ಕಾಂಗ್ರೆಸ್ ಅಭ್ಯರ್ಥಿ ಶ್ರೀಮಂತ ಪಾಟೀಲ ಆಯ್ಕೆಗೆ ಹರ್ಷ

0
34
loading...

ಕಾಗವಾಡ 15: ಕಾಗವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಶ್ರೀಮಂತ ಪಾಟೀಲ(ತಾತ್ಯಾ) ಇವರನ್ನು ಆಯ್ಕೆ ಮಾಡಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಹರ್ಷ ಮೂಡಿಸಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಎಲ್ಲಡೆ ಬೆಂಬಲ ವ್ಯಕ್ತವಾಗುತ್ತಿದ್ದು, ಕಳೆದ ಅನೇಕ ವರ್ಷಗಳ ಆಸೆ ಮತದಾರರು ಈಡೇರಿಸುತ್ತಾರೆ ಎಂದು ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ ಹೇಳಿದರು.

ಕೆಂಪವಾಡದ ಅಥಣಿ ಫಾರ್ಮರ್ಸ್ ಸಕ್ಕರೆ ಕಾರ್ಖಾನೆಯ ಸಭಾಂಗಣದಲ್ಲಿ ಕಾಗವಾಡ ಕ್ಷೇತ್ರದ 5 ಜಿಪಂ ವ್ಯಾಪ್ತಿಯಲ್ಲಿ ಬರುವ ಜಿಪಂ, ತಾಪಂ, ಚುನಾಯಿತ ಸದಸ್ಯರು ಪಕ್ಷದ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿದ್ದರು. ಈ ಸಭೆಯಲ್ಲಿ ಕಿರಣಕುಮಾರ ಪಾಟೀಲ ಮಾತನಾಡಿದರು.

ಕಾಗವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಒಳ್ಳೆ ಆಭ್ಯರ್ಥಿ ನೀಡಿದ್ದರಿಂದ, ಪಕ್ಷಕ್ಕೆ ಯಶ ಖಚಿತವಾಗಿದೆ ಎಂದು ಪಕ್ಷದ ಮುಖಂಡರಾದ ವಿಜಯ್ ಅಕ್ಕಿವಾಟೆ, ಚಂದ್ರಕಾಂತ ಇಮ್ಮಡಿ, ಮಹಾದೇವ ಕೋರೆ, ರವೀಂದ್ರ ಗಾಣಿಗೇರ, ದಾದಾ ಪಾಟೀಲ, ಆರ್.ಎಮ್.ಪಾಟೀಲ, ಜೋತಿಕುಮಾರ ಪಾಟೀಲ, ದಾದಾ ಶಿಂಧೆ, ವಿಶ್ವನಾಥ ಪಾಟೀಲ, ರಾಮ ಸೊಡ್ಡಿ, ಅಮೀತ ದಿಕ್ಷಾಂತ್ ಸೇರಿದಂತೆ ಅನೇಕ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಶ್ರೀಮಂತ ಪಾಟೀಲರಿಗೆ ಅಭಿನಂದನೆ ಸಲ್ಲಿಸಿದರು.

ಶ್ರೀಮಂತ ಪಾಟೀಲ ಮಾತನಾಡಿ, ಕಾಂಗ್ರೆಸ್ ವರಿಷ್ಠರು ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ನನ್ನನ್ನು ಕಾಗವಾಡ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅವರೆಲ್ಲರಿಗೂ ನಾನು ಋಣಿಯಾಗಿದ್ದೇನೆ. ನಿಮ್ಮೆಲ್ಲರ ಅಭೂತಪೂರ್ವ ಬೆಂಬಲದಿಂದ ಮುಂಬರುವ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ವಿಜಯಶಾಲಿಯಾಗುವುದಾಗಿ ಭರವಸೆ ವ್ಯಕ್ತಪಡಿಸಿದರು.

ಪಕ್ಷಕ್ಕೆ ಸೇರ್ಪಡೆ: ಕಾಗವಾಡ ಕ್ಷೇತ್ರದ ಹನಪಾಪುರ ಗ್ರಾಮದಲ್ಲಿಯ ಬಿಜೆಪಿ ಪಕ್ಷದ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷದಲ್ಲಿ ಸೇರ್ಪಡೆಗೊಂಡರು. ಇದರಲ್ಲಿ ಹಾಲಪ್ಪಾ ಮೆತ್ರಿ, ಮಲ್ಕರಿ ಪೂಜಾರಿ, ರೇವಣ್ಣಾ ಪೂಜಾರಿ, ಕುಮಾರ ಮೆತ್ರಿ, ಬಾಳಪ್ಪಾ ಯನಿಗೇರ, ಪರ್ಸು ಮೆತ್ರಿ, ಮಾರುತಿ ಕೇಂಪವಾಡೆ, ಜನಾರ್ಧನ ಧೋಂಡಾರೆ(ಕಾಗವಾಡ) ಇವರಿಗೆ ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ ಪಕ್ಷದ ಧ್ವಜ್ ನೀಡಿ ಬರ ಮಾಡಿಕೊಂಡರು.

loading...