ಕರ್ತವ್ಯ ಲೋಪ : ಅಮಾನತ್ ಆದೇಶ ರದ್ದು

0
9
loading...

ಗದಗ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ಕೆ ನಿಯುಕ್ತಿಗೊಳಿಸಿದ್ದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ 13 ಶಿಕ್ಷಕರನ್ನು ಹಾಗೂ ರೋಣ ತಾಲೂಕಿನ ನಿಡಗುಂದಿಯ ಓರ್ವ ಶಿಕ್ಷಕಿಯನ್ನು ಕರ್ತವ್ಯ ಲೋಪವೆಸಿದ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ಅವರು ಅಮಾನತಗೊಳಿಸಿ ಆದೇಶ ಹೊರಡಿಸಿದ್ದನ್ನು ಇದೀಗ ಅವರೇ ರದ್ದುಪಡಿಸಿದ್ದಾರೆ.

ಶಿರಹಟ್ಟಿ ತಾಲೂಕಿನಲ್ಲಿ ವಿವಿದ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರಾದ ಎಸ್.ಜಿ.ಅಮ್ಮಿನಬಾವಿ, ಶ್ರೀಮತಿ ಎಂ.ಎಂ.ಲಿಂಗಶೆಟ್ಟರ, ಎಸ್.ಬಿ.ಲಕ್ಷ್ಮೇಶ್ವರ, ಎಸ್.ಜೆ.ದಾಸರ, ಬಿ.ಆರ್.ಪಾಟೀಲ, ಎಸ್.ಬಿ.ಹಾವನೂರ, ಎಂ.ವ್ಹಿ.ದಾಮೋದರ, ಎಸ್.ಟಿ.ಕಬ್ಬಿಣದ, ಆರ್.ಎಂ.ಮಡಿವಾಳರ, ಎನ್.ಎಸ್.ತಳವಾರ, ಎ.ಆರ್.ಪಟ್ಟಣದ, ಎಸ್.ಬಿ.ಹೊಟ್ಟಿ, ಸಿ.ಬಿ.ಬಕ್ಸದ ಹಾಗೂ ರೋಣ ತಾಲೂಕಿನ £ಡಗುಂದಿಯ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕಿ ಶ್ರೀಮತಿ ಗಿರಿಜಾದೇವಿ ತೋಪನಕಟ್ಟಿ ಅಮಾನತ್ ಮಾಡಲಾಗಿದೆ ಎಂದು ಆದೇಶ ಹೊರಡಿಸಿದ್ದರು.
ಜಿಲ್ಲಾಧಿಕಾರಿಗಳು ಎ. 13 ಇನ್ನೊಂದು ಆದೇಶ ಹೊರಡಿಸಿ ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯನಿರ್ವಹಿಸಿದ್ದಾರೆಂದು ಶಿರಹಟ್ಟಿ ತಹಶೀಲ್ದಾರ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ವರದಿಯನ್ನು ಆಧರಿಸಿ ಹಾಗೂ ಪೂರಕ ದಾಖಲೆಗಳನ್ನು ಗಮನಿಸಿ ಅಮಾನತ್ ಅದೇಶವನ್ನು ತಕ್ಷಣದಿಂದ ಜಾರಿಗೊಳಿಸಿದ್ದಲ್ಲದೆ ಎ. 8 ರಿಂದ 13ರ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿದೆ ಎಂದು ಆದೇಶದಲ್ಲಿ ವಿವರಿಸಿದ್ದಾರೆ.

loading...