ಒಕ್ಕಲುತನ ಸಂಸ್ಕøತಿ ಜಾನಪದಕ್ಕೆ ಮೂಲಾಧಾರ: ಬಾಳನಗೌಡ

0
25
loading...

ಕನ್ನಡಮ್ಮ ಸುದ್ದಿ- ಬಸವನಬಾಗೇವಾಡಿ: ಜಾನಪದ ಸಂಸ್ಕøತಿಯು ಕೃಷಿಯಿಂದ ಬೆಳೆದು ಬಂದ ಶ್ರೇಷ್ಠ ಆಚಾರ ವಿಚಾರವಾಗಿದೆ. ಜಾನಪದಕ್ಕೆ ರೈತರು, ಶ್ರಮಿಕರು, ತಳವರ್ಗದವರು ಆಧಾರ ಎಂದು ಕನ್ನಡ ಜಾನಪದ ಪರಿಷತ್, ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಹೇಳಿದರು.
ತಾಲೂಕಿನ ವಡವಡಗಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ, ಕಜಾಪ ತಾಲೂಕ ಘಟಕ ಇವರ ಸಹಯೋಗದಲ್ಲಿ ವಡವಡಗಿ ನಂದಿಮಠದ ಜಾತ್ರೆ ನಿಮಿತ್ಯ ಏರ್ಪಡಿಸಿದ “ಜಾನಪದ ಸೌರಭ” ಹಾಗೂ ಕಜಾಪ ವಡವಡಗಿ ಗ್ರಾಮ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಜಾನಪದ ಕಲೆ ಮತ್ತು ಕಲಾವಿದರನ್ನು ಬೆಳೆಸುವ ಮೂಲಕ ಜಾನಪದ ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು. ಗ್ರಾಮ ಘಟಕದ ಪದಾಧಿಕಾರಿಗಳಿಗೆ ಪದಪತ್ರ ನೀಡಿ ಮಾತನಾಡಿದ ಕರ್ನಾಟಕ ಪುಸ್ತಕ ಪರಿಷತ್ ಜಿಲ್ಲಾಧ್ಯಕ್ಷ ಶಿವಾನಂದ ಮಂಗಾನವರ, ಮಠ-ಮಂದಿರ-ಜಾತ್ರೆಗಳ ಮೂಲಕ ಭಾರತದ ಸಂಸ್ಕøತಿಯನ್ನು ಅನಾವರಣಗೊಳಿಸುತ್ತಾ ಜೋಪಾನ ಮಾಡಬೇಕಾಗಿದೆ ಎಂದÀು ಹೇಳಿದರು.

ವೇದಿಕೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳು, ಕಲ್ಯಾಣ ಸ್ವಾಮಿಗಳು, ಜಿ.ಎಸ್. ಕಶೆಟ್ಟಿ, ಬಸವನಬಾಗೇವಾಡಿ ಕಜಾಪ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ, ಎಸ್.ಜಿ. ಡೆಂಗಿ, ವಿರುಪಾಕ್ಷಯ್ಯ ಶಾಸ್ತ್ರಿಗಳು, ಈರಣ್ಣ ಮಾನಿಂಗಪ್ಪಗೋಳ ಗ್ರಾಮ ಘಟಕದ ಅಧ್ಯಕ್ಷ ವ್ಹಿ.ಎಸ್. ಹುಲಸೂರ, ವೀರೇಶ ಕೋಳೂರ, ರವಿ ನಾಡಗೌಡ, ಶಿವಯೋಗಿ ಹುಲಿಕಂತಿಮಠ ಉಪಸ್ಥಿತರಿದ್ದರು. ನಿಡಗುಂದಿ ತಾಲೂಕಾ ಅಧ್ಯಕ್ಷ ವೈ.ಎಸ್. ಗಂಗಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಗಂಗಶೆಟ್ಟಿ ಸ್ವಾಗತಿಸಿದರು. ಬಿ.ಎಸ್. ಬಸರಕೋಡ ನಿರೂಪಿಸಿದರು. ಶಿವರುದ್ರಪ್ಪ ಡೆಂಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಕೊಣ್ಣೂರಿನ ಜೈಕಿಸಾನ ಜಾನಪದ ತಂಡದವರಿಂದ ಜೋಗತಿ ನೃತ್ಯ, ಗಂಗನಳ್ಳಿ ಹಂತಿಮೇಳದವರಿಂದ ಹಂತಿ ಪದಗಳು ಹಾಗೂ ಭಜನಾಪದಗಳು, ಸಂಪ್ರದಾಯಪದ, ಗೊಂದಳಿಪದ, ಹಂತಿಪದ ಮುಂತಾದ ಕಲಾವಿದರ ಕಲಾ ಪ್ರದರ್ಶನ ಜನಮನ ಸೂರೆಗೊಂಡವು.

loading...