ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ: ಕಾರ್ಯಕರ್ತರ ಆಕ್ರೋಶ

0
41
????????????????????????????????????
loading...

ಗೋಕಾಕ: ಅರಭಾವಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ದೀಡಿರನೇ ಅರವಿಂದ ದಳವಾಯಿ ಅವರನ್ನು ಘೋಷಣೆ ಮಾಡಿರುವ ಬೆನ್ನಲ್ಲೆ ಅರಭಾವಿ ಕಾಂಗ್ರೆಸ್ ವಲಯದಲ್ಲಿ ಅತೃಪ್ತಿಯ ಹೊಗೆ ಕಾಣಿಸಿಕೊಂಡಿದೆ. ನಿಷ್ಠಾವಂತ ಕಾರ್ಯಕರ್ತರು ಪಕ್ಷದ ವರಿಷ್ಠರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸೋಮವಾರದಂದು ನಗರದ ಡಾಲರ್ಸ ಕಾಲನಿಯಲ್ಲಿ ಕಾಂಗ್ರೇಸ್ ಕೌಜಲಗಿ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ ಅವರ ನೇತ್ರತ್ವದಲ್ಲಿ ಸೇರಿದ ಕಾರ್ಯಕರ್ತರು ಅರವಿಂದ ದಳವಾಯಿ ಅವರ ಉಮೇದುವಾರಿಕೆಯನ್ನು ಪ್ರಶ್ನಿಸಿದ್ದಾರೆ. ಮೂಲತಃ ಕೌಜಲಗಿಯವರಾದ ದಳವಾಯಿ ಅವರು ಕಾಂಗ್ರೇಸ್ ಪ್ರಾಥಮಿಕ ಸದಸ್ಯತ್ವವನ್ನೂ ಹೊಂದಿಲ್ಲಾ.ಇದಕ್ಕೂ ಮುನ್ನ ದಳವಾಯಿ ಜೆಡಿಎಸ್-ಜೆಡಿಯು ಸೇರಿದಂತೆ ಮನಸ್ಸಿಗೆ ಬಂದಂತೆ ಪಕ್ಷಗಳನ್ನು ಬದಲಾಯಿಸಿದ್ದಾರೆ.

ಇವರನ್ನು ಕಾಂಗ್ರೆಸ್ ಪಕ್ಷ ವರಿಷ್ಠರು ಯಾವ ಆಧಾರದ ಮೇಲೆ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರು ಎಂಬುದು ತಿಳಿಯುತ್ತಿಲ್ಲ. ಈ ಹಿಂದೆ ಅರಭಾಂವಿ ಹಾಗೂ ರಾಮದುರ್ಗ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಿ ಸೋತು ಠೇವಣಿ ಕಳೆದುಕೊಂಡಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರಾಗಲೂ ಅರ್ಹತೆ ಇರದ ಇಂತಹ ವ್ಯಕ್ತಿಗೆ ಪಕ್ಷದ ಟೀಕೇಟ್ ನೀಡಿರುವದು. ನಿಷ್ಠಾವಂತರಲ್ಲಿ ಅಸಮಾಧಾನ ಮೂಡಿದೆ ಎಂದು ಅರಭಾಂವಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಭರಮಣ್ಣ ಉಪ್ಪಾರ ಖಂಡಿಸಿದ್ದಾರೆ.

ಸಚಿವ ಜಾರಕಿಹೊಳಿ ಸಂಪರ್ಕಿಸಿ ಮುಂದಿನ ನಿರ್ಧಾರ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.
ಸಭೆಯಲ್ಲಿ ಡಿಸಿಸಿ ಸದಸ್ಯ ಸುನೀಲ ಯತ್ತಿನಮನಿ, ಅರಭಾಂವಿ ಬ್ಲಾಕ್ ಪ್ರಚಾರ ಸಮೀತಿ ಅಧ್ಯಕ್ಷ ಸಿದ್ದಣ್ಣ ಮುಂಡಿಗನಾಳ, ಪ್ರಭಾ ಶುಗರ ನಿರ್ದೇಶಕ ಮಲ್ಲಿಕಾರ್ಜುನ ಕಬ್ಬೂರ, ಕೆಪಿಸಿಸಿ ಸದಸ್ಯ ಅಡಿವೆಪ್ಪ ಕಂಕಾಳಿ ಸೇರಿದಂತೆ ಬ್ಲಾಕ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...