ಐಪಿಎಲ್ ನಾಳೆ ಚೆನ್ನೈ ಮುಂಬೈ ಮುಖಾಮುಖಿ, ಸೋಲಿನ ಸುಳಿಯಿಂದ ಹೊರ ಬರುತ್ತಾ ರೋಹಿತ್ ಪಡೆ

0
36
loading...

ಪುಣೆ : ನಾಳೆ ಸಿಎಸ್ ಹಾಗೂ ಮುಂಬೈ ತಂಡಗಳ ನುಡುವಣ ಮತ್ತೊಂದು ರೋಚಕ ಪಂದ್ಯ ನಡೆಯಲಿದೆ.
ಈಗಾಗಲೇ ಐಪಿಎಲ್ ಟೂರ್ನಿಯಲ್ಲಿ ಕಳೆಪೆ ಪ್ರದರ್ಶನ ನೀಡುತ್ತಿರುವ ಮುಂಬೈ ಇಂಡಿಯನ್ಸ್ ತಂಡ ಧೋನಿ ತಂಡಕ್ಕೆ ಟಕ್ಕರ ನೀಡುವ ವಿಶ್ವಾಸದಲ್ಲಿದೆ. ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಮುಂಬೈ ಅದ್ಯಾಕೋ ಕಳಪೆ ಪ್ರದರ್ಶನ ನೀಡುತ್ತಿರುವದು ಅಭಿಮಾನಿಗಳಿಗೆ ನುಂಗಲಾರದ‌ ತುತ್ತಾಗಿದೆ. ಐಪಿಎಲ್ ಇತಿಹಾಸದಲ್ಲಿ ಮುಂಬೈ ಲಕ್ ಚೆನ್ನಾಗಿಯೆ ಇದೆ. ಇದಕ್ಕೆ ಸಾಕ್ಷಿಯನ್ನುವಂತೆ ಕಳೆದ ಕೆಲ ವರ್ಷಗಳಲ್ಲಿ ಟೂರ್ನಿಯ ಆರಂಭದಲ್ಲಿ ಕೆಲ ಪಂದ್ಯಗಳಲ್ಲಿ ಸೋಲುಂಡು ನಂತರ‌ ಸ್ಟ್ರಾಂಗ್‌ ಕಮ್ ಬ್ಯಾಕ್ ಮಾಡಿದ್ದು ದಾಖಲೆ ಇದೆ. ಈ ಬಾರಿಯೂ ಅದೇ ಚಾಳಿಯನ್ನು ಮುಂಬೈ ಮುಂದುವರೆಸುತ್ತಾ ನೋಡಬೆಕು.
ಮತ್ತೊಂದು ಕಡೆ‌ ಚೆನ್ನೈ ಟೂರ್ನಿಯಲ್ಲಿ ಬಲಿಷ್ಠ ತಂಡಗಳನ್ನು ಸದೆಬಡೆದಿದ್ದು ನಾಳೆ ನಡೆಯಲಿರುವ ಪಂದ್ಯದಲ್ಲಿ ಮುಂಬೈಗೆ ಟಾಂಗ್ ನೀಡುವ ತವಕದಲ್ಲಿದೆ. ಇಲ್ಲಿಯವರೆ ಧೋನಿ ಪಡೆ ಒಂದೇ ಒಂದು ಪಂದ್ಯ ಸೋತಿದ್ದು ಉಳಿದ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದೆ.
ಬಲಾಬಲ ನೋಡುವದಾದರೆ ಎರಡು ತಂಡಗಳು ಬಲಿಷ್ಟವಾಗಿದ್ದು ಬ್ಯಾಟಿಂಗ್ ಬೌಲಿಂಗ್ ನಲ್ಲಿ ಸಮಬಲ ಹೊಂದಿವೆ.

loading...