ಕಾಂಗ್ರೆಸ್‌ ಬಲಪಡಿಸಬೇಕು: ಸಚಿವ ದೇಶಪಾಂಡೆ

0
17
loading...

ಕನ್ನಡಮ್ಮ ಸುದ್ದಿ-ಕುಮಟಾ: ರಾಜ್ಯ ಸರಕಾರ ಚುನಾವಣಾ ಘೋಷಣೆಗಳನ್ನು ಅಕ್ಷರಶಹ ಪೂರೈಸಿದೆ. ಕಾಂಗ್ರೆಸ್‌ ಸರಕಾರದ ಕಾರ್ಯಕ್ರಮ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಅದು ರಾಜ್ಯದ ಎಲ್ಲಾ ಜನರಿಗೂ ಸೇರಿದ್ದು. ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ 5 ವರ್ಷಗಳ ಕಾಲ ಜನಪರ ಯೋಜನೆಗಳನ್ನು ಜನತೆಗೆ ನೀಡುವ ಮೂಲಕ ಪಾರದರ್ಶಕ ಆಡಳಿತ ನಡೆಸಿದ್ದರಿಂದ ರೈತರ, ಬಡವರ ಪರವಾದ ಕಾಂಗ್ರೆಸ್‌ನ ಶಕ್ತಿಯನ್ನು ಬಲಪಡಿಸಬೇಕು ಎಂದು ಸಚಿವ ಆರ್‌ ವಿ ದೇಶಪಾಂಡೆ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಹಾಲಕ್ಕಿ ಮುಖಂಡ ಮಂಜುನಾಥ ಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಶಾಸಕಿ ಶಾರದಾ ಮೋಹನ ಶೆಟ್ಟಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಎಂಎಲ್‌ಸಿ ಎಸ್‌ ಎಲ್‌ ಘೊಟ್ನೇಕರ್‌, ಯುವ ಮುಖಂಡ ರವಿಕುಮಾರ ಶೆಟ್ಟಿ, ಪುರಸಭೆ ಅಧ್ಯಕ್ಷ ಮಧುಸೂಧನ ಶೇಟ್‌, ಮಹಿಳಾ ಜಿಲ್ಲಾಧ್ಯಕ್ಷೆ ತಾರಾ ಗೌಡ, ಕುಮಟಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿ ಎಲ್‌ ನಾಯ್ಕ, ಹೊನ್ನಾವರ ಬ್ಲಾಕ್‌ ಅಧ್ಯಕ್ಷ ಜಗದೀಶ ತೆಂಗೇರಿ, ಜಿಪಂ ಸದಸ್ಯ ರತ್ನಾಕರ ನಾಯ್ಕ, ತಾಪಂ ಸದಸ್ಯ ಜಗನ್ನಾಥ ನಾಯ್ಕ, ಪ್ರಮುಖರಾದ ಸಾಯಿ ಗಾಂವ್ಕರ್‌, ವಿನಾಯಕ ಶೇಟ್‌ ಹಾಗೂ ಕಾಂಗ್ರೆಸ್‌ನ ತಾಪಂ ಸದಸ್ಯರು, ಗ್ರಾಪಂ ಅಧ್ಯಕ್ಷರು, ಗ್ರಾಪಂ ಉಪಾಧ್ಯಕ್ಷರು ಮತ್ತು ಮೊದಲಾದವರು ಉಪಸ್ಥಿತರಿದ್ದರು.

loading...