ಕಾಂಗ್ರೆಸ್‌ ಪಕ್ಷವನ್ನು ಬೇರು ಸಮೇತ ಕಿತ್ತೆಸೆಯಿರಿ: ಸಚಿವೆ ಸ್ಮೃತಿ ಇರಾನಿ

0
42
loading...

ಕನ್ನಡಮ್ಮ ಸುದ್ದಿ- ಬೈಲಹೊಂಗಲ: ವೀರವನಿತೆ ಕಿತ್ತೂರು ರಾಣಿ ಚನ್ನಮ್ಮನಂತೆ ಈಗಿನ ಮಹಿಳೆಯರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಮೇ.12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೇರು ಸಮೇತ ಕಿತ್ತೆಸೆದು ರಾಜ್ಯದಲ್ಲಿ ಬಿಜೆಪಿ ಪಕ್ಷ ಕಮಲವನ್ನು ಅರಳಿಸಬೇಕು’ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಹೇಳಿದರು.
ಅವರು ಶನಿವಾರ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಭೇಟಿ ನೀಡಿ ನಂತರ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಬೈಲಹೊಂಗಲ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಡಾ.ವಿಶ್ವನಾಥ ಪಾಟೀಲ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಬಿಜೆಪಿ ಬೃಹತ್‌ ಮಹಿಳಾ ಸಮಾವೇಶವನ್ನು ತುಳಿಸಿ ಗಿಡಕ್ಕೆ ನೀರುಣಿಸಿ ಚಾಲನೆ ನೀಡಿ ಮಾತನಾಡಿದ ಅವರು,ಚನ್ನಮ್ಮನ ಐಕ್ಯ ಸ್ಥಳಕ್ಕೆ ಬಂದು ಪುಷ್ಪ ನಮನ ಸಲ್ಲಿಸಿರುವದು ಪೂರ್ವ ಜನ್ಮದ ಪುಣ್ಯವಾಗಿದೆ.ದೇಶದಲ್ಲಿ ಮಹಿಳೆಯರಿಗೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ನೀಡಿ ಉನ್ನತ್ತ ಮಟ್ಟದಲ್ಲಿ ಮಹಿಳೆಯರನ್ನು ಕರೆದೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಮಹಿಳೆಯರು ಮನೆಯ ಭಾಗ್ಯಲಕ್ಷ್ಮೀ ಇದ್ದಂತೆ, ಲಕ್ಷ್ಮೀ ಮನೆಗೆ ಬರುವಾಗ ಕೈ ಹಿಡಿದು ಬರುವದಿಲ್ಲ. ಕಮಲದ ಮೇಲೆ ಕುಳಿತ್ತುಕೊಂಡು ಬರುತ್ತಾಳೆ. ಅದಕ್ಕಾಗಿ ನಮ್ಮ ತಾಯಂದಿರು ಕಮಲ ಅರಳಿಸಲು ಸಜ್ಜಾಗಬೇಕು ಎಂದು ಕರೆ ನೀಡಿದರು.
ಬಡತನ ರೇಖೆಗಿಂತ ಕೆಳಗಿರುವ ಜನರನ್ನು, ರೈತರನ್ನು ಉದ್ಧರಿಸಲು ಕೇಂದ್ರ ಸರ್ಕಾರ ಸಾಕಷ್ಟು ಅಭಿವೃದ್ಧಿ ಪರ ಕಾರ್ಯಕ್ರಮ ನೀಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಿಳಾ ಸಶಕ್ತಿಗೋಸ್ಕರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ದೇಶದ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸಿದ್ದಾರೆ. ಭವ್ಯ ಭಾರತದ ಭವಿಷ್ಯತ್ತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜನಧನ ಯೋಜನೆಯಡಿಯಲ್ಲಿ 34 ಕೋಟಿ ಹೊಸ ಖಾತೆ ತೆರೆದು ಬಡವರಿಗೆ ಅನುಕೂಲ ಕಲ್ಪಿಸಿದ್ದಾರೆ. ಶೇ.50ರಷ್ಟು ಮಹಿಳೆಯರು ಜನಧನ ಯೋಜನೆ ಖಾತೆ ತೆರೆದಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದರು.
ವಿಧಾನ ಪರಿಷತ್‌ ಸದಸ್ಯೆ, ರಾಜ್ಯ ಮಹಿಳಾ ಮೋರ್ಚಾ ಘಟಕ ಅಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಜನತೆಯನ್ನು ಬಿಸಿ ತುಪ್ಪದಲ್ಲಿ ಇರಿಸಿದೆ. ಆಡಳಿತ ಅವಧಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಹಿಂಸೆ, ದಬ್ಬಾಳಿಕೆ ಮೀತಿ ಮೀರಿದೆ. ನಿಷ್ಠಾವಂತ ಅಧಿಕಾರಿಗಳು ಹತ್ಯೆಗೆ ಒಳಗಾಗುತ್ತಿದ್ದಾರೆ. ಕಿತ್ತೂರು ಚನ್ನಮ್ಮನ ನಾಡಿನಲ್ಲಿರುವ ಮಹಿಳೆಯರು ಒಡೆದಾಳುವ ನೀತಿಯನ್ನು ಖಂಡಿಸಿ ಕಾಂಗ್ರೆಸ್‌ ಪಕ್ಷವನ್ನು ದೂಳಿ ಪಠ ಮಾಡಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕು’ ಎಂದರು.
ಸಂಸದ ಸುರೇಶ ಅಂಗಡಿ, ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿದರು. ವೇದಿಕೆ ಮೇಲೆ ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಜಿಲ್ಲಾ ಕಾರ್ಯದರ್ಶಿಗಳಾದ ಗೂಳಪ್ಪ ಹೊಸಮನಿ, ಗುರುಪಾದ ಕಳ್ಳಿ, ಪ್ರೀತಿ ಪಾಟೀಲ, ದೀಪಾ ಕುಡಚಿ, ಧನಶ್ರೀಸರ ದೇಸಾಯಿ ಇದ್ದರು. ಇದೇ ವೇಳೆ ಅಲ್ಪ ಸಂಖ್ಯಾತರ ಮಹಿಳಾ ಮೋರ್ಚಾ ಸದಸ್ಯೆಯರು ಸಚಿವೆ ಅವರನ್ನು ಸತ್ಕರಿಸಿದರು. ಮಂಡಲ ಅಧ್ಯಕ್ಷೆ ರತ್ನಾವ್ವ ಗೋಧಿ, ಅನಿತಾ ಹೋಟಿ, ಶ್ರೀದೇವಿ ಹೋಟಿ, ರೂಪಾ ಯಡಳ್ಳಿ, ಬಸಮ್ಮ ದುಗ್ಗಾಣಿ, ರಾಜೇಶ್ವರಿ ಸುತ್ತಗಟ್ಟಿ, ಮಂಜುಳಾ ದೇವರೆಡ್ಡಿ, ಜಯನಾಬಿ ಗೋವೆ, ದೀಪಾ ಜಕ್ಕಪ್ಪನವರ, ವಿಜಯಲಕ್ಷ್ಮೀ ಬೋರಕನವರ, ದೀಪಾ ಜಕ್ಕಪ್ಪನವರ, ಮಂಜುಳಾ ಮಲ್ಲಾಪೂರ, ವಿದ್ಯಾ ರಾಮನ್ನವರ, ವಿದ್ಯಾ ಚಿಕ್ಕಮಠ, ಜನಾಬಿ ಗೋವೆ, ಸಿ.ಕೆ.ಮೆಕ್ಕೇದ, ಸಂಜಯ ಗಿರೆಪ್ಪಗೌಡರ, ಎಫ್‌.ಎಸ್‌.ಸಿದ್ದನಗೌಡರ, ಮುರಗೇಶ ಗುಂಡ್ಲೂರ, ಗುರುಪಾದ ಕಳ್ಳಿ, ಚಂದ್ರಶೇಖರ ಚಿನಿವಾಲರ, ನಿಂಗಪ್ಪ ಚೌಡನ್ನವರ, ಮಹಾಂತೇಶ ಕಮತ, ಜಗದೀಶ ಕೋತಂಬ್ರಿ, ಸಂಜಯ ಗಡತರನವರ, ವಿಶಾಲ ಹೊಸೂರ, ಆಸೀಫ ಗೋವೆ, ಕ್ಷೇತ್ರದ ಸುಮಾರು 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಿದ್ದರು. ದೀಪಾ ಪತ್ತಾರ ಪ್ರಾರ್ಥಿಸಿದರು. ಪ್ರೀತಿ ಪಾಟೀಲ ಸ್ವಾಗತಿಸಿದರು. ಮಹಾದೇವಿ ಕಿತ್ತೂರು ವಂದಿಸಿದರು.

loading...