ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

0
12
loading...

ಕನ್ನಡಮ್ಮ ಸುದ್ದಿ-ನರಗುಂದ: ತಾಲೂಕಿನ ಕಪ್ಪಲಿ ಹಾಗೂ ಶಿರೋಳದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿಗೆ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಸಿ. ಪಾಟೀಲ ಅವರ ಸಮ್ಮುಖದಲ್ಲಿ ಶುಕ್ರವಾರ ಸೇರ್ಪಡೆಗೊಂಡರು.

ಸಿ.ಸಿ.ಪಾಟೀಲ ಅವರ ಪಟ್ಟಣದ ನಿವಾಸದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಶಾಲು ಹೊದಿಸಿ ಬಿಜೆಪಿಗೆ ಸ್ವಾಗತಿಸಲಾಯಿತು.
ಶಿರೋಳದ ನಾಗಯ್ಯ ಹೊಸಮನಿ, ಬಸವರಾಜ ಮಡಿವಾಳರ, ರಮೇಶ ಅರಮನಿ, ಯಲ್ಲಪ್ಪ ರೋಣದ, ಶಂಕ್ರಪ್ಪ ನಿಂಗರಡ್ಡಿ, ಸುರೇಶ ಮಡಿವಾಳರ, ರಾಮಪ್ಪ ಮಡಿವಾಳರ, ಶಂಕ್ರಪ್ಪ ನಿಂಗರಡ್ಡಿ, ಯಲ್ಲಪ್ಪ ನಾಯ್ಕರ್, ರಾಚಯ್ಯ ಪಟ್ಟಣಶೆಟ್ಟಿ, ಚಿಕ್ಕನರಗುಂದ ಚಂದ್ರ, ಮಲ್ಲಪ್ಪ ಕಿತ್ತಲಿ, ಬಸವರಾಜ ಹೂಗಾರ ಹಾಗೂ ಶಿವಕುಮಾರ ಈಟಿ ಮತ್ತು ಕಪ್ಪಲಿ ಗ್ರಾಮದ ಸೋಮಪ್ಪ ಚಲವಾದಿ, ಮುತ್ತನಗೌಡ ಅದರಗುಂಚಿ, ಶಿವಪ್ಪ ಉಮಚಗಿ, ತಮ್ಮನಗೌಡ ಕೊಣ್ಣುರ, ಸಂಗಮೇಶ, ಬಸಪ್ಪ ಚಿಕ್ಕನರಗುಂದ, ಭರಮ್ಮಪ್ಪ ಚಲವಾದಿ, ಸುನೀಲ ಮಾದರ, ಪ್ರದೀಪ ಪಾಟೀಲ, ಕಳಕಪ್ಪ ಆಶೇದಾರ, ಮಂಜು ಸೊಪ್ಪಿನ, ಬಸವರಾಜ ಚಲವಾದಿ, ಹನುಮಂತ ಕರಮಡಿ, ಸಂಗಮೇಶ ಹಿರೇಮಠ, ಯಲ್ಲಪ್ಪ ತೆಗ್ಗಿ, ದ್ಯಾವನಗೌಡ ಕಲ್ಮೇಶಗೌಡ ಬಿಜೆಪಿ ಸೇರಿದ ಪ್ರಮುಖರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಂ.ಎಸ್. ಪಾಟೀಲ, ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಚಂದ್ರು ದಂಡಿನ, ಎ.ಎಂ. ಹುಡೇದ, ಬಿ.ಬಿ. ಐನಾಪುರ, ಈರಣ್ಣ ಹೊಂಗಲ, ಉಮೇಶಗೌಡ ಪಾಟೀಲ, ಅಜ್ಜು ಪಾಟೀಲ, ನಾಗರಾಜ ನೆಗಳೂರ, ಉಮೇಶ ಯಳ್ಳೂರ, ರವಿ ಹುಂಬಿ, ಬಸ್ಸು ಪಾಟೀಲ, ಮಹೇಶ ಹಟ್ಟಿ, ಸಂಗಪ್ಪ ಪೂಜಾರ, ಸುರೇಶ ಸಾತನ್ನವರ, ನಿಂಗಣ್ಣ ಗಾಡಿ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

loading...