೆ ಮಹಾಪೂಜೆ, ರಾತ್ರಿ ಮಹಾರಥೋತ್ಸವ, ಅಷ್ಟಾವಧಾನ ಸೇವೆ ರಥೋತ್ಸವವದ ನಂತರ ಯಕ್ಷಶಾಲ್ಮಲಾ ಸಂಯೋಜನೆಯಲ್ಲಿ `ವೀರಮಣಿ ಕಾಳಗ’ ಯಕ್ಷಗಾನ ಬಯಲಾಟ ನಡೆಯಲಿದೆ. ಮುಖ್ಯವಾಗಿ ರಾಜ್ಯಮಟ್ಟದ ಕೃಷಿ ಆಧಾರಿತ ಉದ್ಯಮಗಳ ಪ್ರದರ್ಶನಗಳಿದ್ದು ಸ್ಥಳೀಯ ರೈತರು ಅಭಿವೃದ್ದಿಪಡಿಸಿದ ಸರಳ ಯಂತ್ರಗಳ ಪ್ರದರ್ಶನ ಸೇರಿದಂತೆ ಹಲವಾರು ರೈತ ಉಪಯೋಗಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದರು.
ಈ ವೇಳೆ ಕಾರ್ಯದರ್ಶಿ ಸುರೇಶ ಹಕ್ಕಿಮನೆ, ಪ್ರಮುಖರಾದ ಉಮಾಕಾಂತ ಭಟ್ಟ, ಎನ್.ಬಿ.ಹೆಗಡೆ, ಶಂಕರ ಹೆಗಡೆ, ರತ್ನಾಕರ ಬಾಡಲಕೊಪ್ಪ ಹಾಗೂ ಇತರರು ಇದ್ದರು.

loading...