ಕಾಂಗ್ರೆಸ್ ಅಧಿಕಾರದಲ್ಲಿ ರೈತರ ಆತ್ಮಹತ್ಯೆ ಹೆಚ್ಚಿದೆ: ಅಮಿತ್ ಷಾ

0
23
loading...

ಕನ್ನಡಮ್ಮ ಸುದ್ದಿ-ನರೇಗಲ್ಲ : ಮುಷ್ಟಿ ಧಾನ್ಯ ಸಂಗ್ರಹ ರೈತರ ಕಲ್ಯಾಣದ ಸಂಕೇತವಾಗಿದೆ. ನರೇಂದ್ರ ಮೋದಿ ರೈತಸ್ನೇಹಿ ಪ್ರಧಾನಮಂತ್ರ್ರಿ. ರೈತರು ಬೆಳೆಯಲು ಖರ್ಚು ಮಾಡುವ ಒಂದೂವರೆಪಟ್ಟು ಹಣ ಬೆಳೆಗಳಿಗೆ ಸಿಗಬೇಕು. ಕೇಂದ್ರ ಸರ್ಕಾರ ರಾಜ್ಯದ ನೀರಾವರಿ ಯೋಜನೆಗೆ ಸಾಕಷ್ಟು ಹಣ ನೀಡಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದರು.

ಸಮೀಪದ ಅಬ್ಬಿಗೇರಿ ಗ್ರಾಮದ ಅನ್ನದಾನೇಶ್ವರ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಜರುಗಿದ ಮುಷ್ಟಿ ಧಾನ್ಯ ಸಂಗ್ರಹ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 3500 ರೈತರು ಆತ್ಮಹತ್ಯೆ ಮಾಡಿಕೊಂಡಿರೂ ಕರ್ನಾಟಕ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ನಿದ್ದೆ ಮಾಡುತ್ತಿದ್ದಾರೆ. ಬಿಜೆಪಿ ಆಡಳಿದಲ್ಲಿರುವ ಗುಜರಾತ್, ಮಧ್ಯಪ್ರದೇಶ, ಛತ್ತೀಸಗಢದಲ್ಲಿ ದೇಶದಲ್ಲಿಯೇ ಅತೀ ಕಡಿಮೆ ರೈತರು ಆತ್ಮಹತ್ಯೆಯಾಗಿದೆ. ಕಾಂಗ್ರೆಸ್ ಅಧಿಕಾರವಿದ್ದಲ್ಲಿ ರೈತರ ಆತ್ಮಹತ್ಯೆ ಹೆಚ್ಚು, ಬಿಜೆಪಿ ಅಧಿಕಾರವಿದ್ದಲ್ಲಿ ರೈತರ ಆತ್ಮಹತ್ಯೆ ಕಡಿಮೆ ಎಂದರು. ಸಿದ್ದರಾಮಯ್ಯ ನಲ್ವತ್ತು ಲಕ್ಷ ರೂಪಾಯಿಯ ವಾಚ್ ಕಟ್ಟಿಕೊಂಡು ತಿರುಗಾಡುತ್ತಾರೆ. ಸಿದ್ದರಾಮಯ್ಯ ನಿಮ್ಮ ಬಳಿ ಬಂದರೆ ನಲ್ವತ್ತು ಲಕ್ಷ ರೂಪಾಯಿ ವಾಚ್ ಅನ್ನು ಯಾರು, ಯಾಕೆ, ಯಾವ ಕೆಲಸಕ್ಕೆ ಕೊಟ್ಟರು ಎಂದು ಕೇಳಿ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಅಮಿತ್ ಷಾ ಆರೋಪಿಸಿದರು.

ನರೇಂದ್ರ ಮೋದಿಯವರ ಸರ್ಕಾರ ವಿದ್ಯುತ್ ಉತ್ಪಾದಿಸುವ ಕಾರ್ಖಾನೆಯಿದ್ದಂತೆ. ರಾಜ್ಯ ಸರ್ಕಾರ ವಿದ್ಯುತ್ ಪೂರೈಸುವ ಟ್ರಾನ್ಸ್‍ಫಾರ್ಮರ್. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಟಿಸಿ ಸುಟ್ಟು ಹೋಗಿದೆ. ಟಿಸಿ ಬದಲಾಯಿಸಿ ಬಿಜೆಪಿ ಸರ್ಕಾರ ತರಬೇಕಾಗಿದೆ ಎಂದು ಅವರು ಹೇಳಿದರು. ರಾಹುಲ್ ಬಾಬಾ ಕರ್ನಾಟಕಕ್ಕೆ ಬಂದಾಗ ನರೇಂದ್ರ ಮೋದಿ ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನಮಗೆ ಸಿದ್ದರಾಮಯ್ಯ ಮತ್ತು ರಾಹುಲ್ ಬಾಬಾಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ. ಕರ್ನಾಟಕದ ಜನರಿಗೆ ಪೈಸೆ ಪೈಸೆ ಲೆಕ್ಕ ಕೊಡಲು ನಾನು ಬಂದಿದ್ದೇನೆ ಎಂದರು.
ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ 2ಲಕ್ಷ 19 ಸಾವಿರ ಕೋಟಿ ರೂಪಾಯಿ ಕೊಟ್ಟಿದೆ. ಜನ ಕಲ್ಯಾಣಕ್ಕೆ 116 ಯೋಜನೆಗಳನ್ನು ಜಾರಿಗೆ ತರಲಾಗಿದೆ. ನೀವು ಕೊಟ್ಟ ಮುಷ್ಟಿ ಅಕ್ಕಿಯನ್ನು ಬೇಯಿಸಿ ನಾವೆಲ್ಲ ಊಟ ಮಾಡುತ್ತೇವೆ. ನಿಮ್ಮ ಧಾನ್ಯ ರಕ್ತವಾಗಿ ನಮ್ಮ ಮೈಯಲ್ಲಿ ಹರಿಯುತ್ತೆ. ನಿಮ್ಮ ಋಣ ತೀರಿಸುವ ಕೆಲಸವನ್ನು ನಮ್ಮ ಬಿಜೆಪಿ ಪ್ರತಿಯೊಬ್ಬರು ಮಾಡುತ್ತೇವೆ ಎಂದು ತಿಳಿಸಿದರು.

ವೇದಿಕೆ ಮೇಲೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಸಚಿವ ಸಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಪ್ರಲ್ಹಾಧ ಜೋಶಿ, ವಿಧಾನ ಪರಿಷತ ಸದಸ್ಯ ಎಸ್.ವಿ. ಸಂಕನೂರ, ಸಂತೋಷ ಜಿ ಸೇರಿದಂತೆ ಬಿಜೆಪಿ ಮುಂಖಡರು ಉಪಸ್ಥಿತರಿದ್ದರು. ಮಾಜಿ ಸಚಿವ ಕಳಕಪ್ಪ ಬಂಡಿ ನಿರ್ವಹಿಸಿದರು.

loading...