ಒಟ್ಟಾಗಿ ಶ್ರಮಿಸಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಲಿದ್ದೇವೆ: ಮಾರ್ಕಂಡೆ

0
11
loading...

ಕನ್ನಡಮ್ಮ ಸುದ್ದಿ-ಕುಮಟಾ: ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದ್ದು, ಎಲ್ಲಾ ಟಿಕೆಟ್ ಆಕಾಂಕ್ಷಿಗಳು ಒಟ್ಟಾಗಿ ಶ್ರಮಿಸಿ ಬಿಜೆಪಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಲಿದ್ದೇವೆ ಎಂದು ತಾಲೂಕಾ ಮಂಡಲದ ಅಧ್ಯಕ್ಷ ಕುಮಾರ ಮಾರ್ಕಂಡೆ ಹೇಳಿದರು.
ಅವರು ಸೋಮವಾರ ಪಕ್ಷದ ಕಛೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಬೆಜೆಪಿ ಅಭ್ಯರ್ಥಿಯಾದ ದಿನಕರ ಶೆಟ್ಟಿ ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಿದ್ದು, ಮಂಗಳವಾರ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನೇತೃತ್ವದಲ್ಲಿ ಎರಡನೇ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಬಿಜೆಪಿ ಕಾರ್ಯಾಲಯದಿಂದ ಮೆರವಣಿಗೆಯು ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಹಾಯಕ ಆಯುಕ್ತರಿಗೆ ನಾಮಪತ್ರ ಸಲ್ಲಿಸಲಾಗುವುದು. ಬಳಿಕ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಸಚಿವರು ಮಾತನಾಡಿ ಕಾರ್ಯಕರ್ತರನ್ನು ಹುರಿದುಂಬಿಲಲಿದ್ದಾರೆ ಎಂದರು.

ಡಾ ಜಿ ಜಿ ಹೆಗಡೆ ಹಾಗೂ ನಾಗರಾಜ ನಾಯಕ ತೊರ್ಕೆ ಮಾತನಾಡಿ, ಬಿಜೆಪಿಯು ಒಂದು ಆದರ್ಶವಾದ ಪಕ್ಷವಾಗಿದೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮೇಲು, ಪಕ್ಷಕ್ಕಿಂತ ರಾಷ್ಟ್ರ ಮೇಲು. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪ್ರತಿಯೊಬ್ಬರು ತಮ್ಮನ್ನು ತೊಡಗಿಸಿಕೊಳ್ಳಬೇಕು. ನಾನು ಒಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದು, ವರಿಷ್ಠರ ತೀರ್ಮಾನಿಸಿದ ಅಭ್ಯರ್ಥಿ ಆಯ್ಕೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲಾಗಿದೆ. ಪ್ರತಿಯೊಬ್ಬ ಕಾರ್ಯಕರ್ತನಿಗೂ ಪಕ್ಷದಲ್ಲಿ ಗೌರವವಿದೆ. ಎಲ್ಲರೂ ಒಟ್ಟಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಲಾಗುತ್ತದೆ ಎಂದರು.
ವೆಂಕಟರಮಣ ಹೆಗಡೆ ಕವಲಕ್ಕಿ ಮಾತನಾಡಿ, ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರು ಟಿಕೆಟ್ ನೀಡುವದಾಗಿ ನನಗೆ ಭರವಸೆಯನ್ನು ನೀಡಿದ್ದರು. ಈಗ ಟಿಕೆಟ್ ಘೋಷಣೆಯಾಗಿದ್ದು, ನನಗೆ ಸಿಗದಿರುವುದರಿಂದ ಬೇಸರವಾಗುವುದು ಸಹಜ. ಆದರೆ ಈಗ ನಮ್ಮಲ್ಲಿ ಯಾವ ಭಿನ್ನಾಭಿಪ್ರಾಯಗಳಿಲ್ಲದೇ ಒಮ್ಮತದಿಂದ ಶ್ರಮಿಸುವ ಜೊತೆಗೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು. ಎಂದರು.

ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪ್ರಶಾಂತ ನಾಯ್ಕ, ಜಿ ಎಸ್ ಗುನಗಾ, ಅಶೋಕ ಪ್ರಭು, ಜಿ ಐ ಹೆಗಡೆ, ಹೇಮಂತ ಗಾಂವಕರ, ವೆಂಕಟರಮಣ ನಾಯಕ, ರಾಧಕೃಚ್ಣ ಗೌಡ, ಲೋಕನಾಥ ಗೌಡ, ಮತ್ತಿತರರು ಇದ್ದರು.

loading...