ಕಾಂಗ್ರೆಸ್ ಆಡಳಿತದಲ್ಲಿ ಮತಕ್ಷೇತ್ರದ ಅಭಿವೃದ್ಧಿ ಹಿನ್ನಡೆ: ಹೇಮಗಿರಿಶ

0
18
loading...

ಮುಂಡರಗಿ: ಕಾಂಗ್ರೆಸ್ ಆಡಳಿತದಲ್ಲಿ ಶಿರಹಟ್ಟಿ ಮತಕ್ಷೇತ್ರದ ಅಭಿವೃದ್ಧಿ ಸಂಪೂರ್ಣವಾಗಿ ಹಿನ್ನಡೆ ಸಾಧಿಸಿದ್ದು, ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಯೋಜನೆಯ ಬ್ಯಾರೇಜಿನಲ್ಲಿ ನೀರಿದ್ದರೂ ತಾಲ್ಲೂಕಿನ ಜನತೆ ನದಿ ನೀರಿನಿಂದ ವಂಚಿತರಾಗಬೇಕಾಗಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹೇಮಗಿರಿಶ ಹಾವಿನಾಳ ದೂರಿದರು.

ಪಟ್ಟಣದ ಬೃಂದಾವದ ವೃತ್ತದ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಶನಿವಾರ ಏರ್ಪಸಿದ್ದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ತುಂಗಭದ್ರಾ ನದಿ ಹರಿಯುತ್ತಿದ್ದು, ಗದಗ, ಕೊಪ್ಪಳ, ಹೂವಿನಹಡಗಲಿ ಮೊದಲಾದ ತಾಲ್ಲೂಕುಗಳ ಜನತೆ ನಿತ್ಯ ನದಿ ನೀರನ್ನು ಕುಡಿಯುತ್ತಿದ್ದಾರೆ. ಆದರೆ ಇಲ್ಲಿಯ ಕಾಂಗ್ರೆಸ್ ಶಾಸಕರ ಬೇಜವಾಬ್ದಾರಿಯಿಂದ ತಾಲ್ಲೂಕಿನ ಜನತೆ ನದಿ ಇದ್ದರೂ ನೀರಿಲ್ಲದಂತಾಗಿದೆ. ಆ ಮೂಲಕ ಕಾಂಗ್ರೆಸ್ ಶಾಸಕರು ಜನತೆಗೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದರು.

ಮಾಜಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ಮಾತನಾಡಿ, ರಾಜ್ಯದೆಲ್ಲಡೆ ಬಿಜೆಪಿ ಗಾಳಿ ಬೀಸುತ್ತಲಿದೆ. ಕೇಂದ್ರ ಸರಕಾರದಲ್ಲಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಕಾರ್ಯಕ್ರಮಗಳು ಜನಪ್ರೀಯವಾಗಿದ್ದು, ಜಗತ್ತಿನಾಧ್ಯಂತ ದೇಶದ ಅಭಿವೃದ್ಧಿಯ ಚರ್ಚೆಗಳಾಗುತ್ತಿವೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯುವುದು ನಿಚ್ಚಳವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯುವ ಮುಖಂಡ ಕುಮಾರಸ್ವಾಮಿ ಹಿರೇಮಠ ಮಾತನಾಡಿ ಕಳೆದ ಅವಧಿಯಲ್ಲಿ ರಾಮಣ್ಣ ಲಮಾಣಿ ಅವರು ಕೈಗೊಂಡಿದ್ದ ಜನಪರ ಕಾರ್ಯಕ್ರಮಗಳನ್ನು ಜನತೆ ಮರೆತಿಲ್ಲ. ಪ್ರಸ್ತುತ ಚುನಾವಣೆಯಲ್ಲಿ ಅವರು ಅಭೂತ ಪೂರ್ವ ಗೆಲುವು ಸಾಧಿಸಲಿದ್ದಾರೆ. ರಾಮಣ್ಣ ಲಮಾಣಿಯವರ ಜನಪ್ರೀಯತೆಯ ಮುಂದೆ ಶಿರಹಟ್ಟಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬೆಣ್ಣಿಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ತಿಪ್ಪಣ್ಣ ಕುಂಬಾರ ಹಾಗೂ ಸಂಗಡಿಗರು ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರಿದರು.
ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಬಿಳಿಮಗ್ಗದ, ರೈತ ಮೋರ್ಚಾ ಅಧ್ಯಕ್ಷ ಶಿವನಗೌಡ್ರ ಗೌಡ್ರ, ಎಪಿಎಂಸಿ ಸದಸ್ಯ ರವಿ ಉಪ್ಪಿನಬೆಟಗೇರಿ, ಮುಖಂಡರಾದ ರಮೇಶ ಹುಳಕಣ್ಣವರ, ಆನಂದಗೌಡ ಪಾಟೀಲ, ಬಸವರಾಜ ರಾಮೇನಹಳ್ಳಿ, ಪ್ರಭು ಅಬ್ಬಿಗೇರಿ, ಶಿವು ನಾಡಗೌಡರ, ಕೊರಡಕೇರಿ, ಕೊಪ್ಪಣ್ಣ ಕೊಪ್ಪಣ್ಣವರ, ಮುದಕಪ್ಪ ಕುಂಬಾರ, ಮಂಜುನಾಥ ಪಾಟೀಲ, ಬಸವರಾಜ ನರೇಗಲ್ಲ, ವಿಜಯಕುಮಾರ ಶೀಳ್ಳಿನ, ಪರಶುರಾಮ ಕರಡಿಕೊಳ್ಳ ಮೊದಲಾದವರು ಹಾಜರಿದ್ದರು.

loading...