ಕಾಂಗ್ರೆಸ್ ಕಾರ್ಯಕರ್ತರ ಚುನಾವಣೆ ಪ್ರಚಾರ

0
22
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ದೇವಗಿರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ನಡೆಸಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿರುವ ಶಾರದಾ ಮೋಹನ್ ಶೆಟ್ಟಿಯವರನ್ನು ಬೆಂಬಲಿಸಿ ಬಹುಮತದಿಂದ ಆರಿಸಿ ತರಬೇಕೆಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಮಹೇಶ ನಾಯ್ಕ ಮಾತನಾಡಿ, ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆದ ಸರ್ಕಾರ. ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಭರವಸೆಯನ್ನು ಈಡೆರಿಸಿದ್ದಾರೆ. ಇಂತ ಸರ್ಕಾರವನ್ನು ಪುನಃ ಆಯ್ಕೆ ಮಾಡಬೇಕಾದದ್ದು ನಮ್ಮ ಜವಾಬ್ದಾರಿ. ಆದರಂತೆ ಶಾರದಾ ಮೋಹನ್ ಶೆಟ್ಟಿ ಯವರ ಕೂಡ ಜನಾನುರಾಗಿಗಳು. ಇವರ ಅವಧಿಯಲ್ಲಿ ನಮ್ಮ ಭಾಗಕ್ಕೆ ಆಗಬೇಕಾದ ಅಭಿವೃದ್ದಿ ಕೆಲಸಗಳನ್ನು ನುಡಿದಂತೆ ಮಾಡಿಸಿಕೊಟ್ಟದಾರೆ. ಆ ಒಂದು ದಿಸೆಯಲ್ಲಿ ಅವರ ಪುನರ್ ಆಯ್ಕೆ ಅವಶ್ಯಕ ಇದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್ ನಾಯ್ಕ, ಪ್ರಮುಖರಾದ ರವಿಕುಮಾರ್ ಶೆಟ್ಟಿ, ತಾರಾ ಗೌಡ, ಸುರೇಖಾ ವಾರೆಕರ್, ಸಚಿನ್ ನಾಯ್ಕ, ನಾಗಪ್ಪ ಹರಿಕಂತ್ರ, ರವಿ ಅಂಬಿಗ, ಪಾಂಡು ಪಟಗಾರ, ಪಾಂಡು ಹರಿಕಂತ್ರ, ರಾಜು ಅಂಬಿಗ ದಿವಗಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...