ಕಾಂಗ್ರೆಸ್‌ ಸರ್ಕಾರ ರೈತ ವಿರೋಧಿ: ಯಡಿಯೂರಪ್ಪ ಆರೋಪ

0
8
loading...

ನರಗುಂದ: ಬೆಟರ್‌ಮೆಂಟ್‌ ಲೇವ್ಹಿಗಾಗಿ 1980 ರಲ್ಲಿ ನರಗುಂದದಲ್ಲಿ ನಡೆದ ಬಂಡಾಯದಿಂದ ನರಗುಂದ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳಾದವು. ಆಗಿನ ಕಾಂಗ್ರಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಗುಂಡುರಾವ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಕಾಂಗ್ರೆಸ್‌ ಸರ್ಕಾರ ರೈತ ವಿರೋಧಿಯಾಗಿದೆ. ಕೇಂದ್ರ ಸರ್ಕಾರದಿಂದ ಬಿಡುಗಡೆಗೊಳಿಸಿದ ಅನುದಾನವನ್ನು ಸರಿಯಾಗಿ ಬಳಸಿಕೊಂಡಿಲ್ಲ. ರೈತರಿಗೆ ನೀಡಬೇಕಾದ ತಕ್ಕ ಮಟ್ಟಿನ ಬರ ಪರಿಹಾರ ನೀಡಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇಂದಿಲ್ಲಿ ರಾಜ್ಯದ ಕಾಂಗ್ರೆಸ್‌ ಆಡಳಿತ ನೀತಿಯನ್ನು ಟೀಕಿಸಿದರು.
ಪಟ್ಟಣದ ಗಾಂಧಿ ವರ್ತುಲದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ ಪರ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಬಹಿರಂಗ ಪ್ರಚಾರದ ಸಭೆಯಲ್ಲಿ ಮಾತನಾಡಿ, ರೈತರ ಬದುಕಿಗಾಗಿ ಶ್ರಮಿಸಲು ಗುರಿಯಿಟ್ಟುಕೊಂಡು ಪ್ರಾಣತ್ಯಾಗ ಮಾಡಿದ ಈರಪ್ಪ ಕಡ್ಲಿಕೊಪ್ಪ ಹಾಗೂ ನವಲಗುಂದ ತಾಲೂಕಿನ ಅಳಗವಾಡಿಯ ಬಸಪ್ಪ ಲಕ್ಕುಂಡಿ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಭೇಡಿಕೊಂಡರು. 50 ವರ್ಷ ಈ ರಾಜ್ಯವನ್ನು ಆಳಿದ ಕಾಂಗ್ರೆಸ್‌ ಸರ್ಕಾರ ರೈತರ ಬಗ್ಗೆ ಕಿಂಚಿತ್ತೂ ಕಾಳಜೀ ಮಾಡಲಿಲ್ಲ. ನೀರಾವರಿ ಕಾಲುವೆಗಳನ್ನು ದುರಸ್ತಿಮಾಡಲಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಲಪ್ರಭಾ ಕಾಲುವೆಗಳ ನವೀಕರಣಕ್ಖಾಗಿ ಆಗಿನ ಸರ್ಕಾರದಲ್ಲಿ 330 ಕೋಟಿ ರೂ ಬಿಡುಗಡೆಗೊಳಿಸಿ ಕಾಲುವೆಗಳ ದುರಸ್ತಿ ಕಾರ್ಯ ನಡೆಸಲಾಯಿತು. ಕಳಸಾ ಬಂಡೂರಿ ಈ ಭಾಗದ ರೈತರ ಜೀವನಾಡಿ ಎಂದು ಅರಿತು ಆಗಿನ ಬಿಜೆಪಿ ಸರ್ಕಾರದಲ್ಲಿ 120 ಕೋಟಿ ರೂ ಬಿಡುಗಡೆಗೊಳಿಸಿ ಕಳಸಾ ಕಾಲುವೆ ಕಾಮಗಾರಿ ನಡೆಸಿದರೆ. ಸೋನಿಯಾ ಗಾಂಧಿ ಕಳಸಾ ಬಂಡೂರಿ ಹಾಗೂ ಮಹದಾಯಿಯಿಂದ ಕರ್ನಾಟಕ್ಕೆ ಒಂದು ಹನಿ ನೀರು ನೀಡುವುದಿಲ್ಲವೆಂದು ಗೋವಾ ಸರ್ಕಾರಕ್ಕೆ ಲಿಖಿತವಾಗಿ ತಿಳಿಸಿ ಈ ನಾಡಿನ ರೈತರನ್ನು ತೊಂದರೆಗೆ ಸಿಲುಕಿಸಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳೊಳಗಾಗಿ ಕಳಸಾ ಬಂಡೂರಿ ಯೋಜನೆ ಮಾಡಿ ಪೂರ್ಣಗೊಳಿಸಲಾಗುವುದು. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ರೈತರು ಮಾಡಿದ ಸಾಲಮನ್ನಾ ಮಾಡಲಾಗುವುದು. 1 ಲಕ್ಷ ಕೋಟಿ ರೂ ಹಣವನ್ನು ರಾಜ್ಯದ ಸಮಗ್ರ ನೀರಾವರಿ ಯೋಜನೆಗಳಿಗೆ ಬಳಸಲಾಗುವುದು. ವೃದ್ಯಾಪವೇತನ ಮತ್ತು ವಿಧವಾ ವೇತನ ಹಾಗೂ ಭಾಗ್ಯ ಲಕ್ಷ್ಮೀ ಯೋಜನೆಯ ಸೌಲಭ್ಯದಲ್ಲಿ ಹೆಚ್ಚಳ, ರೈತರ ಪಂಪ್‌ಶೆಟ್‌ಗಳಿಗೆ ಉಚಿತ ವಿದ್ಯುತ್‌ ಸಂಪರ್ಕ, ಮಠ ಮಂದಿರಗಳ ಅಬಿವೃದ್ದಿಗೆ ಅನುದಾನ, ಭಾಗ್ಯಲಕ್ಷೀ ಯೋಜನೆಗೆ ಸರ್ಕಾರ ಬಿಡುಗಡೆಗೊಳಿಸುವ ಅನುದಾನದಲ್ಲಿ ಮುಸ್ಲೀಂ ಮಹಿಳೆಯರಿಗೆ ಶೇ. 30 ರಷ್ಟು ಹೆಚ್ಚಿನ ಸೌಲಭ್ಯ ನೀಡಲಾಗುವುದು. ಆಲಮಟ್ಟಿ ಡ್ಯಾಮ ಆನೇಕಟ್ಟು ಏರಿಕೆ ಮಾಡಲಾಗುವುದು. ಎ. 30 ರಂದು ಬಿಜೆಪಿ ಚುನಾವಣೆ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಇದರಲ್ಲಿ ರೈತರಿಗೆ ಹೆಚ್ಚಿನ ಆಧ್ಯತೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್‌ ಅಡಳಿತ ಸರಿಯಾಗಿಲ್ಲ. ಅಂಬೇಡ್ಕರರನ್ನು ಪ್ರಧಾನಿಯಾಗಿ ಮಾಡಲು ಕಾಂಗ್ರೆಸ್‌ ವಿರೋಧಮಾಡಿದ್ದನ್ನು ಇನ್ನು ಭಾರತೀಯ ಜನತೆ ಮರೆತಿಲ್ಲ. ಹೀಗಾಗಿ ಕಾಂಗ್ರೆಸ್ಸಿಗೆ ಜನ ಬುದ್ದಿಕಲಿಸಲಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಮಲಪ್ರಭೆ ಕಾಲುವೆ ನವೀಕರಣ ಕಾಮಗಾರಿ ಗುತ್ತಿಗೆಯಲ್ಲಿ ಕಾಂಗ್ರೆಸ್‌ ಸರಿಯಾಗಿ ನಡೆದುಕೊಂಡಿಲ್ಲ. ಮೊದಲು 400 ಕೋಟಿ ನಂತರ ಅದನ್ನು ಪರಿವರ್ತಿಸಿ 1100 ಕೋಟಿ ಅನುದಾನ ಇದಕ್ಕಾಗಿ ಬಳಸಲು ನಾಟಕವಾಡಿ ಲಕ್ಷಾಂತರ ರೂ ಕಾಂಗ್ರೆಸ್‌ ಸರ್ಕಾರ ಕಮೀಷನ್‌ ರೂಪದಲ್ಲಿ ಇದರಲ್ಲಿ ಕೊಳ್ಳೆಹೊಡೆದಿದೆ ಎಂದು ಅವರು ಟೀಕಿಸಿದರು. ಬಿಜೆಪಿ ಸರ್ಕಾರದಲ್ಲಿ ತಂದ ಸುವರ್ಣಯೋಜನೆಯನ್ನು ಕಾಂಗ್ರೆಸ್‌ ಸರ್ಕಾರ ಕೈಬಿಟ್ಟು ರೈತರಿಗೆ ಹಾಗೂ ನಾಡಿನ ಜನತೆಗೆ ಅನ್ಯಾಯ ಮಾಡಿತು. ಬಿಜೆಪಿ ಸರ್ಕಾರ ಪ್ರತಿ ತಾಲೂಕಿಗೆ ಕೆರೆ ಹೂಳೆತ್ತಲು 5 ಕೋಟಿ ರೂ ಬಿಡುಗಡೆಗೊಳಿಸಿದ್ದನ್ನು ಕಾಂಗ್ರೆಸ್‌ ಸರ್ಕಾರ ನಿರ್ಲಕ್ಷಮಾಡಿ ರೈತರನ್ನು ಬೇಸಾಯದಿಂದ ವಂಚಿತಗೊಳಿಸಿತುಎಂದು ರಾಜ್ಯ ಸರ್ಕಾರದ ನೀತಿಗಳನ್ನು ಲೇವಡಿ ಮಾಡಿದರು.
ನರಗುಂದಕ್ಕೆ ಮಧ್ಯಾಹ್ನ 2.30 ಕ್ಕೆ ಹೆಲಿಕಾಪ್ಟರ್‌ ಮೂಲಕ ಆಗಮಿಸಿದ ಬಿ.ಎಸ್‌. ಯಡಿಯೂರಪ್ಪ ನಂತರ ಬಿಜೆಪಿ ಹೊರಡಿಸಿದ ರೋಡ ಶೋಷದಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಯುವ ಮಾರ್ಚಾ ಕಾರ್ಯಕರ್ತರು ಬೃಹತ್‌ ಹೂಮಾಲೆ ಯಡಿಯೂರಪ್ಪ ಹಾಗೂ ಸಿ.ಸಿ. ಪಾಟೀಲ ಅವರಿಗೆ ಹಾಕಿ ಅಭಿನಂದಿಸಿದರು.
ಸಂಸದ ಶಿವಕುಮಾರ ಉದಾಸಿ, ಬಿ.ಕೆ. ಗುಜಮಾಗಡಿ, ವಸಂತ ಜೋಗಣ್ಣವರ, ಎ.ಎಂ ಹುಡೇದ, ಎಂ.ಎಸ್‌. ಪಾಟೀಲ, ವಿ.ಎಸ್‌. ಹಿರೇಮಠ, ವಿಠಲ ಹವಾಲ್ದಾರ, ಅನಿಲ ಧರೆಯಣ್ಣವರ, ಎಸ್‌.ಆರ್‌. ಹಿರೇಮಠ, ಬಿ.ಬಿ. ಐನಾಪೂರ, ಅಶೋಕ ಹೆಬ್ಬಳ್ಳಿ, ಎಂ.ಐ. ಮೇಟಿ, ಉಮೇಶ ಯಳ್ಳೂರ, ರಾಜು ಪಾಟೀಲ. ಎಸ್‌.ಬಿ. ಕರಿಗೌಡ್ರ, ಅಜ್ಜು ಪಾಟೀಲ, ಶಿವಾನಂದ ಮುತವಾಡ, ಚಂದ್ರು ಪವಾರ, ಅಶೋಕ ಪತ್ರಿ, ಶೈಲಾ ನರಗುಂದ, ಮಲ್ಲವ್ವ ಗುಂಜಾಳ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಅಜ್ಜು ಪಾಟೀಲ ನಿರ್ವಹಿಸಿದರು.

loading...