ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸಿ: ವಾಳ್ಕೆ

0
20
loading...

ಕನ್ನಡಮ್ಮ ಸುದ್ದಿ-ಕುಮಟಾ: ಸುಗ್ಗಿ ಉತ್ಸವ ಈ ಪ್ರದೇಶದಲ್ಲಿ ಹಬ್ಬದ ಸಂಭ್ರಮವನ್ನು ಸೃಷ್ಟಿ ಮಾಡಿದೆ. ತ್ಯಾಗಮಯ ಬದುಕು ಇಲ್ಲಿನ ಜನತೆಯಲ್ಲಿ ಕಾಣುವುದು ಸಂತೋಷದ ವಿಷಯ. ಇಂಥಹ ಕಾರ್ಯಕ್ರಮಗಳು ಜನರಲ್ಲಿ ಉತ್ಸಾಹ ಹೆಚ್ಚಿಸುವ ಜತೆಗೆ ಸಾಂಸ್ಕøತಿಕ ವಾತಾವರಣ ನಿರಂತರತೆಗೆ ಕಾರಣವಾಗಿದ್ದು, ಸಂಸ್ಕøತಿಯನ್ನು ಮುಂದಿನ ಪೀಳಿಗಾಗಿ ಉಳಿಸಿ ಬೆಳೆಸುವ ಮೂಲಕ ಮಹತ್ವದ್ದೆನಿಸಿದೆ ಎಂದು ಬಿಜೆಪಿ ಮುಖಂಡ ಹಾಗೂ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಅಭಿಪ್ರಾಯ ಪಟ್ಟರು.
ಅವರು ಇತ್ತೀಚೆಗೆ ತಾಲೂಕಿನ ಅಘನಾಶಿನಿ ಹಾಲಕ್ಕಿ ಒಕ್ಕಲಿಗರ ಕಲಾಭವನದ ಸಮೀಪದ ಅಘನಾಶಿನಿಯ ಶ್ರೀ ಹೊಲೇಟ್ರ ಸಾಂಸ್ಕøತಿಕ ಸೇವಾ ಸಂಘ ಇವರ ಆಶ್ರಯದಲ್ಲಿ ನಡೆದ ಅಘನಾಶಿನಿ ಸುಗ್ಗಿ ಉತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಹೊಸ ನಾಡನ್ನು ಕಟ್ಟುವ ಕಾರ್ಯ ಸುಗ್ಗಿ ಉತ್ಸವ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸುವ ಕೆಲಸ ನಮ್ಮೆಲ್ಲರಲ್ಲಿ ಆಗಬೇಕು. ಇಂತಹ ಗ್ರಾಮೀಣ ಪ್ರದೇಶದಲ್ಲಿ ಒಗ್ಗಟ್ಟಿನಿಂದ ಅತ್ಯುತ್ತಮ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸಿದ ಆಯೋಜಕರನ್ನು ಶ್ಲಾಘಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಬಿ ಜೆಪಿ ಮುಖಂಡ ಡಾ ಜಿ ಜಿ ಹೆಗಡೆ, ಪ್ರಮುಖರಾದ ವೆಂಕಟ್ರಮಣ ಗೌಡ, ಅಶೋಕ ಗಂಗಾಧರ ನಾಯ್ಕ, ಯಶವಂತ ಅಂಬಿಗ, ಗಣ್ಯ ರಘುವೀರ ಶೆಟ್ಟಿ ಹಾಗೂ ಊರನಾಗರಿಕರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಬಿ ಎಸ್ ಆರ್ ನಾಟಕ ಸಂಘ (ಗುಬ್ಬಿ) ಇವರಿಂದ ಕುಂಟ ಕೋಣ ಮೂಕ ಜಾಣ ನಾಟಕ ಪ್ರದರ್ಶಿತಗೊಂಡಿತು.

loading...