ಕಾಂಗ್ರೆಸ್‌ ಪದಾಧಿಕಾರಿಗಳು ಬಿಜೆಪಿಗೆ ಸೇರ್ಪಡೆ

0
122
loading...

ಕನ್ನಡಮ್ಮ ಸುದ್ದಿ-ಹುಕ್ಕೇರಿ : ಕಾಂಗ್ರೆಸ್‌ ಪಕ್ಷದ ಹುಕ್ಕೇರಿ ಹಾಗೂ ಸಂಕೇಶ್ವರ ನಗರದ ವಿವಿಧ ಘಟಕಗಳ ಪದಾಧಿಕಾರಿಗಳು ತಮ್ಮ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಪಟ್ಟಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಪಕ್ಷಕ್ಕೆ ಆಗಮಿಸಿದ ಪದಾಧಿಕಾರಿಗಳನ್ನು ಶಾಸಕ ಉಮೇಶ ಕತ್ತಿ ಅವರು ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.
ಹುಕ್ಕೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ಶರೀಫಾ ನದಾಫ್‌, ವಿರುಪಾಕ್ಷಿ ಮರೆನ್ನವರ, ಅರುಣ ಹುದ್ದಾರ, ಯಾಸಿನ್‌ ತಹಸೀಲದಾರ ಹಾಗೂ ಸಂಕೇಶ್ವರದ ಮಹಾದೇವ ಕೇಸರಕರ, ಬಂಡು ಸೂರ್ಯವಂಶಿ, ರಾಹುಲ ಹಂಜಿ, ಮಹಾದೇವಿ ಜಯಕರ ಮತ್ತಿತರರು ತಮ್ಮ ನೂರಾರು ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು. ಬಳಿಕ ಶಾಸಕ ಉಮೇಶ ಕತ್ತಿ ಮಾತನಾಡಿ, ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ನೂತನವಾಗಿ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು. ಜತೆಗೆ ಅವರ ಬೆಂಬಲಿಗರ ಬೇಡಿಕೆಯನ್ನೂ ಬರುವ ದಿನಗಳಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದರು. ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಶಶಿಕಾಂತ ನಾಯಿಕ, ಅಶೋಕ ಪಟ್ಟಣಶೆಟ್ಟಿ, ಜಯಗೌಡ ಪಾಟೀಲ, ಬಂಡು ಹತನೂರೆ, ಅಮರ ನಲವಡೆ, ಪರಗೌಡ ಪಾಟೀಲ, ರವೀಂದ್ರ ಶೆಟ್ಟಿ, ವಾಗ್ದೇವಿ ತಾರಳಿ, ವಿರೇಶ ಗಜಬರ, ರಂಗನಾಥ ಬಾರಕೇರ, ನಜೀರ ಮೋಮಿನದಾದಾ ಮತ್ತಿತರರು ಉಪಸ್ಥಿತರಿದ್ದರು.

loading...