ಕಾಂಗ್ರೆಸ್ ಕಾರ್ಯಕರ್ತರ ಬೂತ್ ಮಟ್ಟದ ಸಭೆ

0
13
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ಬರ್ಗಿ ಹಾಗೂ ಹೀರೆಗುತ್ತಿ ವ್ಯಾಪ್ತಿಯಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರ ಬೂತ್ ಮಟ್ಟದ ಸಭೆಯನ್ನು ನಡೆಸಿ ಮುಂಬರುವ ಚುನಾವಣೆಯ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಮೋಹನ ಶೆಟ್ಟಿ ಮಾತನಾಡಿ ನನಗೆ ಇನ್ನೊಂದು ಅವಧಿಗೆ ಕೆಲಸ ಮಾಡಲು ತಾವು ಸಹಕರಿಸಬೇಕು. ನನ್ನನ್ನು ಶಾಸಕಿಯಾಗಿ ಆಯ್ಕೆ ಮಾಡಿದರೆ ನಾನು ನಿಮಗಾಗಿ 5 ವರ್ಷ ದುಡಿಯುತ್ತೇನೆ ಎಂದರು. ನನ್ನ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಮಾಡಬೇಕಾದ ಅಭಿವೃದ್ದಿ ಕಾರ್ಯಗಳನ್ನು ಪಟ್ಟಿ ಮಾಡಿ, ಅದರಲ್ಲಿ ಮುಖ್ಯವಾಗಿ ರಸ್ತೆ, ಸೇತುವೆ, ಜಮೀನಿಗೆ ಉಪ್ಪು ನೀರು ನುಗ್ಗದಂತೆ ತಡೆಗೋಡೆ ನಿರ್ಮಾಣ, ಕುಡಿಯುವ ನೀರಿನ ಸರಬರಾಜು, ಇವೆಲ್ಲವನ್ನು ಶಾಸಕತ್ವದ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನ ಪಟ್ಟು ಅದರಂತೆ ಯಶಸ್ವಿಯಾಗಿದ್ದೆನೆ ಎಂದರು.

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿ ಎಲ್ ನಾಯ್ಕ ಮಾತನಾಡಿ, ಶಾಸಕರ ಸಾಧನೆ ಮತ್ತು ಸುಧಾರಣೆ ಅರಿತು ಮತ್ತೆ ಪುನಃ ಅವರನ್ನೇ ಈ ಕ್ಷೇತ್ರದ ಶಾಸಕರನ್ನಾಗಿ ಮಾಡಬೇಕೆಂದು ತಿಳಿಸಿದರು.
ಹೀರೆಗುತ್ತಿ ಘಟಕಾಧ್ಯಕ್ಷ ಜಗದೀಶ ಹರಿಕಂತ್ರ, ಪ್ರಮುಖರಾದ ತಾರಾ ಗೌಡ, ಸುರೇಖಾ ವಾರೆಕರ್, ಶಿವರಾಮ ಹರಿಕಂತ್ರ, ಸಂತೋಷ ನಾಯ್ಕ, ಹುಸೇನ್ ಶೇಖ್, ವೆಂಕಟೇಶ ನಾಯ್ಕ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

loading...