ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ವಿವಿಧ ಪಕ್ಷದ ಕಾರ್ಯಕರ್ತರು

0
26
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಚುನಾವಣೆ ಸಂದರ್ಭದಲ್ಲಿರುವಾಗ ಪಕ್ಷದಲ್ಲಿ ಸಣ್ಣ-ಪುಟ್ಟ ವಿಷಯಕ್ಕೆ ಸಂಬಂಧಿಸಿದಂತೆ ಗೊಂದಲಕ್ಕೆ ಅವಕಾಶ ನೀಡದೇ ನಮ್ಮ ಅಭ್ಯರ್ಥಿಗಳನ್ನು ಅತ್ಯಂತ ಹೆಚ್ಚಿನ ಬಹುಮತದಿಂದ ಗೆಲ್ಲಿಸುವ ಹೊಣೆ ಎಲ್ಲರ ಮೇಲಿದೆ. ಅದರಲ್ಲೂ ಅತ್ಯಂತ ಕ್ರಿಯಾಶೀಲ ಶಾಸಕರು ನಿಮಗೆ ದೊರೆತಿದ್ದಾರೆ. ಅವರ ಸಾಮರ್ಥ್ಯ ನಿಮ್ಮೆಲ್ಲರ ಸೇರ್ಪಡೆಯಿಂದ ಇನ್ನೂ ಹೆಚ್ಚು ಘಟ್ಟಿಯಾಗಬೇಕಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಂ.ಎಲ್‌.ಮೂರ್ತಿ ಹೇಳಿದರು.
ಅವರು ಗುರುವಾರ ಪಟ್ಟಣದ ಎ.ಪಿ.ಎಂ.ಸಿ ಆವಾರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಬಿ.ಜೆ.ಪಿ ಮತ್ತು ಜೆ.ಡಿ.ಎಸ್‌ ಪಕ್ಷದ ಕಾರ್ಯಕರ್ತರ ಬಹುಸಂಖ್ಯೆಯ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡಿಸಿಕೊಂಡು ಮಾತನಾಡಿದರು.
ನಮ್ಮ ಪಕ್ಷದ ಕಾರ್ಯಕರ್ತರು ನಾನು ಮಾಡಿದ ಸಾಧನೆಯ ಚಿತ್ರವನ್ನು ಗಮನಿಸಿ ಮತದಾರರಿಗೆ ಸರಿಯಾಗಿ ತಲುಪಿಸಬೇಕಾಗಿದೆ ಎಂದ ಅವರು, ಪಟ್ಟಣದ ರವೀಂದ್ರ ನಗರದ 45 ಕ್ಕೂ ಹೆಚ್ಚಿನ ಬಿ.ಜೆ.ಪಿ ಮತ್ತು ಜೆ.ಡಿ.ಎಸ್‌ ನ ಯುವಕರು ನಮ್ಮ ಪಕ್ಷಕ್ಕೆ ಬಂದಿರುವುದು ಸಂತಸ ತಂದಿದೆ. ಅಲ್ಲದೇ ಮುಂಡಗೋಡ ಭಾಗದಿಂದಲೂ ಜೆ.ಡಿ.ಎಸ್‌ ಪಕ್ಷದ 25 ಕ್ಕೂ ಕಾರ್ಯಕರ್ತರು ಸೇರ್ಪಡೆಯಾಗಿರುವುದು ಈ ಚುನಾವಣೆಯಲ್ಲಿ ನಮಗೆ ಇನ್ನೂ ಹೆಚ್ಚಿನ ಶಕ್ತಿ ದೊರಕಿದೆ ಎಂದರು.
ಮುಂಡಗೋಡಿನ ಹಿರಿಯ ಕಾಂಗ್ರೆಸ್‌ ಮುಖಂಡ ವಿ.ಎಸ್‌.ನಾಯ್ಕ, ಯಲ್ಲಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಿ.ಎನ್‌.ಗಾಂವ್ಕರ್‌, ಮುಂಡಗೋಡ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರವಿ ಗೌಡ ಪಾಟೀಲ್‌, ಬನವಾಸಿ ಭಾಗದ ದ್ಯಾಮಣ್ಣ ದೊಡ್ಡಮನಿ, ಜಿಲ್ಲಾ ಉಸ್ತುವಾರಿ ಎಸ್‌.ಎಂ,ನಾಯ್ಕ, ವಿಜಯ ಮಿರಾಶಿ, ಶ್ರೀಕಾಂತ ಶೆಟ್ಟಿ, ಪ್ರೇಮಾನಂದ ನಾಯ್ಕ, ಶೋಭಾ ಹುಲ್ಮನಿ, ಶಿರೀಶ ಪ್ರಭು, ಲೋಕನಾಥ ಗಾಂವ್ಕರ್‌ ಮತ್ತಿತರರು ಉಪಸ್ಥಿತರಿದ್ದರು.

loading...